January 18, 2025
WhatsApp Image 2022-05-25 at 3.43.54 PM

ಮುಂಬಯಿ ವಲಯ ಭಂಡಾರಿ ಸಮಾಜದ ಸಕ್ರಿಯ ಕಾಯ೯ಕತ೯, ಮಾಜಿ ಕೋಶಾಧಿಕಾರಿ ಹಾಗೂ ಹೊಸನಗರ ತಾಲ್ಲೂಕು ಮೂಡುಗೊಪ್ಪ-ನಗರ ಗ್ರಾಮ ಪಂಚಾಯ್ತಿ ಯ ಮಾಜಿ ಸದಸ್ಯರು ಸಮಾಜ ಮುಖಿ ಕಾಯ೯ದಲ್ಲಿ ಸದಾ ಮುಂಚೂಣಿಯಲ್ಲಿರುವ,ಸವ೯ಪರಿಚಿತ ಮುಂಬಯಿ ಡೊಂಬಿವಿಲಿಯ ಶ್ರೀ ಕರುಣಾಕರ ಭಂಡಾರಿ ಮತ್ತು ಗ್ರಹಸ್ಥಾಶ್ರಮದ ಗ್ರಹಿಣಿ ಶ್ರೀಮತಿ ಸುರೇಖಾ ಕರುಣಾಕರ ತಮ್ಮ ವೈವಾಹಿಕ ಜೀವನದ 27ನೆಯ ವಷ೯ದ ಮಹೋತ್ಸವವನ್ನು ಮೇ 25 ನೇ ಬುದವಾರದಂದು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಹೊಸನಗರ ತಾಲ್ಲೂಕು ನಗರ ದಿವಂಗತ ಪೆಡೂ೯ರು ಭೋಜ ಭಂಡಾರಿ ಮತ್ತು ದಿವಂಗತ ಚೇಕಾ೯ಡಿ ಸೀತ ಭಂಡಾರಿಯವರ  ಪುತ್ರ ಕರುಣಾಕರ ಭಂಡಾರಿ
ಮತ್ತು ಮುಂಬಯಿ ಘಾಟ್ಕೋಪರ್ನ ಪಂತ ನಗರ ನಿವಾಸಿಯಾಗಿದ್ದ ದಿವಂಗತ ಶ್ರೀ ಸಂಜೀವ ಭಂಡಾರಿ ಮತ್ತು ಪ್ರಸ್ತುತ ಮುಂಬಯಿ ಪೋವಾಯಿ ನಿವಾಸಿ ಶ್ರೀಮತಿ ರತ್ನ ಸಂಜೀವ ಭಂಡಾರಿಯವರ ಪುತ್ರಿ ಸುರೇಖಾ ಕರುಣಾಕರ ಭಂಡಾರಿ ಯವರು 1995 ರ ಮೇ 25 ರಂದು ಹೊಸನಗರ ತಾಲ್ಲೂಕು ನಗರದ ಗುಜರೀ ಪೇಟೆ ದೇವಸ್ಥಾನದಲ್ಲಿ ಸಪ್ತಪದಿ ತುಳಿದಿದ್ದ,ರು.

ದಂಪತಿಯ  ಮಕ್ಕಳಾದ ಅಕ್ಷಯ್ ಹಾಗು ಅನುಷ್ ವಿದ್ಯಾಭ್ಯಾ‌‌ಸ ದಲ್ಲಿ ತೊಡಗಿಸಿ ಕೊಂಡಿರುತ್ತಾರೆ.

ದಂಪತಿಗೆ ಕಚ್ಚೂರು ಶ್ರೀ ನಾಗೇಶ್ವರ ದೇವರು ಆಯುರಾರೋಗ್ಯ ಅಷ್ಟಐಶ್ವರ್ಯವನ್ನು ಕರುಣಿಸಿ ಇನ್ನಷ್ಟು ಸಮಾಜ ಸೇವೆಯನ್ನು ಮಾಡುವಲ್ಲಿ ಅವರನ್ನು ಪ್ರೇರೇಪಿಸಿಕೊಂಡು ಇಡೀ ಸಮಾಜಕ್ಕೆ ಕೀರ್ತಿಯನ್ನು ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭ ಹಾರೈಸಿಕೊಂಡು ಅಭಿನಂದನೆ ಸಲ್ಲಿಸುತ್ತಿದೆ.

Leave a Reply

Your email address will not be published. Required fields are marked *