
ಮೂಡಬಿದಿರೆ ಕರಿಂಜೆ , ದೇರಂದಬೆಟ್ಟು ಮನೆಯ ಶ್ರೀ ಜಯಾನಂದ ಭಂಡಾರಿ ಮತ್ತು ಶ್ರೀಮತಿ ಸಪ್ನಾ ದಂಪತಿಗಳ ಪುತ್ರನಾದ ಸಜಯ್ ಈ ವರ್ಷದ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ 511 (85.16%) ಅಂಕ ಗಳಿಸಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಈ ಸಾಧನೆಯೊಂದಿಗೆ ಗುರುಹಿರಿಯರ, ಪೋಷಕರ, ಊರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಸಜಯ್ ಅವರ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆ ತರುವ ವಿಚಾರವಾಗಿದ್ದು, ಉನ್ನತ ಸಾಧನೆಗಾಗಿ ಅಭಿನಂದಿಸುತ್ತಾ ಇವರ ಮುಂದಿನ ಶಿಕ್ಷಣ ಮತ್ತು ಜೀವನ ಪ್ರಕಾಶಮಾನವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
ಭಂಡಾರಿ ವಾರ್ತೆ