January 18, 2025
Krishnamurthy sagara1

ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಮಹಾ ಮಂಡಳದ ನಿರ್ದೇಶಕರಾಗಿ ಸಾಗರದ ಶ್ರೀ ಕೃಷ್ಣಮೂರ್ತಿ ಭಂಡಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಿವಮೊಗ್ಗ, ರಾಯಚೂರು, ಬಳ್ಳಾರಿ ಜಿಲ್ಲೆಯ “ಐ” ವಿಭಾಗದಿಂದ ಅವರು ಆಯ್ಕೆಯಾಗಿದ್ದಾರೆ. ಒಟ್ಟು 18 ಸ್ಥಾನಗಳಿಗೆ ದಿನಾಂಕ 18 ಜನವರಿಯಂದು ಚುನಾವಣೆ ಘೋಷಣೆ ಯಾಗಿತ್ತು. ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ. 

ರಾಜ್ಯದ ಒಟ್ಟು 172 ಬ್ಯಾಂಕುಗಳಿಗೆ ಮತದಾನದ ಹಕ್ಕು ನೀಡಲಾಗಿತ್ತು. ಈ ಹಿಂದೆ ಜಿಲ್ಲೆಯಿಂದ ಎಸ್.ವಿ. ತಿಮ್ಮಯ್ಯ, ಎಸ್.ಪಿ. ಶೇಷಾದ್ರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.

ಕೃಷ್ಣಮೂರ್ತಿ ಭಂಡಾರಿಯವರು ಸವಿತಾ ಸಮಾಜದ ಮಾಜಿ ಅಧ್ಯಕ್ಷರು, ಭಂಡಾರಿ ಸಮಾಜ ಸಂಘ ಸಾಗರ ಘಟಕದ ಹಾಲಿ ಅಧ್ಯಕ್ಷರು,ಸಾಗರದ ಮಾಜಿ ನಗರಸಭಾ ಸದಸ್ಯರು, ಗಣಪತಿ ಅರ್ಬನ್ ಬ್ಯಾಂಕಿನ ಮಾಜಿ ಅಧ್ಯಕ್ಷರು ಮತ್ತು ಹಾಲಿ ನಿರ್ದೇಶಕರಾಗಿದ್ದಾರೆ.

ಶ್ರೀಯುತರು ತಮ್ಮ ಸೇವಾವಧಿಯಲ್ಲಿ ಉತ್ತಮ ಕೆಲಸ ಮಾಡಿ ಸಮಾಜದಲ್ಲಿ ಮನ್ನಣೆ ಪಡೆಯಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *