

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ತೆಂಕಿಲದ ವಿವೇಕನಗರದಲ್ಲಿರುವ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಜನವರಿ 13 ರಂದು ನಡೆದ ರಾಜ್ಯ ಮಟ್ಟದ ಅಂತರ ಶಾಲಾ ಕರಾಟೆ ಚಾಂಪಿಯನ್ ಷಿಪ್-2018 ರಲ್ಲಿ ಮಾಸ್ಟರ್ ನಿಶ್ಚಿತ್.ಎಸ್.ಭಂಡಾರಿ ಕಾಟಾ ಜೂನಿಯರ್ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಉಡುಪಿಯ ವಾದಿರಾಜ ರಸ್ತೆಯಲ್ಲಿರುವ ಶ್ರೀ ವಿದ್ಯೋದಯ ಶಾಲೆಯಲ್ಲಿ UKG ವ್ಯಾಸಂಗ ಮಾಡುತ್ತಿರುವ ನಿಶ್ಚಿತ್, ಉಡುಪಿಯ ಕೋಡಂಕೂರಿನ ಶ್ರೀ ಸಂತೋಷ್ ಭಂಡಾರಿ ಮತ್ತು ಶ್ರೀಮತಿ ದಿವ್ಯಾ ಸಂತೋಷ್ ಭಂಡಾರಿಯವರ ಸುಪುತ್ರ.
ಕರಾಟೆ ಗುರುಗಳಾದ ಶ್ರೀ ಗುರುಪ್ರಸಾದ್ ಗರಡಿಯಲ್ಲಿ ಅಭ್ಯಾಸ ಮಾಡಿ,ಎಳೆವಯಸ್ಸಿನಲ್ಲಿಯೇ ಹಿರಿಯ ಸಾಧನೆ ಮಾಡಿರುವ ಮಾಸ್ಟರ್ ನಿಶ್ಚಿತ್ ಭಂಡಾರಿಯವರು ಕರಾಟೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ. ಭಗವಂತನು ಅವರಿಗೆ ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭಹಾರೈಸುತ್ತದೆ.
-ಭಂಡಾರಿವಾರ್ತೆ.
