ರಾಜ್ಯ ಸರ್ಕಾರ ಮಾಡುತ್ತಿರುವ ಬೆಳೆ ಸಾಲಮನ್ನಾದ ತಾಂತ್ರಿಕ ಅಂಶಗಳ ಬಗ್ಗೆ ರೈತರಿಗೆ ಹಲವು ಅನುಮಾನಗಳು ಉಳಿದುಕೊಂಡಿವೆ. ಯಾವ ರೀತಿಯ ಸಾಲಮನ್ನಾ ಆಗುತ್ತದೆ, ಚಾಲ್ತಿ ಖಾತೆಯ ಎಷ್ಟು ಸಾಲಮನ್ನಾ ಆಗುತ್ತದೆ. ಸುಸ್ತಿ ಖಾತೆಯ ಎಷ್ಟು ಸಾಲಮನ್ನಾ ಆಗುತ್ತದೆ. ಸಹಕಾರಿ ಬ್ಯಾಂಕಿನ ಎಷ್ಟು ಸಾಲಮನ್ನಾ ಆಗುತ್ತದೆ. ರಾಷ್ಟ್ರೀಕೃತ ಬ್ಯಾಂಕಿನ ಎಷ್ಟು ಮೊತ್ತದ ಬೆಳೆ ಸಾಲಮನ್ನಾ ಆಗುತ್ತದೆ ಹೀಗೆ ಅನುಮಾನುಗಳು ಇನ್ನೂ ಉಳಿದುಕೊಂಡಿವೆ. ಸಾಲಮನ್ನಾ ಆಗಲು ರೈತರು ಈ ದಾಖಲೆಗಳನ್ನು ಕಡ್ಡಾಯವಾಗಿ ಕೊಡಬೇಕು ಆದರೆ ಇದಕ್ಕೆಲ್ಲಾ ಪೂರ್ಣ ವಿರಾಮ ಇಡಲೆಂದು ಕೆಲವು ದಿನಗಳ ಹಿಂದೆಯೇ ಕರ್ನಾಟಕ ಸರ್ಕಾರ ವೆಬ್‌ಸೈಟ್ ಒಂದನ್ನು ರೂಪಿಸಿ ಬಿಡುಗಡೆ ಮಾಡಿದೆ. ಇಲ್ಲಿ ರೈತರು ತಮ್ಮ ಬೆಳೆಸಾಲ ಮನ್ನಾ ಆಗುತ್ತದೆಯೇ, ಅಥವಾ ಆಗಿದೆಯೇ ಎಂದು ಸುಲಭವಾಗಿ ತಿಳಿಯಬಹುದು.
http://clws.karnataka.gov.in/clws/pacs/pacsreports/ILRPT.aspx
ಈ ಪುಟದಲ್ಲಿ(link) ರಾಷ್ಟ್ರೀಯ ಬ್ಯಾಂಕು ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಸಾಲಮನ್ನಾ ಆಗಿದೆಯೇ ಎಂಬುದರ ಮಾಹಿತಿ ಪಡೆಯಬಹುದು. ಆಧಾರ್ ಸಂಖ್ಯೆ, ಸಾಲಪಡೆದಿರುವ ಜಮೀನಿನ ಸರ್ವೆ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ, ಸಾಲದ ಖಾತೆ ಸಂಖ್ಯೆ, ಬ್ಯಾಂಕ್ ಗ್ರಾಹಕ ಮಾಹಿತಿಗಳ ಆಧಾರದ ಮೇಲೆ ಸಾಲಮನ್ನಾ ಆಗಿದೆಯೇ ಅಥವಾ ಆಗಲಿದೆಯೇ ಎಂದು ತಿಳಿದುಕೊಳ್ಳಬಹುದಾಗಿದೆ.
ಈ ಕೆಳಗಿನ ಲಿಂಕ್ ಮೂಲಕ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು
http://clws.karnataka.gov.in/clws/pacs/pacsreports/DataEntry.aspx
ಮಾಹಿತಿ: kannada.oneindia.com