November 21, 2024
25
 
      ದಿನಾಂಕ 07/08/2017 ಸೋಮವಾರ ಶ್ರವಣ ನಕ್ಷತ್ರ ಮಕರರಾಶಿಯಲ್ಲಿ ಚಂದ್ರನಿಗೆ ಕೇತುಗ್ರಹಣ. ಈಗ್ರಹಣದಿಂದ ವ್ಯಾಪಾರಸ್ಥರಿಗೆ, ಹಿಂದುಳಿದ ಜನರಿಗೆಹಾಗೂಎಮ್ಮೆ, ಕೋಣ, ಆನೆಗಳಿಗೆ ಮುಂದಿನ6 ತಿಂಗಳವರೆಗೆ ವಿಪರೀತಪೀಡೆಇದೆ. ಮಕರರಾಶಿಯಲ್ಲಿ ಗ್ರಹಣವಾಗಿರುವುದರಿಂದ ಉತ್ತರಭಾರತದಲ್ಲಿ ಭಾರೀಅನಾಹುತ, ನೆರೆಹಾವಳಿ, ಯುದ್ಧಭೀತಿ ಎದುರಾಗಬಹುದು. ಮಧ್ಯಭಾರತ, ಚೀನಾ, ಮುಸ್ಲಿಂ ದೇಶಗಳು, ಗ್ರೀಕ್ದೇಶಕ್ಕೆ ತೊಂದರೆಇದೆ. ದೇಶದಓರ್ವಶ್ರೇಷ್ಠ ಸ್ತ್ರೀಯಳಿಗೆ ಅರಿಷ್ಠವಿದೆ. ವಿದ್ಯಾಜೀವಿಗಳಿಗೆ ಕೆಟ್ಟಕಾಲವಾಗಲಿದೆ. ಭಾರತದೇಶದವಾಯುವ್ಯ ದಿಕ್ಕಿಗೆ ದುರ್ಭಿಕ್ಷೆ ಇದೆ.

ಕಳ್ಳಕಾಕರು ದರೋಡೆಕೋರರ  ಉಪದ್ರವ ಹೆಚ್ಚಾಗಲಿದೆ. ಮಂತ್ರಿಗಳಿಗೆ, ನೀಚರಿಗೆ, ಗೋವುಗಳಿಗೆ, ಸೈನಿಕರಿಗೆ ಅನಿಷ್ಠ. ದಕ್ಷಿಣದೇಶಿಯರಿಗೆ ಬರದತೊಂದರೆಇದೆ. ಮಕರ, ತುಲಾ, ಮಿಥುನ, ಕುಂಭಾರಾಶಿಯವರಿಗೆ ಅಶುಭ. ರಾತ್ರಿ10:53 ಕ್ಕೆಗ್ರಹಣಸ್ಪರ್ಶ. ರಾತ್ರಿ12:48 ಕ್ಕೆಗ್ರಹಣಮೋಕ್ಷ. ಚೂಡಾಮಣಿಯೋಗವಿರುವ ಕಾರಣಗ್ರಹಣಕಾಲದಲ್ಲಿ ಸ್ನಾನ, ಧ್ಯಾನ, ಜಪಮಾಡಿದರೆ  ಕಾರ್ಯಸಿದ್ದಿ. 07/08/2017 ರಂದು ಮದ್ಯಾಹ್ನ 1:53 ರವರೆಗೆಭೋಜನಮಾಡಬಹುದು. ರೋಗಿಗಳು, ವೃದ್ದರು, ಮಕ್ಕಳು3:53 ರವರೆಗೆಊಟಮಾಡಬಹುದು. ಗ್ರಹಣಕಾಲಕ್ಕೆ 6 ಗಂಟೆಮೊದಲುಊಟಬಿಡಬೇಕಾಗಿರುವುದರಿಂದ 4:53 ರಒಳಗೆಊಟಮುಗಿಸಲೇಬೇಕು. 

            ವೃಶ್ಚಿಕ, ಸಿಂಹ, ಮೀನ, ಮೇಷರಾಶಿಯವರಿಗೆ ಈಗ್ರಹಣಶುಭಕಾರಕವಿದೆ. ಧನು, ಕನ್ಯಾ, ಕರ್ಕ, ವೃಷಭರಾಶಿಗೆಮಧ್ಯಮಫಲವಿದೆ. ದೇಶದಲ್ಲಿ ಬೆಲೆಗಳು ಗಗನಕ್ಕೇರಲಿದೆ. ನೋಟುಅಮಾನ್ಯೀಕರಣದಂತಹ  ಸನ್ನಿವೇಶಗಳು ಇನ್ನೊಮ್ಮೆ ಬರಲಿದೆ. ಬ್ಯಾಂಕ್ ಗಳಲ್ಲಿಹಣವನ್ನು ಜಮೆಮಾಡಲುಜನಹಿಂಜರಿಯುವ ಸ್ಠಿತಿಬರಲಿದೆ. ಅಲ್ಲಲ್ಲಿ ಕೋಮುಗಲಭೆಗಳು ಜಾಸ್ತಿಯಾಗುತ್ತದೆ. ಮೀನರಾಶಿಯ ದಕ್ಷಿಣಕನ್ನಡ ಜಿಲ್ಲೆಗೆ ಶಾಂತಿಯವಾತಾವರಣ ಬರಲಿದೆ. ವೃಷಭರಾಶಿಯಉಡುಪಿಜಿಲ್ಲೆಯಲ್ಲಿ ಅತೀಹೆಚ್ಚುಅಕಾಲಮರಣ ಸಂಭವವಿದೆ. ಕರ್ನಾಟಕದಲ್ಲಿ ಆಡಳಿತವಿಚಾರದಲ್ಲಿ ಆಳುವಪಕ್ಷದಲ್ಲಿ ಒಡಕುಹುಟ್ಟಬಹುದು.
ತೇಜಿ : ತೆಂಗಿನಕಾಯಿ, ಮಸಾಲೆ, ಆಲುಗಡ್ಡೆ, ಬೆಲ್ಲ, ಶೇಂಗಾ, ಎಣ್ಣೆ, ಉತ್ತುತ್ತೆ, ಸಕ್ಕರೆ, ಉಪ್ಪು, ಜೋಳ.
ಮಂದಿ : ಅಕ್ಕಿ, ಅಡಿಕೆ, ಬಂಗಾರ, ಬೆಳ್ಳಿ, ಕಂಚು, ಹಿತ್ತಾಳೆ, ವೀಳ್ಯದೆಲೆ, ಹಣ್ಣುಹಂಪಲು, ತರಕಾರಿ.
ಸಮ : ಮೊಸರು, ಕಾಯಿಪಲ್ಲೆ ಇತ್ಯಾದಿ..
               
ಇತೀಶುಭಂ.

 ಕೆ. ಅನಂತರಾಮ ಬಂಗಾಡಿ

0 thoughts on “ಖಂಡಗ್ರಾಸ ಚಂದ್ರಗ್ರಹಣ

Leave a Reply

Your email address will not be published. Required fields are marked *