
ಕಾರ್ಕಳ ತಾಲೂಕು ಅಂಡಾರು ಗ್ರಾಮದ ದಿವಂಗತ ರಾಜು ಭಂಡಾರಿ ಮತ್ತು ಸುಮತಿ ರಾಜು ಭಂಡಾರಿ ದಂಪತಿಗಳ ಪುತ್ರ ಶ್ರೀ ಅರವಿಂದ ಭಂಡಾರಿ ಮತ್ತು ಶ್ರೀಮತಿ ಸೌಮ್ಯ ಅರವಿಂದ್ ಭಂಡಾರಿ ( ತೀರ್ಥಹಳ್ಳಿ ತಾಲೂಕು ಕಮ್ಮರಡಿ ಗ್ರಾಮದ ಶ್ರೀ ವಿಠ್ಠಲ ಭಂಡಾರಿ ಮತ್ತು ಶ್ರೀಮತಿ ಸುನೀತಾ ವಿಠ್ಠಲ ಭಂಡಾರಿಯವರ ಪುತ್ರಿ) ದಂಪತಿಗಳು ತಮ್ಮ ಮದುವೆಯ ಮೂರನೆಯ ವರ್ಷದ ವಾರ್ಷಿಕೋತ್ಸವದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಕಾರ್ಕಳ ತಾಲೂಕು ಅಂಡಾರು ಗ್ರಾಮದ ಶ್ರೀ ಸದಾಶಿವ ಭಂಡಾರಿ ಮತ್ತು ಶ್ರೀಮತಿ ಲೀಲಾ ಸದಾಶಿವ ಭಂಡಾರಿ ದಂಪತಿಗಳ ಪುತ್ರ ಶ್ರೀ ಸಂದೇಶ್ ಭಂಡಾರಿ ಮತ್ತು ಶ್ರೀಮತಿ ಗೀತಾ ಸಂದೇಶ್ ಭಂಡಾರಿ (ಕಾರ್ಕಳ ತಾಲೂಕು ಮಾಳ ಗ್ರಾಮದ ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಜಲಜ ನಾರಾಯಣ ಭಂಡಾರಿಯವರ ಪುತ್ರಿ) ದಂಪತಿಗಳು ತಮ್ಮ ಮದುವೆಯ ಮೂರನೆಯ ವರ್ಷದ ವಾರ್ಷಿಕೋತ್ಸವದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಮದುವೆಯ ಮೂರನೆಯ ವರ್ಷಾಚರಣೆಯ ಸಂಭ್ರಮದಲ್ಲಿರುವ ದಂಪತೀದ್ವಯರಿಗೆ ಸಮಸ್ತ ಅಂಡಾರು ಭಂಡಾರಿ ಕುಟುಂಬಸ್ಥರು, ಕಮ್ಮರಡಿ ಮತ್ತು ಮಾಳದ ಭಂಡಾರಿ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಶುಭ ಕೋರಿ ಹರಸಿ, ಹಾರೈಸಿದರು.
ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಶ್ರೀ ಅರವಿಂದ ಭಂಡಾರಿ ಮತ್ತು ಶ್ರೀಮತಿ ಸೌಮ್ಯ ಅರವಿಂದ್ ಭಂಡಾರಿ ದಂಪತಿಗಳು, ಶ್ರೀ ಸಂದೇಶ್ ಭಂಡಾರಿ ಮತ್ತು ಶ್ರೀಮತಿ ಗೀತಾ ಸಂದೇಶ್ ಭಂಡಾರಿ ದಂಪತಿಗಳಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯ ನೀಡಿ, ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.