
ಮಂಗಳೂರು ಪಡೀಲ್ ವೀರನಗರದ ಕನ್ನಿಕಾ ಎ. ಮರೋಳಿ ಪಿ.ಯು.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೇ ಸ್ಥಾನ.
ಮಂಗಳೂರು ತಾಲ್ಲೂಕು ಪಡೀಲ್ ವೀರನಗರದ ಶ್ರೀ ಅರುಣ್ ಕುಮಾರ್ ಮರೋಳಿ ಮತ್ತು ಶ್ರೀಮತಿ ಸಂಗೀತಾ ಜಿ.ಎಸ್. ದಂಪತಿಯ ಪುತ್ರಿ ಕು॥ ಕನ್ನಿಕಾ ಎ.ಮರೋಳಿ ಈ ಬಾರಿಯ ಪಿ.ಯು.ಸಿ. ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಏಳನೇ ಸ್ಥಾನ ಪಡೆದು 590 (98.3%) ಅತ್ಯುತ್ತಮ ಅಂಕದಿಂದ ಉತ್ತೀರ್ಣರಾಗಿರೊಂದಿಗೆ ಪೋಷಕರ ವಿದ್ಯಾಸಂಸ್ಥೆಯ ಸಮಾಜದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ ಈಕೆ ಮಂಗಳೂರು ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿ ಆಗಿರುತ್ತಾರೆ ಉನ್ನತ ವ್ಯಾಸಂಗದಲ್ಲಿ ಅತ್ಯುನ್ನತ ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರೈಸಿ ಪೋಷಕರ ಮತ್ತು ಸಮಾಜದ ಗೌರವ ಹೆಚ್ಚಿಸಿ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