January 18, 2025
Umesh Bhandary Kavattaru

ಕವತ್ತಾರಿನ ದಿವಂಗತ ದೋಗು ಭಂಡಾರಿಯವರ ಪುತ್ರ ಕವತ್ತಾರು ಶ್ರೀ ಉಮೇಶ್ ಭಂಡಾರಿ ಯವರು ತಾರೀಕು 18 ಜನವರಿ 2022 ರ ಮಂಗಳವಾರ ಅಲ್ಪ ಕಾಲದ ಅಸೌಖ್ಯದಿಂದ ಮುಂಬೈನ ಅಂಧೇರಿಯಲ್ಲಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು ಅವರಿಗೆ 80 ವರ್ಷ ವಯಸ್ಸಾಗಿತ್ತು .


ಉಮೇಶ್ ಭಂಡಾರಿಯವರು ಪತ್ನಿ ಶಾರದ ಉಮೇಶ್ ಮತ್ತು ಮಕ್ಕಳಾದ ಸಂಧ್ಯಾ , ಸೌಮ್ಯ, ಸಜನ್ ರನ್ನು ಅಗಲಿದ್ದಾರೆ .
ಮೃತರ  ಅಂತ್ಯ ಸಂಸ್ಕಾರವು ಮುಂಬೈಯ ಚಿತಾಗಾರದಲ್ಲಿ ನೆರವೇರಿತು .

ಉಮೇಶ್ ಭಂಡಾರಿ ಯವರು ನಮ್ಮ ಸಮಾಜದ ಹಿರಿಯ ಬರಹಗಾರ ಶ್ರೀ ಇರ್ವತ್ತೂರು ಗೋವಿಂದ ಭಂಡಾರಿ ಯವರ ಭಾವ (ಅಕ್ಕನ ಗಂಡ )

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ .

ವರದಿ: ಐ ಜಿ ಭಂಡಾರಿ , ಕಾರ್ಕಳ

Leave a Reply

Your email address will not be published. Required fields are marked *