
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೊಕೈಕಲ್ ಪಳ್ಳಿ ನಿವಾಸಿಯಾದ ಶ್ರೀ ಪ್ರಭಾಕರ್ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ಗೀತಾ ಪ್ರಭಾಕರ್ ಭಂಡಾರಿಯವರು ಫೆಬ್ರವರಿ 24 ರ ಶನಿವಾರ ಬೆಳಗ್ಗ 7:15 ಕ್ಕೆ ವಯೋಸಹಜ ಅನಾರೋಗ್ಯದಿಂದ ದೈವಾಧೀನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಶ್ರೀ ಪ್ರಭಾಕರ್ ಭಂಡಾರಿ,ಮುಂಬಯಿಯ ಐರೋಳಿಯಲ್ಲಿ ನೆಲೆಸಿರುವ ಮಗಳು ಶ್ರೀಮತಿ ಅಕ್ಷತಾ ಶ್ರೀಕಾಂತ್ ಮುಲ್ಕಾರ್,ಉದ್ಯೋಗ ನಿಮಿತ್ತ ಮುಂಬಯಿಯಲ್ಲಿ ನೆಲೆಸಿರುವ ಗಂಡು ಮಕ್ಕಳಾದ ಶ್ರೀ ರವಿಚಂದ್ರ ಭಂಡಾರಿ, ಶ್ರೀ ಪ್ರವೀಣ್ ಭಂಡಾರಿ ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
ಶ್ರೀಮತಿ ಗೀತಾ ಪ್ರಭಾಕರ್ ಅವರ ನಿಧನದಿಂದ ದುಃಖದಲ್ಲಿರುವ ಕುಟುಂಬಸ್ಥರಿಗೆ ಆ ನೋವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸು ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ನೀಡೆಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಭಗವಂತನಲ್ಲಿ ಪ್ರಾರ್ಥಿಸುತ್ತದೆ.
–ಭಂಡಾರಿವಾರ್ತೆ