ವಿಷ್ಣುವಿನ 10 ಅವತಾರಗಳಲ್ಲಿ 8 ನೇ ಅವತಾರವೇ ಶ್ರೀ ಕೃಷ್ಣ. ಕೃಷ್ಣನ ಪ್ರಭಾವ ಅದೆಷ್ಟಿದೆಯೆಂದರೆ ವಿಶ್ವಾದ್ಯಂತ ಮತ್ತು ಶ್ರೀಕೃಷ್ಣನಿಗೆ ತಮ್ಮ ಜೀವನವನ್ನು ಅರ್ಪಿಸಿದ ಕೋಟ್ಯಂತರ ಭಕ್ತರಿದ್ದಾರೆ.
ವಿಷ್ಣುವಿನ ಅವತಾರಗಳಲ್ಲಿ ರಾಮ ಮತ್ತು ಕೃಷ್ಣ ಅತ್ಯಂತ ಜನಪ್ರಿಯವಾದದ್ದು. ಅವರ ಜೀವನ ಶೈಲಿ ಬದುಕಿನ ತತ್ವಗಳು ಅನೆಕ ಜನರನ್ನು ಆಕರ್ಷಿಸಿದ್ದವು. ಹಾಗೇ ಪೂಜನೀಯವೂ ಆಗಿರುತ್ತದೆ.
ಭಾರತದಲ್ಲಿ ಅನೇಕ ಕೃಷ್ಣಮಂದಿರಗಳಿದ್ದು , ಕೋಟ್ಯಂತರ ಭಕ್ತರು ವರ್ಷoಪ್ರತಿ ಭೇಟಿ ನೀಡುತ್ತಾರೆ. ಇನ್ನು ಅನೇಕರು ತಮ್ಮ ಮನೆಗಳಲ್ಲೇ ಪೂಜಿಸುವವರಿದ್ದಾರೆ. ಅದಲ್ಲದೆ ವಿದೇಶಗಳಲ್ಲೂ ಅನೇಕ ಭಕ್ತರಿದ್ದು ಭಾರತದ ಕೃಷ್ಣಮದಿರಗಳಿಗೆ ಭೇಟಿ ನೀಡುತ್ತಿರುತ್ತಾರೆ.
ಅದ್ಭುತ ಕೃಷ್ಣ ಮಂತ್ರಗಳು
ಕೃಷ್ಣನ ಮೂಲ ಮಂತ್ರವೆಂದೇ ನಂಬಲಾಗಿರುವ ಕೃ ಕೃಷ್ಣಾಯ ನಮಃ ವನ್ನು ಜಪಿಸುವುದರಿಂದ ಜೀವನದ ಕಷ್ಟಗಳು ದೂರವಾಗುತ್ತದೆ ಎಂದು ನಂಬಲಾಗುತ್ತದೆ.
ಹಿಂದೂ ನಂಬಿಕೆಗಳ ಪ್ರಕಾರ ಈ ಮಂತ್ರವನ್ನು ದಿನಂಪ್ರತಿ 108 ಬಾರಿ ಪಠಿಸುವುದರಿಂದ ಮನೆ ಸಂತಸದಿಂದ ಕೂಡಿರುತ್ತದೆ.
” ಜೈ ಶ್ರೀ ಕೃಷ್ಣ ಚೈತನ್ಯ ಪ್ರಭು ನಿತ್ಯಾನಂದ ಶ್ರೀ ಅದ್ವೈತ ಗದಾಧರ ಶ್ರೀ ವಾಸಾದಿ ಗೌರ ಭಕ್ತ ವೃಂದ“
ಅರ್ಥ: ಈ ಮಂತ್ರವು ಭಕ್ತರನ್ನು ಶ್ರೀ ಕೃಷ್ಣನ ಆಶೀರ್ವಾದವನ್ನು ಪಡೆದುಕೊಳ್ಳವಂತೆ ಆಹ್ವಾನಿಸುವುದಾಗಿದೆ.
” ವಸುದೇವ ಸುತಂ ದೇವಂ ಕಂಸ ಚಾನುರ ಮರ್ಧನಂ ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗತ್ ಗುರುಂ“
ಅರ್ಥ: ಕಂಸ ಮತ್ತು ಚಾನುರನ್ನು ವಧಿಸಿದ ವಸುದೇವನ ಸುತನೇ ದೇವಕಿಯ ಪರಮಾನಂದಗಳಿಗೆ ಕಾರಣೀಭೂತ ಜಗಧಾರಕ ಕೃಷ್ಣನೇ ನಿನಗೆ ವಂದನೆ.
ಕೃಷ್ಣ ಮಂತ್ರವನ್ನು ಜಪಿಸುವುದರಿಂದ ಅವನ ಕೃಪೆಗೆ ಒಳಗಾಗುವುದಲ್ಲದೆ , ಮನಸ್ಸಿನ ಭಯ ಗೊಂದಲ ಹಾಗು ನೋವುಗಳನ್ನು ದೂರ ಮಾಡಬಹುದು.
ಕೃಷ್ಣ ಮಂತ್ರ ಪಠಣವು ಧೈರ್ಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನೆಮ್ಮದಿ ಆರೋಗ್ಯ ಐಶ್ವರ್ಯ ವೃದ್ಧಿಸುವುದಲ್ಲದೆ, ಅನಾರೋಗ್ಯ ನಕಾರಾತ್ಮಕತೆ ಹಾಗೂ ದುರಾದೃಷ್ಠವನ್ನು ತೊಡೆದು ಹಾಕುತ್ತದೆ.
✍🏼ರಂಜಿತ್ ಸಸಿಹಿತ್ಲು