January 18, 2025
karthik1

ಪಡುಬಿದ್ರಿಯ ಶ್ರೀ ಬಾಬು ಭಂಡಾರಿ ಮತ್ತು ಶ್ರೀಮತಿ ಇಂದಿರಾ ಬಾಬು ಭಂಡಾರಿ ದಂಪತಿಯ ಪುತ್ರ

ಶ್ರೀ ಕಾರ್ತಿಕ್ ಭಂಡಾರಿ.

ಮತ್ತು ವಿಟ್ಲದ ಶ್ರೀ ಕೊರಗಪ್ಪ ಭಂಡಾರಿ ಮತ್ತು ಶ್ರೀಮತಿ ಸುನಂದಾ ಕೊರಗಪ್ಪ ಭಂಡಾರಿ ದಂಪತಿಯ ಪುತ್ರಿ

ಕುಮಾರಿ ನಿಕ್ಷಿತಾ.

ಇವರ ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮ ಮೇ 31 ರ ಗುರುವಾರ ವಿಟ್ಲದ ವಧುವಿನ ಸ್ವಗೃಹದಲ್ಲಿ ಅದ್ಧೂರಿಯಾಗಿ ನೆರವೇರಿತು.

ಪಡುಬಿದ್ರಿ ಮತ್ತು ವಿಟ್ಲದ ಭಂಡಾರಿ ಬಂಧುಗಳು,ಕುಟುಂಬವರ್ಗದವರು,ಆತ್ಮೀಯರು ಉಪಸ್ಥಿತರಿದ್ದು ವಿವಾಹ ನಿಶ್ಚಿತಾರ್ಥದಲ್ಲಿ ಬಂಧಿಯಾದ ಜೋಡಿಗೆ ಶುಭ ಹಾರೈಸಿ, ಯಥೋಚಿತ ಸತ್ಕಾರವನ್ನು ಸ್ವೀಕರಿಸಿದರು.

ಭಂಡಾರಿವಾರ್ತೆಯ ಅಭಿಮಾನಿಯಾಗಿರುವ ಶ್ರೀ ಕಾರ್ತಿಕ್ ಭಂಡಾರಿ ಮತ್ತು ಕುಮಾರಿ ನಿಕ್ಷಿತಾರವರಿಗೆ ಭಂಡಾರಿ ಕುಟುಂಬದ ಮನೆಮನದ ಮಾತಾಗಿರುವ “ಭಂಡಾರಿವಾರ್ತೆ” ತಂಡ ಹಾರ್ದಿಕವಾಗಿ ಶುಭ ಕೋರುತ್ತಾ ಜೋಡಿಹಕ್ಕಿಗಳು ಆದಷ್ಟು ಶೀಘ್ರ ದಾಂಪತ್ಯ ಜೀವನದಲ್ಲಿ ಒಂದಾಗಲಿ, ಶ್ರೀ ದೇವರು ಅವರಿಗೆ ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಹಾರೈಸುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *