
ಮಹಾರಾಷ್ಟ್ರ: ನಲ್ಲಸೋಪರ ಈಸ್ಟ್ ಸಂತ ಅಲೋಶಿಯಸ್ ಪ್ರೌಢಶಾಲೆ(ಸಂತ ಕ್ಸೇವಿಯರ್ಸ್ ಗ್ರೂಪ್ ಅಫ್ ಸ್ಕೂಲ್) ನ 5ನೇ ತರಗತಿ ವಿದ್ಯಾರ್ಥಿ ಆದಿ ಯಶವಂತ್ ಭಂಡಾರಿ ಅವರು ಆಂದೇರಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ 5ನೇ ನ್ಯಾಷನಲ್ ಕರಾಟೆ ಟೂರ್ನಮೆಂಟ್‌ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.
ಮೂಲತಃ ಮುಲ್ಕಿಯವರಾದ, ಪ್ರಸ್ತುತ ನಲ್ಲಸೋಪರ ಈಸ್ಟ್ ನಲ್ಲಿ ನೆಲೆಸಿರುವ ಯಶವಂತ ಎಂ.ಭಂಡಾರಿ ಹಾಗು ಚಿತ್ರಕಲಾ ವೈ.ಭಂಡಾರಿ ದಂಪತಿಯ ಪುತ್ರ ಆದಿ ತನ್ನ 7ನೇ ವಯಸ್ಸಿನಲ್ಲೇ ಕರಾಟೆ ಕಲಿಯಲು ಆರಂಭಿಸಿದ್ದರು. ಕರಾಟೆ ಅಕಾಡೆಮಿ ಆಫ್ ಶೊಟೊಕಾನ್ ನಲ್ಲಿ ಸಂತೋಷ್ ಎಸ್.ಚೌವಾಣ್ ಅವರಿಂದ ಕರಾಟೆ ಕಲಿಯುತ್ತಿದ್ದಾನೆ. ಈಗಾಗಲೇ 3 ಚಿನ್ನ, 4 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಪಡೆದು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.
ವರದಿ: ಶ್ರೀಪಾಲ್ ಭಂಡಾರಿ, ನೆಲ್ಯಾಡಿ
ಕಿರಣ್ ಸರಪಾಡಿ, ಭಂಡಾರಿ ವಾರ್ತೆ
Congratulations Adi Yashvanth Bhandary.
Congratulations👍