January 18, 2025
IMG-20171128-WA0021

ಸುಶಾಂತ್ ಮರೋಳಿ ಇವರು ನವೆಂಬರ್ 24 ರಿಂದ 26 ರ ವರೆಗೆ ಬೆಂಗಳೂರಿನ  ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನೆಡೆದ 35ನೇ ಬೂಡೋಕಾನ್ ಕರಾಟೆಯ ಇಂಡಿಯನ್ ನ್ಯಾಷನಲ್ ಕರಾಟೆ ಚಾಂಪಿಯನ್‌ಷಿ 2017 ರಲ್ಲಿ  ಕುಮಿಟೆಯಲ್ಲಿ  2ನೇ ಸ್ಥಾನ ಹಾಗು ಕಟಾದಲ್ಲಿ 3ನೇ ಸ್ಥಾನ ಪಡೆದಿರುತ್ತಾರೆ. ಕರಾಟೆಯಲ್ಲಿ ಬ್ರೌನ್ ಬೆಲ್ಟ್ ಹಂತ ತಲುಪಿರುವ ಇವರು ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದಾರೆ.

ಸುಜಿತ್ ಮರೋಳಿ ಇವರು ನವೆಂಬರ್ 24 ರಿಂದ 26 ರ ವರೆಗೆ ಬೆಂಗಳೂರಿನ ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನೆಡೆದ 35ನೇ ಬೂಡೋಕಾನ್ ಕರಾಟೆಯ ಇಂಡಿಯನ್ ನ್ಯಾಷನಲ್ ಕರಾಟೆ ಚಾಂಪಿಯನ್‌ಷಿಪ್‌-2017  ರಲ್ಲಿ ಕಟಾದಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಕರಾಟೆಯಲ್ಲಿ ಪರ್ಪಲ್ ಬೆಲ್ಟ್ ಹಂತ ತಲುಪಿರುವ ಇವರು ಮಂಗಳೂರಿನ ಶ್ರೀ ಶಾರದಾ ವಿದ್ಯಾಲಯದಲ್ಲಿ 5ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.

ಅನಿಲ್ ರಾಜ್ ಉಲ್ಲಾಳ  ಇವರ ಮಾರ್ಗದರ್ಶನದಲ್ಲಿ ಕರಾಟೆಯಲ್ಲಿ ಸಾಧನೆ ಮಾಡಿರುವ ಇವರು ನಮ್ಮ ಭಂಡಾರಿ ಕುಟುಂಬದವರಾದ ಮಂಗಳೂರಿನ ಶ್ರೀ ಸುದೇಶ್ ಮರೋಳಿ ಮತ್ತು ಶ್ರೀಮತಿ ಸುಮಿತಾಸುದೇಶ್ ಮರೋಳಿ ಯವರ ಮಕ್ಕಳು. ಸುಶಾಂತ್ ಮತ್ತು ಸುಜಿತ್ ಇವರು ಜೀವನದಲ್ಲಿ ಇನ್ನಷ್ಟು ಸಾಧನೆ ಮಾಡಲಿ.ಅವರು ಪೋಷಕರಿಗೆ ಮತ್ತು ಭಂಡಾರಿ ಸಮಾಜಕ್ಕೆ ಹೆಚ್ಚಿನ ಗೌರವ ತಂದು ಕೊಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

ಭಾಸ್ಕರ್ ಭಂಡಾರಿ. ಸಿ.ಆರ್. ಶಿರಾಳಕೊಪ್ಪ

1 thought on “ಭಂಡಾರಿ ಕರಾಟೆ ಸಹೋದರರು

Leave a Reply

Your email address will not be published. Required fields are marked *