
ಉಡುಪಿ ಜಿಲ್ಲೆಯ ಮಂಚಿ ದುಗ್ಲಿಪದವು ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಪ್ರಮೀಳಾ ಭಂಡಾರಿ ದಂಪತಿಯ ಸುಪುತ್ರ ಕಲಾವಿದ
ಕಾರ್ತಿಕ್ ಭಂಡಾರಿ

ಇವರ ಕೈಚಳಕದಿಂದ ವಿಶಿಷ್ಟ ರೀತಿಯಲ್ಲಿ ಮೂಡಿದ ಬಣ್ಣದ ಚಿತ್ತಾರವು ಎಲ್ಲಾರ ಆಕರ್ಷಣೆ ಹಾಗೂ ಪ್ರಶಂಸೆಗೆ ಪಾತ್ರವಾಗಿದೆ ಇವರು ಈಗಾಗಲೇ ಹಲವಾರು ಚಿತ್ರ ಕಲೆಯನ್ನು ಮಾಡಿ ತಮ್ಮ ಬಿಡುವಿನ ಸಮಯವನ್ನು ವಿಶಿಷ್ಟ ರೀತಿಯಲ್ಲಿ ಸದ್ಬಳಕೆ ಮಾಡುತ್ತಿದ್ದಾರೆ.





ಉಡುಪಿ ಪೂರ್ಣಪ್ರಜ್ಞಾ ಸಂಜೆ ಕಾಲೇಜಿನ ಅಂತಿಮ ವರ್ಷದ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ . ಅದಲ್ಲದೇ ವ್ಯಾಸಂಗದ ಜೊತೆಗೆ ದುಡಿಮೆಯನ್ನು ಮಾಡುತ್ತಿರುವ ಇವರು ಉಡುಪಿ ಮತ್ತು ಮಣಿಪಾಲ ಸುತ್ತಮುತ್ತಲಿನಲ್ಲಿ ಎ.ಸಿ.ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇವರು ದೊಡ್ಡ ಚಿತ್ರ ಕಲಾವಿದರಾಗಿ ಹಾಗೂ ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆಯನ್ನು ಮಾಡಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆ .
#ಗೋಡೆ ಚಿತ್ರಗಳನ್ನು ಆಕರ್ಷಕವಾಗಿ ಬಿಡಿಸುವ ಇವರ ಪ್ರತಿಭೆಯನ್ನು ಪ್ರೋತ್ಸಾಹಿಸಿ..
ಇವರ ಸಂಪರ್ಕ ಸಂಖ್ಯೆ: 8880622363