ಶಾರ್ವರಿ ಸಂವತ್ಸರದ ಜ್ಯೇಷ್ಟ ಕೃ.೩೦ ರವಿವಾರ, ತಾರೀಕು 21- 06- 2020 ರಂದು ಹಗಲು ಮೃಗಶಿರಾ ಮತ್ತು ಆರ್ದ್ರಾನಕ್ಷತ್ರ ಮಿಥುನ ರಾಶಿಯಲ್ಲಿ ಸೂರ್ಯನಿಗೆ ರಾಹುಗ್ರಹಣ ಸಂಭವಿಸಲಿದೆ.
ಗ್ರಹಣ ಸ್ಪರ್ಶ 10 ಘಂಟೆ 06 ನಿಮಿಷಗಳು
ಗ್ರಹಣ ಮಧ್ಯ 11 ಘಂಟೆ 38 ನಿಮಿಷಗಳು
ಗ್ರಹಣ ಮೋಕ್ಷ 01 ಘಂಟೆ 23 ನಿಮಿಷಗಳು
ಗ್ರಹಣದ ಆದ್ಯಂತ ಕಾಲ 3 ಘಂಟೆ 17 ನಿಮಿಷಗಳು
ದಕ್ಷಿಣಾಯಣನಾರಂಭ ಹಾಗೂ ಆರ್ದ್ರಾನಕ್ಷತ್ರ ಮಳೆ ಆರಂಭವಾಗುವ ದಿನದಂದು ಈ ಗ್ರಹಣ ಸಂಭವಿಸಲಿದೆ ಈ ದಿನದ ಅಮಾವಾಸ್ಯೆಯನ್ನು ಮಣ್ಣೆತ್ತಿನ ಅಮಾವಾಸ್ಯೆ ಎಂದು ಕರೆಯಾಲಾಗುತ್ತದೆ. ಈ ಗ್ರಹಣದಿಂದ ಮಿಥುನ ರಾಶಿಯೂ ಸೇರಿದಂತೆ ಮಕರ, ವೃಶ್ಚಿಕ ಹಾಗೂ ಕರ್ಕಟಕ ರಾಶಿಯವರಿಗೆ ಅರಿಷ್ಟವಿದೆ.
ಮಕ್ಕಳು ಹಾಗೂ ವೃದ್ಧರು ಪ್ರಾತಃಕಾಲ ಘಂಟೆ 5:30ರ ಒಳಗೆ ಆಹಾರ ಸೇವಿಸಬಹುದು. ಉಳಿದವರು ಗ್ರಹಣ ಮೋಕ್ಷಾನಂತರ ಸ್ನಾನ ಮಾಡಿ ಅಡುಗೆ ಮಾಡಿ ಆಹಾರ ಸೇವಿಸುವುದು ಉತ್ತಮ. ಅರಿಷ್ಟವಿರುವ ರಾಶಿಯವರು ಶಿವನ ದರ್ಶನ ಮಾಡಿದಲ್ಲಿ ಒಲಿತುಂಟಾಗುವುದು.
ಈ ಗ್ರಹಣದ ಫಲಾಫಲವನ್ನು ನೋಡುವುದಾದರೆ ಆರ್ದ್ರಾನಕ್ಷತ್ರದಲ್ಲಿ ಅಲ್ಪವೃಷ್ಟಿಯ ಮಳೆ ಸುರಿಯಲಿದೆ. ಗುಡುಗಿನಿಂದ ಕೂಡಿದ ಹಗುರ ಮಳೆಯಾಗಲಿದೆ. ಜುಲೈ ಅಂತ್ಯದಲ್ಲಿ ಉತ್ತರ ಭಾರತದ ಕೆಲವು ಕಡೆ ಪ್ರವಾಹ ಭೀತಿ ಕಂಡು ಬರಲಿದೆ. ವಾತಾವರಣದಲ್ಲಿ ಏರು ಪೇರು ಉಂಟಾಗಿ ಕೆಲವೊಂದು ರೋಗಗಳಿಂದ ಜೀವಿಗಳು ತೊಂದರೆಗೆ ಒಳಪಡಲಿದೆ.
✍ ಎಸ್ ಕೆ ಬಂಗಾಡಿ