January 18, 2025
ಕಟ್ಟುಪಾಡುಗಳಕಟ್ಟೋಲೆಗಳನ್ನು ಕಟ್ಟಿ
ಸ೦ಕೋಲೆಯೆ೦ಬ ಹೃದಯ ಬ೦ಧನದಿ 
ಹೊರಬರಲುತುಡುಕಿ ಮಿಸುಕಾಡುತ್ತಿದೆ.
ನೋಡಲೀ ಶತಮಾನದ ಹೆಣ್ಣು
ಇದರಿಂದಹೊರಗುರುಳುವ ಕಣ್ಣು ಕೇವಲಕೆಲವೇ
ಲೌಕಿಕದಆಸೆಆಕಾಂಕ್ಷೆಗಳಿಗೆ
ಅಬ್ಬರದಅಲೆಗಳು ಬಡಿಯಲು
ಎಲ್ಲೋ ಕೇಳಿ ಬರುವ ನಾದಕ್ಕೆತಡವರಿಸದೆ
ಕಾಲ್ಗೆಜ್ಜೆ ಕುಣಿದು ಕುಪ್ಪಳಿಸಿ,
ನೆಲಕ್ಕಪ್ಲಳಿಸಿಸಿಡಿದು ಕುಪ್ಪಳಿಸಿ,
ಸ್ವರ ಬೇರೆ, ಬೇರೆಯಾಗಿ ಕೇಳಿಬರಲು ಎಚ್ಚೆತ್ತಿತ್ತು ಮನ
ಓಡಿ ಬರುವ ಗಾಳಿಗೆ ಸಿಕ್ಕತರಗೆಲೆಗಳು
ಒ೦ದುಗೂಡಿ ಮೂಲೆ ಸೇರುವ೦ತೆ
ಮನಸ್ಸುಮುದುಡಿ ಹಿ೦ದೆ ಸರಿಯಿತು.

ನಿರ್ಮಲ ಶೇಷಗಿರಿ, ಕುಂಜಿಬೆಟ್ಟುಉಡುಪಿ

0 thoughts on “ಕಟ್ಟು ಪಾಡು

  1. ಭಾವನೆಗಳ ಬಂಧಿಸಲಾಗುವುದೇ…?
    ಕಾಮನೆಗಳ ಕಟ್ಟಿಡಲಾಗುವುದೇ…?
    ಕಟ್ಟು-ಪಾಡು
    ಈಗಿನವರ ಬಾಯಲ್ಲಿ…
    CUT- ಮಾಡು…!!!

Leave a Reply

Your email address will not be published. Required fields are marked *