January 18, 2025
inkfeather-600px

 

ಬರೆಯಬೇಕೆಂದಿರುವೆ ಕವನ
ಮೊದಲಾಗಿ ಮಾಡುವೆ ನಮನ
ಹೊಸ ದೃಶ್ಯಗಳು ನಿತ್ಯ ನೂತನ
ಮುದಗೊಂಡಿತು ನಯನ
ಭೂಮಿಗೆ ಚಪ್ಪರ ಹಾಕಿದೆ ಗಗನ
ಜೊತೆಸೇರಿದೆ ಹಕ್ಕಿಗಳ ಗಾಯನ
ಸೆಳೆಯಲು ನಮ್ಮಯ ಗಮನ
ಪುಳಕಗೊಂಡವು ತನುಮನ
ಪ್ರಕೃತಿ ಯೇ ಕವನಕ್ಕೆ ಪೂರಣ
ಅದರ ಸೌಂದರ್ಯ ಇದಕ್ಕೆ ಕಾರಣ
ನವೋಲ್ಲಾಸದಿ ಚಿಮ್ಮುವ ಚೇತನ
ಜೀವನವಾಗಿದೆ ಪಾವನ

 

✍: ನೀತಾ ಮಂಗಳೂರು

 

5 thoughts on “ಕವನ

Leave a Reply

Your email address will not be published. Required fields are marked *