January 18, 2025
16
ಭಂಡಾರಿವಾರ್ತೆ: ಕಾರ್ಕಳ: ಕಾರ್ಕಳ ತಾಲೂಕಿನ ನಿಕಟ ಪೂರ್ವ ಶಾಸಕ ಎಚ್, ಗೋಪಾಲ ಭಂಡಾರಿ, ಕರ್ನಾಟಕ ಪ್ರದೇಶ ಕಾಂಗ್ರೇಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ. ಕಾರ್ಕಳದಲ್ಲಿ ಎರಡು ಬಾರಿ ಶಾಸಕರಾಗಿ ಜನಪ್ರೀಯರಾಗಿರುತ್ತಾರೆ. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ, ಹೆಬ್ರಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಕೆಪಿಸಿಸಿ ಸದಸ್ಯರಾಗಿ ಸೇವೆ ಸಲ್ಲಿಸಿ ಕಾಂಗ್ರೆಸ್ ಪಕ್ಚವನ್ನು ಕಾರ್ಕಳ ಕ್ಷೇತ್ರದಲ್ಲಿ ಮುನ್ನಡೆಸಿಕೊಂಡು ಹೋಗುವಲ್ಲಿ ಶ್ರಮ ಪಟ್ಟಿರುತ್ತಾರೆ. ಇದೀಗ ಕಾಂಗ್ರೆಸ್ ಪಕ್ಷವನ್ನು ರಾಜ್ಯ ಮಟ್ಟದಲ್ಲಿ ಸಂಘಟನೆ ಮಾಡುವ ಜವಬ್ದಾರಿಯನ್ನು ಪಕ್ಷ ನೀಡಿದೆ.
ವರದಿ: ಕಿಶೋರ್ ಕುಮಾರ್ ಸೋರ್ನಾಡು. ಭಂಡಾರಿ ವಾರ್ತೆ

0 thoughts on “ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಗೋಪಾಲ ಭಂಡಾರಿ ಆಯ್ಕೆ.

Leave a Reply

Your email address will not be published. Required fields are marked *