January 18, 2025
kandani bodedi

ತುಲು ಭಾಷೆಯಲ್ಲಿ ಗಂಡ-ಹೆಂಡತಿಗೆ ಕಂಡನೆ-ಬುಡೆದಿ ಎನ್ನುತ್ತಾರೆ. ಈ ಸಣ್ಣ ಸಣ್ಣ ಎರಡು ಪದಗಳಲ್ಲಿ ಇನ್ನೂ ಕೆಲವು ಪದಗಳು ಸೇರಿರುತ್ತದೆ. ಡಿಫೈನ್ ಕಂಡನೆ-ಬುಡೆದಿ ಅಥವಾ ವ್ಯಾಖ್ಯಾನ ಮಾಡು ಎಂದು ಪ್ರಶ್ನಿಸಿದರೆ ಅದರ ಚಿತ್ರ ಸ್ಪಷ್ಟತೆ,ಲಕ್ಷಣಗಳು ಲಭಿಸುತ್ತದೆ.ಇದು ಬೇರೆ ಯಾವುದೇ ಭಾಷೆಗಳಲ್ಲಿ ಸಿಗಲಾರದು.

ಕಂಡನೆ ಪದವನ್ನು ನಿರೂಪಣೆ ಮಾಡಿದಾಗ ಈ ರೀತಿಯ ಪದಗಳು ಸಿಗುತ್ತದೆ ಮತ್ತು ಅದರ ಅರ್ಥಗಳು ಅದ್ಭುತವಾಗಿ ಇರುತ್ತದೆ.

ಇದರಲ್ಲಿರುವ ಪದಗಳು:
1)ಕಂಡ
2)ಆನ್
3)ಆನೆ

ಕಂಡ: ಕಂಡ ಎಂದರೆ ಹೊಲಗದ್ದೆಗಳು. ಬದುಕಿಗೆ ಜೀವನಕ್ಕೆ ಈತ ಈ ಭೂಮಿಯಲ್ಲಿ ದುಡಿಯುತ್ತಾನೆ. ತನ್ನ ಹೆಂಡತಿ ಮಕ್ಕಳ (ಬುಡೆದಿ ಜೋಕುಲು) ಭವಿಷ್ಯಕ್ಕೆ ಉತ್ತು ಬಿತ್ತಿ ತನ್ನ ಸಂಸಾರವನ್ನು ಸಾಕಬೇಕು. ಕಂಡ ಎಂದರೆ ವಿಶಾಲವಾದ ಭೂಮಿ. ವಿಶಾಲವಾದ ಭೂಮಿಯಲ್ಲಿ ಈತ ಎಲ್ಲೂ ತಿರುಗಾಡಬಹುದು. ಭೂಗೋಲದ ಎಲ್ಲಾ ಏಳು ಕಂಡ(ಖಂಡ) ಗಳಲ್ಲೂ ತಿರುಗಾಟ ಮಾಡಬಹುದು. ಏಕೆಂದರೆ ಕಂಡನೆ ಕಂಡ ಇದ್ದಂತೆ. ವಿಶಾಲವಾದ ಬೃಹ್ಮಾಂಡದಲ್ಲಿ ಹಕ್ಕಿಯಂತೆ ಸ್ವತಂತ್ರವಾಗಿ ಹಾರಾಡಬಹುದು. ಕಂಡನೆ ಈಸ್ ಎ ಫ್ರೀ ಬರ್ಡ್. ಇವನನ್ನು ಪ್ರಶ್ನಿಸುವವರು ಯಾರೂ ಇಲ್ಲ. ಕಡಲಿನಲ್ಲಿ ಈಜಾಡಬಹುದು. ಕಾಡಿನಲ್ಲಿ ತಿರುಗಾಡಲು ಹೋಗ ಬಹುದು. ಏಕೆಂದರೆ ಈತ ಗಂಡ( ಕಂಡನೆ). ಸಾಮಾನ್ಯ ಮನುಷ್ಯನಲ್ಲ.

