September 20, 2024

ದಿವಂಗತ ನಾಥೂ ಭಂಡಾರಿಯವರ ಧರ್ಮಪತ್ನಿ ಕೊಲ್ಲು ಭಂಡಾರಿ ಯವರು ವಯೋಸಹಜ ಅನಾರೋಗ್ಯದಿಂದ B/305. ಶ್ರೀ ಶಾರದಾ ಕೋ.ಆಪರೇಟಿವ್ ಹೌಸಿಂಗ್ ಸೊಸೈಟಿ. ಗರಿಬಚವಾಡ, ದೊಂಬಿವಿಲಿ ಯ ತಮ್ಮ ನಿವಾಸದಲ್ಲಿ ಜನವರಿ 21 ರ ಮದ್ಯಾಹ್ನ 12:50 ಕ್ಕೆ ಕೊನೆಯುಸಿರೆಳೆದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

 

ಮೃತರು ಮುಂಬಯಿಯ ದೊಂಬಿವಿಲಿ ವಾಸಿಯಾಗಿರುವ ತಮ್ಮ ಮಗ ಶ್ರೀ ಮಂಜುನಾಥ ಭಂಡಾರಿ ಮತ್ತು ಉಡುಪಿಯ ಪರ್ಕಳ ನಿವಾಸಿಯಾಗಿರುವ ಮಗಳು ಸರೋಜ ಭಂಡಾರಿ ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.
ಕೊಲ್ಲು ಭಂಡಾರಿಯವರ ಅಗಲಿಕೆಯಿಂದ ದುಃಖತಪ್ತರಾದ ಕುಟುಂಬವರ್ಗದವರಿಗೆ ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು  ಭಂಡಾರಿವಾರ್ತೆ  ಪ್ರಾರ್ಥಿಸುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *