
ಆಯುರ್ವೇದದ ಪ್ರಕಾರ ಆಹಾರ ತಿನ್ನಲು ಕೆಲವು ನಿಯಮಗಳಿವೆ ತಿಳಿದುಕೊಳ್ಳಿ
ಇತ್ತೀಚಿನ ದಿನಮಾನಗಳಲ್ಲಿ ಜನರಲ್ಲಿ ಯಾವ ಕಾಯಿಲೆ ಇದೆ ಎಂದು ಕೇಳುವ ಬದಲು ಯಾವ ಕಾಯಿಲೆ ಇಲ್ಲ ಎಂದು ನೇರವಾಗಿ ಕೇಳಬಹುದು. ಏಕೆಂದರೆ ಪ್ರಪಂಚದಲ್ಲಿ ಇರುವಂತಹ ಬಹುತೇಕ ಕಾಯಿಲೆಗಳು ಈಗಾಗಲೇ ಜನರನ್ನು ಆವರಿಸಿ ಆಗಿದೆ.
ಸಣ್ಣ ಗ್ಯಾಸ್ಟ್ರಿಕ್ ನಿಂದ ಹಿಡಿದು ಮಾರಕ ಕ್ಯಾನ್ಸರ್ ವರೆಗೆ ಎಲ್ಲವೂ ನಮ್ಮ ಸುತ್ತಮುತ್ತ ಜನರ ದೇಹ ಸೇರಿಕೊಂಡು ಓಡಾಡುತ್ತಿವೆ. ಆದರೆ ಬಹುತೇಕ ಎಲ್ಲಾ ಕಾಯಿಲೆಗಳಿಗೂ ನಾವು ತಿನ್ನುವ ಆಹಾರವೇ ಪ್ರಮುಖ ಕಾರಣ ಎಂದು ಹೇಳಬಹುದು.
ಹಾಗಾದರೆ ನಾವು ತಿನ್ನುವ ಆಹಾರ ಸರಿಯಿಲ್ಲವೇ ಅಥವಾ ನಾವು ತಿನ್ನುತ್ತಿರುವ ರೀತಿ ಸರಿ ಇಲ್ಲವೇ ಎಂಬ ಗೊಂದಲ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಈ ಬಗ್ಗೆ ಆಯುರ್ವೇದ ತಜ್ಞರಾದ ಡಾ. ದೀಕ್ಷಾ ಭಾವಸರ್ ಈ ಕೆಳಗಿನ ನಿಯಮಗಳನ್ನು ಆಹಾರದ ವಿಚಾರದಲ್ಲಿ ಅನುಸರಿಸಬೇಕು ಎಂಬ ಸಲಹೆ ನೀಡುತ್ತಾರೆ.
ತಿನ್ನುವಾಗ ಮಾತ್ರ ಕೆಲವು ರೂಲ್ಸ್ ಫಾಲೋ ಮಾಡ್ಬೇಕು
ನಿಮ್ಮ ಊಟದಲ್ಲಿ ಆರು ಬಗೆಯ ರುಚಿ ಇರಬೇಕು!!
- ಮನುಷ್ಯ ಆರೋಗ್ಯವಂತನಾಗಿರಲು ಮತ್ತು ಶಕ್ತಿ ಹಾಗೂ ಚೈತನ್ಯದಿಂದ ಕೂಡಿರಲು ಉಪ್ಪು, ಹುಳಿ, ಖಾರ ತಿನ್ನ ಬೇಕು ಎಂದು ಹೇಳುವುದನ್ನು ಕೇಳಿದ್ದೇವೆ.
