
ಸಮಾಜದ ಹಿರಿಯರಾದ ಕಾಸರಗೋಡು ತಾಲೂಕು ಮಜಿಬೈಲಿನ ಶ್ರೀಯುತ ಕೇಶವ ಭಂಡಾರಿ ಯವರು ಅನಾರೋಗ್ಯಪೀಡಿತರಾಗಿದ್ದು ಆರ್ಥಿಕ ಸಂಕಷ್ಟದಲ್ಲಿರುವ ಶ್ರಿಯುತರಿಗೆ ಭಂಡಾರಿ ಸಮಾಜ ಸಂಘ (ರಿ) ಕಾಸರಗೋಡು ಇವರ ವತಿಯಿಂದ ರೂ 5000 ಮೊತ್ತದ ಧನಸಹಾಯವನ್ನು ಡಿಸಂಬರ್ ೨೪ ರಂದು ಮಾಡಲಾಯಿತು.

ಸಂಘದ ಅಧ್ಯಕ್ಷರಾದ ಶ್ರೀ ಸಂಜೀವ ಭಂಡಾರಿ , ಶ್ರೀ ಚಂದ್ರಶೇಖರ ಮಜಿಬೈಲು, ಶ್ರೀ ಲೋಕೇಶ್ ತಲಪಾಡಿ, ಅರವಿಂದ ಕುಂಜತೂರು, ಜಯಶೀಲ, ದಯಾನಂದ ಮಜಿಬೈಲು, ಪ್ರಕಾಶ್ ಮಂಜೇಶ್ವರ ಉಪಸ್ಥಿತರಿದ್ದರು.
—ಭಂಡಾರಿವಾರ್ತೆ