ಕೊಲ್ಲೂರಿನ ಹಲ್ಕಲ್ ಗ್ರಾಮದ ಶ್ರೀಮತಿ ಗುಲಾಬಿ ಭಂಡಾರಿ ಮತ್ತು ಶ್ರೀ ತೇಜ ಭಂಡಾರಿಯವರ ಪುತ್ರ ಶ್ರೀ ಸುಧೀರ್ ಭಂಡಾರಿ ಇವರು ಫೆಬ್ರವರಿ 28 ರ ಸೋಮವಾರ ಮದ್ಯಾಹ್ನ ಜೀಪ್ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಕೊಲ್ಲೂರಿನ ಶುಕ್ಲತೀರ್ಥ ಎಂಬಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಕುಂದಾಪುರದ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ನಿಧನರಾದರು.. ಇವರಿಗೆ 28 ವರ್ಷ ವಯಸ್ಸಾಗಿತ್ತು.
ಸುಧೀರ್ ಭಂಡಾರಿಯವರು ವೃತ್ತಿಯಲ್ಲಿ ಚಾಲಕರಾಗಿದ್ದು , ಕೊಡಚಾದ್ರಿ ಬೆಟ್ಟಕ್ಕೆ ಯಾತ್ರಿಗಳನ್ನು ಒಯ್ಯುತ್ತಿದ್ದರು. ಇವರು ಕೊಲ್ಲೂರಿನ ಜೀಪ್ ಚಾಲಕ ಮಾಲಕ ಸಂಘದ ಸಕ್ರಿಯ ಸದಸ್ಯರಾಗಿದ್ದರು ಹಾಗೂ ಸ್ಥಳೀಯ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು .
ದಿವಂಗತರು ತಂದೆ,ತಾಯಿ ಮತ್ತು ಮೂವರು ಅಕ್ಕಂದಿರಾದ ಶೋಭಾ , ಸುಮಿತ್ರಾ ಹಾಗೂ ಸುನೀತಾ ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ .
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಒದಗಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
-ಭಂಡಾರಿ ವಾರ್ತೆ