- ಅದರಂತೆ ಇನ್ನು ಮೂರು ಬಗೆಯ ಅಂದರೆ ಸಿಹಿ, ಕಹಿ ಮತ್ತು ಒಗರು ರುಚಿಗಳನ್ನು ಸಹ ಸೇರಿಸಿಕೊಂಡರೆ ಅತ್ಯು ತ್ತಮ ಆರೋಗ್ಯ ವನ್ನು ಒಬ್ಬ ವ್ಯಕ್ತಿ ತನ್ನದಾಗಿಸಿ ಕೊಳ್ಳಬಹುದು ಎಂದು ಆರೋಗ್ಯ ತಜ್ಞರಾದ ಡಾ. ದೀಕ್ಷಾ ಭಾವಸರ್ ಹೇಳುತ್ತಾರೆ.
- ಏಕೆಂದರೆ ಈ ಎಲ್ಲಾ ರುಚಿಗಳ ಸಮನ್ವಯ ಆಹಾರ ಮನುಷ್ಯನಿಗೆ ಸಮರ್ಪಕವಾದ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳನ್ನು ನೀಡುತ್ತದೆ ಎನ್ನುವುದು ಆಯುರ್ವೇದ ದಲ್ಲಿ ಇರುವ ಮಾಹಿತಿ.
ಮಲಗುವ ಮೂರು ಗಂಟೆ ಮುಂಚೆ ತಿನ್ನಬೇಡಿ!
- ಇದು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಏಕೆಂದರೆ ಯಾವುದೇ ವ್ಯಕ್ತಿ ತಾನು ಮಲಗಿರುವಾಗ ಆತನ ದೇಹ ಅವನಿಗೆ ಗೊತ್ತಿಲ್ಲದೇ ಆಂತರಿಕವಾಗಿ ಸಾಕಷ್ಟು ಕೆಲಸ ಮಾಡುತ್ತದೆ.
- ಅದು ಆತನ ಭಾವನೆಗಳನ್ನು ಕಂಟ್ರೋಲ್ ಮಾಡು ವುದು, ತಿಂದ ಆಹಾರವನ್ನು ಜೀರ್ಣ ಮಾಡುವುದು, ಮಾಂಸಖಂಡಗಳನ್ನು ರಿಪೇರಿ ಮಾಡುವುದು, ಗಾಯಗ ಳನ್ನು ವಾಸಿ ಮಾಡುವುದು ಹೀಗೆ ಅನೇಕ ಕಾರ್ಯ ಗಳನ್ನು ಬೆಳಗ್ಗೆ ಆಗುವ ಹೊತ್ತಿಗೆ ಮಾಡಿ ಮುಗಿಸುತ್ತದೆ.
- ರಾತ್ರಿಯ ಸಮಯದಲ್ಲಿ ಇದು ನಡೆಯಬೇಕಾದರೆ ಮನುಷ್ಯ ನಿದ್ದೆ ಹೋಗಿರಬೇಕು. ರಾತ್ರಿಯ ಸಮಯದಲ್ಲಿ ಸರಿಯಾಗಿ ನಿದ್ರೆ ಬರಬೇಕು ಎಂದರೆ ಬೇಗನೆ ಊಟ ಮಾಡಿ ಮಲಗಬೇಕು. ಆಯುರ್ವೇದ ತಜ್ಞರು ಹೇಳುವ ಹಾಗೆ ರಾತ್ರಿ ಮಲಗುವ ಮೂರು ಗಂಟೆ ಮುಂಚೆ ಊಟ ಮಾಡಿದರೆ ಒಳ್ಳೆಯದು.
ಊಟದ ಮಧ್ಯೆ ಗಿಡಮೂಲಿಕೆ ಚಹಾ
- ಸಾಧಾರಣ ಚಹಾ ಆದರೆ ದಿನಕ್ಕೆ ಹಲವು ಬಾರಿ ಕುಡಿಯು ತ್ತೇವೆ. ಆದರೆ ಗಿಡಮೂಲಿಕೆ ತುಂಬಿದ ಚಹಾ ಕುಡಿಯು ವುದಕ್ಕೆ ಪ್ರಾಧಾನ್ಯತೆ ನೀಡಬೇಕು. ಇದು ಆರೋಗ್ಯವನ್ನು ರಕ್ಷಿಸುತ್ತದೆ ಮತ್ತು ಖುಷಿಯನ್ನು ಹೆಚ್ಚಿಸುತ್ತದೆ.
- ಮುಖ್ಯವಾಗಿ ದೇಹದಲ್ಲಿ ಜೀರ್ಣಶಕ್ತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಮತ್ತು ದೇಹದಿಂದ ವಿಷಕಾರಿ ಅಂಶ ಗಳನ್ನು ತೆಗೆದುಹಾಕುವಲ್ಲಿ ಗಿಡಮೂಲಿಕೆ ಚಹಾ ಕೆಲಸ ಮಾಡುತ್ತದೆ. ದೇಹದಲ್ಲಿ ಉತ್ತಮ ರಕ್ತ ಸಂಚಾರ ಕೂಡ ಇದರಿಂದ ನಡೆಯುತ್ತದೆ
ಮಧ್ಯಾಹ್ನದ ಸಮಯದಲ್ಲಿ ಒಳ್ಳೆಯ ಊಟ ಮಾಡಿ
- ಮಧ್ಯಾಹ್ನದ ಸಮಯದಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಸುಡುವ ಬಿಸಿಲು ಇರುತ್ತದೆ. ಈ ಸಂದರ್ಭದಲ್ಲಿ ಜೀರ್ಣ ಶಕ್ತಿ ಕೂಡ ಹೆಚ್ಚಾಗಿರುತ್ತದೆ ಎಂದು ಆಯು ರ್ವೇದ ಡಾಕ್ಟರ್ ಹೇಳುತ್ತಾರೆ
- ಹಾಗಾಗಿ ಇಂತಹ ಸಂದರ್ಭದಲ್ಲಿ ಒಳ್ಳೆಯ ಪೌಷ್ಟಿಕ ಪ್ರಮಾಣ ಹೊಂದಿರುವ ಆಹಾರವನ್ನು ಸ್ವಲ್ಪ ಹೆಚ್ಚಾ ಗಿಯೇ ಸೇವಿಸಿ.
- ಬೇಕಿದ್ದರೆ ಭಾರವಾದ ಆಹಾರ ಗಳನ್ನು ಸಹ ಈ ಸಮಯದಲ್ಲಿ ತಿನ್ನಬಹುದು. ನಿಮ್ಮ ದೇಹ ಅದನ್ನು ಚೆನ್ನಾಗಿ ಜೀರ್ಣ ಮಾಡಿಕೊಳ್ಳುವ ಸಾಮರ್ಥ್ಯ ಈ ಸಮಯದಲ್ಲಿ ಹೊಂದಿರುತ್ತದೆ.
ಇವೆಲ್ಲವೂ ಪುರಾತನದ ಆಯುರ್ವೇದ ಪದ್ಧತಿ
- ನೋಡಿದಿರಲ್ಲ, ಇವೆಲ್ಲವೂ ನಮ್ಮ ಪುರಾತನ ಆಯು ರ್ವೇದ ಪದ್ಧತಿಯಿಂದ ಬಂದಿರುವ ನಿಯಮಗಳು. ನಮ್ಮ ಹಿರಿಯರು ಇವುಗಳನ್ನು ಅನುಸರಿಸುತ್ತಿದ್ದರು.
- ಹಾಗಾಗಿ ಅವರು ಹೆಚ್ಚು ಆರೋಗ್ಯದಿಂದ ಕೂಡಿರುತ್ತಿ ದ್ದರು. ಈಗ ನಾವು ನೀವು ಕೂಡ ಈ ಪದ್ಧತಿ ಯನ್ನು ಅನುಸರಿಸಿದರೆ ನಮ್ಮ ದೈಹಿಕ ಶಕ್ತಿ, ಮಾನಸಿಕ ಶಕ್ತಿ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: VK