
ಸುಳ್ಯ ಹರಿಹರದ ಪಲ್ಲತಡ್ಕ ಮನೆಯ ಶ್ರೀ ದೇವದಾಸ ಎಸ್.ಪಿ ಮತ್ತು ಶ್ರೀಮತಿ ವೀಣಾ ಕೆ ದಂಪತಿಗಳ ಪುತ್ರ ಕಾರ್ತಿಕ್ ಎಸ್. ಡಿ ಯವರು 2018-19 ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ 537 (89.5%) ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಗುರುಗಳ, ವಿದ್ಯಾಸಂಸ್ಥೆ, ಊರಿನ ಮತ್ತು ಪೋಷಕರ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಇವರ ಈ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆ ತರುವ ವಿಚಾರವಾಗಿದ್ದು ಭಂಡಾರಿ ವಾರ್ತೆ ಇವರ ಅಮೋಘ ಸಾಧನೆಗೆ ಅಭಿನಂದನೆ ಸಲ್ಲಿಸುತ್ತದೆ. ಹಾಗೆಯೇ ಕಾರ್ತಿಕ್ ರವರ ಮುಂದಿನ ವಿದ್ಯಾಭ್ಯಾಸ ಮತ್ತು ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
ಭಂಡಾರಿವಾರ್ತೆ