January 19, 2025
Koppa_narasimha_bhandary

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಶ್ರೀ ನರಸಿಂಹ ಭಂಡಾರಿಯವರಿಗೆ ಜೂನ್ 12 ರ ಮಂಗಳವಾರ ಅವರ ಅರವತ್ತಾರನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ.

 

ನರಸಿಂಹ ಭಂಡಾರಿಯವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರವಲ್ಲ ಇಡೀ ರಾಜ್ಯಕ್ಕೆ ಕೃಷಿ ಪರಿಕರಗಳ ತಯಾರಿಕೆಗೆ ಹೆಸರುವಾಸಿ.ಕೊಪ್ಪದ ತಮ್ಮ ಶ್ರೀ ದುರ್ಗಾ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಸದಾ ಹೊಸ ಹೊಸ ಅವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳುತ್ತಾ ಕೃಷಿಗೆ ಸಂಬಂಧಿಸಿದ ಹಲವಾರು ಉಪಕರಣಗಳನ್ನು ಕೃಷಿಕರಿಗೆ ಪರಿಚಯಿಸಿದರು.2001 ರಲ್ಲಿ ಇವರು ಆವಿಷ್ಕರಿಸಿದ ಹಸಿ ಅಡಿಕೆ ಸುಲಿಯುವ ಯಂತ್ರ ರಾಷ್ಟ್ರಪ್ರಶಸ್ತಿ ಪಡೆದು ಇವರಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು.2009 ರಲ್ಲಿ ಒಣ ಅಡಿಕೆ ಸುಲಿಯುವ ಯಂತ್ರವೂ ರಾಷ್ಟ್ರಪ್ರಶಸ್ತಿ ಗಳಿಸಿ ದೇಶಾದ್ಯಂತ ಕೃಷಿಕರು ಕೊಪ್ಪದೆಡೆಗೆ ತಿರುಗಿ ನೋಡುವಂತೆ ಮಾಡಿದ ಕೀರ್ತಿ ನಮ್ಮ ನರಸಿಂಹ ಭಂಡಾರಿಯವರದು.ಕಾಳು ಮೆಣಸು ಒಣಗಿಸುವ ಯಂತ್ರ, ಅಡಿಕೆ ಮರ ಏರಲು,ಔಷಧ ಸಿಂಪಡಿಸಲು,ಅಡಿಕೆ ಗಿಡ ಸ್ವಚ್ಛಗೊಳಿಸಲು,ಕಾಳು ಮೆಣಸು ಕೊಯ್ಯಲು ಅನುಕೂಲವಾಗುವಂತೆ ಏಣಿಯೊಂದನ್ನು ರೂಪಿಸಿ ಅಡಿಕೆ ಬೆಳೆಗಾರರ ಪ್ರಶಂಸೆಗೆ ಪಾತ್ರರಾದರು.ಇವರ ಸಾಧನೆ ಗುರುತಿಸಿ ಹಲವಾರು ಪ್ರಶಸ್ತಿ ಪಾರಿತೋಷಕಗಳು ಅವರನ್ನು ಅರಸಿಕೊಂಡು ಬಂದವು,ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿದವು.ಇವೆಲ್ಲಕ್ಕೂ ಕಲಶವಿಟ್ಟಂತೆ ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ರವರು ಐದು ಜನ ಸಾಧಕರೊಂದಿಗೆ ಇವರನ್ನೂ ಭೋಜನಕೂಟಕ್ಕೆ ಅಹ್ವಾನಿಸಿ ಗೌರವಿಸಿದ್ದನ್ನು ಅವರಿಂದಿಗೂ ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತಾರೆ‌.

advt.

 

ಹುಟ್ಟು ಹಬ್ಬವನ್ನು ಅಷ್ಟೇನೂ ವಿಶೇಷವಾಗಿ ಆಚರಿಸಿಕೊಳ್ಳದ ನರಸಿಂಹ ಭಂಡಾರಿಯವರಿಗೆ ಅವರ ಪತ್ನಿ ಶ್ರೀಮತಿ ವಸಂತಿ ನರಸಿಂಹ ಭಂಡಾರಿ,ಮಕ್ಕಳಾದ ಶ್ರೀ ಅಜಯ್ ಭಂಡಾರಿ,ಶ್ರೀ ಆಶ್ರಿತ್ ಭಂಡಾರಿ, ನರಸಿಂಹ ಭಂಡಾರಿಯವರ ತಮ್ಮಂದಿರು,ತಂಗಿಯಂದಿರು,ಕೊಪ್ಪ ಮತ್ತು ಕುದುರೆಗುಂಡಿ ಭಂಡಾರಿ ಕುಟುಂಬಸ್ಥರು ಶುಭ ಹಾರೈಸಿದ್ದಾರೆ.


ಭಂಡಾರಿ ಸಮಾಜ ಹೆಮ್ಮೆ ಪಡುವಂತಹ ಸಾಧನೆಗಳನ್ನು ಮಾಡಿ ಕೃಷಿಕರ ಮೊಗದಲ್ಲಿ ನಗು ಮೂಡಿಸಿದ ಹಿರಿಯರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ,ನಿಮ್ಮಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಭಗವಂತನು ಚೈತನ್ಯವನ್ನು ನೀಡಲಿ ಎಂದು ಹಾರೈಸುತ್ತಾ ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

1 thought on “ಕೊಪ್ಪದ ಶ್ರೀ ನರಸಿಂಹ ಭಂಡಾರಿಯವರ ಅರವತ್ತಾರನೇ ಹುಟ್ಟು ಹಬ್ಬದ ಸಂಭ್ರಮ

  1. Wishing many many returns of the day to Mr. Narasimha Bhandary,Koppa.
    Have a wonderful years ahead.

Leave a Reply

Your email address will not be published. Required fields are marked *