ಆನ್: “ಕಂಡನೆ” ಪದದಲ್ಲಿ “ಆನ್ “ಪದವೂ ಸೇರಿರುತ್ತ ದೆ. “ಆನ್“ಎಂದರೆ ಗಂಡು,ಪುರುಷ ಎಂಬ ಅರ್ಥ. “ಆನ್” ಎಂದರೆ ಸೂಪರ್ ಎಂದರ್ಥ. ತಾನು ಗಂಡ ಎಂಬ ಗತ್ತು.

ಆನೆ: “ಕಂಡನೆ“ಎಂದರೆ ಆನೆ ಇದ್ದಂತೆ. ಬಲು ಬಲಿಷ್ಠವಾದ ಶಕ್ತಿ ಯುತ. ಧೈರ್ಯದಿಂದ ಸಂಸಾರವನ್ನು ಕೊಂಡೊಯ್ಯುವ ಗಂಡು. ಭೂಪತಿ ಗಂಡು.

ಬುಡೆದಿ: “ಅಪ್ಪೆ ಅಮ್ಮೆರೆನ್ ಬುಡುದು ಬರ್ಪುನಾಲೇ ಬುಡೆದಿ” (ತಂದೆ ತಾಯಿಯನ್ನು ಅಂದರೆ ಹೆತ್ತವರನ್ನು ಬಿಟ್ಟು ಬರು ವವಳೇ ಬುಡೆದಿ ಅಥವಾ ಬುಡೆತಿ”(ಹೆಂಡತಿ). ಅಪ್ಪೆ ಇಲ್ಲನ್ ಬುಡುದು ಕಂಡನೆನ ಬೂಡು ಸೇರ್ದ್ ಬೀಡ್ ಬುಡ್ಪುನನೇ ಬುಡೆದಿ.(ತವರು ಮನೆ ಬಿಟ್ಟು ಗಂಡನ ಮನೆ ಸೇರಿ ಸೆಟ್ಲ್ ಆಗುವುದೇ ಬುಡೆದಿ ಅಥವಾ ಬುಡೆತಿ. ಇಲ್ಲಿ “ದಿ“ಅಥವಾ “ತಿ“ಎಂದರೆ ತಾನು ಹೆಣ್ಣು ಎಂಬುದನ್ನು ಸೂಚಿಸುತ್ತದೆ. ಕಂಡನೆ ಎಂದರೆ ಹೊರಗಿನ ವ್ಯವಹಾರ ಮಾಡುವುದು ಮತ್ತು ಸಂಸಾರವನ್ನು ನಡೆಸುವಾತ. ಬುಡೆದಿ ಎಂದರೆ ಅವಳು ಮನೆಯ ಜವಾಬ್ದಾರಿ ಹೊತ್ತು ಮಕ್ಕಳ ಲಾಲನೆ ಪಾಲನೆ ಮಾಡುವುದು. ಸಾಕು ಪ್ರಾಣಿಗಳನ್ನು ಸಾಕಿ ಸಲಹುದು.

ತುಲುಭಾಷೆಯ ಪ್ರತಿ ಒಂದು ಪದಗಳಲ್ಲಿ ಹಲವು ಪದಗಳು ಸೇರಿ ಜೋಡಣೆ ಆಗಿರುತ್ತದೆ. ಪ್ರತಿಯೊಂದು ಪದಕ್ಕೂ ಬೇರೆ ಬೇರೆ ಅರ್ಥಗಳ ಸಮೂಹವೇ ಇರುತ್ತದೆ. ಆ ಕಾಲದಲ್ಲಿ ತುಲು ಭಾಷೆಯ ಪದಗಳನ್ನು ಅದೆಷ್ಟು ಜಾಗ್ರತರಾಗಿ ರಚಿಸಿದ್ದಾರೆ. ಎಷ್ಟೊಂದು ನಿಪುಣರಾಗಿದ್ದರು ನಮ್ಮ ಪೂರ್ವಜರು‌. ಎಷ್ಟೊಂದು ಭಾಷಾ ತಜ್ಞರು ಆಗಿದ್ದರು. ಅಲ್ಲವೇ?

ತುಲುವರು ತುಲು ಭಾಷೆಯ ಮೇಲೆ ಗಮನ ಹರಿಸಿರುವುದು ಸಾಲದು. ಸಂಶೋಧನಾ ಕೆಲಸಗಳು ನಡೆದಿಲ್ಲ. ಬದಲಾಗಿ ಬೂತಗಳು ಮತ್ತು ಅವುಗಳ ಸಂಖ್ಯೆಯ ಹೆಚ್ಚಳ,ಹೆಸರು ಬದಲಾವಣೆ,ಬೂತಗಳ ಕಟ್ಟು ಕತೆಗಳು,ಬೂತಗಳ ಪಾರಿ,ಸಂದಿ,ಬೀರ,ಪಾಡ್ದನ, ಬೂತಗಳ ನಾಟಕ,ಭಕ್ತಿ ಗೀತೆಗಳು,ಬೂತಸಾನಗಳಲ್ಲಿ ದೇವರ ಪೂಜೆಗಳು,ತುಲಾಭಾರ,ಹೂವಿನ ಪೂಜೆಗಳು, ತೀರ್ಥ ಹಂಚುವುದು ಇತ್ಯಾದಿ ಇತ್ಯಾದಿ ಹೊಸ ಹೊಸ ತಿರುವುಗಳು ಗಡದ್ದಾಗಿ ನಡೆಯುತ್ತಿದೆ. ತುಲು ಅಕಾಡೆಮಿ ಮತ್ತು ಮಾಧ್ಯಮಗಳು ಕೂಡಾ ಇದಕ್ಕೆ ಇನ್ನಷ್ಟು ಮೆರುಗು ಕೊಟ್ಟು ಜನರನ್ನು ಆಕರ್ಷಿಸುವ ಕೆಲಸ ಮಾಡುತ್ತಿದೆ. ಈ ಕೆಲಸಗಳಿಂದ ತುಲು ಭಾಷೆಯು ಶ್ರೀಮಂತ ಭಾಷೆ ಆಗುವುದಿಲ್ಲ. ಬದಲಾಗಿ ತುಲು ಭಾಷೆಯನ್ನು ಶ್ರೀಮಂತ ಗೊಳಿಸಲು ಸಂಶೋಧನಾ ಕೇಂದ್ರವನ್ನು ನಿರ್ಮಿಸುವ ಕೆಲಸ ನಡೆಯಬೇಕಿದೆ. ಉಳ್ಳವರು ನಾಗ|ಬೂತಗಳ ಕಟ್ಟೆ,ಸಾನ,ಗುಡಿ,ಗೋಪುರಗಳಿಗೆ ಖರ್ಚುಮಾಡುವ ಬದಲು ತುಲು ಭಾಷಾ ಸಂಶೋಧನಾ ಕೇಂದ್ರವನ್ನು ನಿರ್ಮಾಣ ಮಾಡಬಹುದು. ಈಗ ಬೇಕಾಗಿರುವುದು ದೈವಗಳ ಅಧ್ಯಯನ ಅಲ್ಲ. ಬದಲಾಗಿ ತುಲು ಭಾಷೆಯ ಅಧ್ಯಯನ. ದೈವಗಳ ಅಧ್ಯಯನ ಅಗತ್ಯವಿಲ್ಲ. ಅದೊಂದು ನಂಬಿಕೆ ಮತ್ತು ಆರಾಧನೆ ಮಾತ್ರ. ನಮ್ಮ ತುಲು ಭಾಷೆಯು ಇತರ ಭಾಷೆಯಂತೆ ಶ್ರೀಮಂತ ಭಾಷೆ ಆಗಲು ಆಳವಾದ ಅಧ್ಯಯನ ನಡೆಯಬೇಕಿದೆ. ನಿರಂತರವಾಗಿ ಚಿಂತನೆಯ ಕೆಲಸ ಆಗಬೇಕು.

Leave a Reply

Your email address will not be published. Required fields are marked *