January 18, 2025
kishore kumar

ಪುತ್ತೂರು ತಾಲೂಕು ಸರ್ವೇ ಗ್ರಾಮದ ದಿವಂಗತ ಬಿ. ರಾಮಣ್ಣ ಭಂಡಾರಿಯವರ ಪುತ್ರ ಕಿಶೋರ್ ಕುಮಾರ್ ಪುತ್ತೂರುರವರನ್ನು ನಾಲ್ಕು ಜಿಲ್ಲೆಗಳನ್ನೊಳಗೊಂಡ  ಮೆಸ್ಕಾಂ ನ ನಿರ್ದೇಶಕರಾಗಿ ಕರ್ನಾಟಕ ಸರಕಾರ  ನೇಮಕಗೊಳಿಸಿದೆ.

  • ಉತ್ತಮ ಶೈಕ್ಷಣಿಕ ಹಿನ್ನಲೆ ಹೊಂದಿರುವ ಕಿಶೋರ್ ಕುಮಾರ್ ಪುತ್ತೂರು ರಾಜ್ಯ ಶಾಸ್ತ್ರದಲ್ಲಿ ಸ್ನಾತಕೋತರ ಪದವಿ ಪಡೆದಿರುತ್ತಾರೆ.
  • ವಿದ್ಯಾರ್ಥಿ ಜೀವನದಲ್ಲೇ ಆರ್ ಎಸ್ ಎಸ್ ಮತ್ತು ಎಬಿವಿಪಿ ಯ ಕಡೆ ಒಲವು ಹೊಂದಿದ್ದ ಕಿಶೋರ್ ಕುಮಾರ್ ಪುತ್ತೂರು ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
  • 2008 ರಲ್ಲಿ ಯುವ ಸಂಘಟನೆಯ ಜವಬ್ದಾರಿ ಹೊತ್ತು ನಳಿನ್ ಕುಮಾರ್ ರವರು ಲೋಕಸಭೆಗೆ ಆಯ್ಕೆಯಾಗುವಲ್ಲಿ ಶ್ರಮಿಸಿದ ಯುವ ನಾಯಕ.
  • ಆರ್ ಎಸ್ ಎಸ್ ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಮಂಡಲ ಪ್ರವಾಸಿ ಮತ್ತು ಮುಖ್ಯ ಶಿಕ್ಷಕ ಮೊದಲಾದ ಜವಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ‘ಸರಹದ್ ಕೋ ಪ್ರಣಾಮ್’ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 2011ರಲ್ಲಿ ‘ಕಾಶ್ಮೀರ ಚಲೋ’ ಎಂಬ ಕಾರ್ಯಕ್ರಮದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
  • 2009 ರಲ್ಲಿ ದಕ್ಷಿಣ ಕನ್ನಡ ಬಿಜೆಪಿ ಯುವಮೋರ್ಚಾ ಅಭ್ಯರ್ಥಿಯಾಗಿ ಆಯ್ಕೆಯಾಗಿ, 2014 ರಿಂದ ಭಾರತೀಯ ಜನತಾ ಯುವ ಮೋರ್ಚಾದ ವಿಭಾಗದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಪ್ರಿಯರಾದರು.
  • ಪುತ್ತೂರು ತಾಲೂಕಿನಲ್ಲಿ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ದುಡಿದ ಅನುಭವ, ಪ್ರಮುಖರ ಗೆಲುವಿಗೆ ಶ್ರಮಿಸಿದಲ್ಲದೆ, ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ದುಡಿದ ಕಾರಣ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ.

ಎರಡು ಬಾರಿ ವಿಧಾನಸಭಾ ಚುನಾವಣೆಗೆ ಕಿಶೋರ್ ಕುಮಾರ್ ಪುತ್ತೂರು ಗೆ ಬಿ ಜೆ ಪಿ ಪಕ್ಷದಿಂದ ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಅಭಿಮಾನಿಗಳು ಒತ್ತಾಯ ಮಾಡಿದ್ದರು. ಟಿಕೆಟ್ ಸಿಗದೇ ಇದ್ದಾಗ ದೃತಿಗೆಡದೆ ಕ್ಷೇತ್ರದ ಅಭ್ಯರ್ಥಿಯ ಗೆಲುವಿಗೆ ಮುಂಚೂಣಿಯಲ್ಲಿ ನಿಂತು ಶ್ರಮಿಸಿರುವುದು ಗಮನಾರ್ಹ ಸಂಗತಿಯಾಗಿದೆ.

ಕಿಶೋರ್ ಕುಮಾರ್ ಪುತ್ತೂರು ತನಗೆ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಲಿ , ಅವರ ಮುಂದಿನ ಜೀವನವು ಉಜ್ವಲವಾಗಲಿ ಎಂದು ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತದೆ

ಭಂಡಾರಿ ವಾರ್ತೆ

 

Leave a Reply

Your email address will not be published. Required fields are marked *