ನಾವು ಕ್ಷೌರಿಕರು….
ಕ್ಷೌರಿಕರು ನಾವ್ ಕ್ಷೌರಿಕರು
ಭೇದ ಭಾವವ ಮರೆತವರು
ಕತ್ತರಿ ಕೂಪು ಹಿಡಿದವರು
ನಿತ್ಯ ಚೆಂದವ ಗೈವವರು.
ಬಡವನಾದರೂ, ಬಲ್ಲಿದನಾದರೂ
ಮೇಲೇ ಆದರೂ ಕೀಳೆ ಆದರೂ
ತೋರೆವು ನಾವ್ ಭೇದಿಸುವ ನೀತಿ
ರೋಗಿಯಾದರೂ, ಬೇಡುವನಾದರೂ
ನಗುಮೊಗದಲೇ ನಮ್ಮ ಸೇವೆಯೂ.
ಅಣ್ಣನಲ್ಲ ತಮ್ಮನಲ್ಲ, ಬಂಧುಬಳಗವಲ್ಲ
ಸಮಯದ ಸ್ನೇಹಿತರು ನಾವು
ಕೇಳಿ ಕಳೆವೆವು ಬಂದವರ ವ್ಯೆಥೆಯು,
ಜೊತೆಗೊಂದಿಷ್ಟು ಹಾಸ್ಯ, ಸಮಾಜ, ರಾಜಕೀಯ.
ತಲೆಹಗುರ ಜೊತೆಗೆ ಮನವೂ ಹಗುರ.
ನಿತ್ಯ ವಿನೂತನ ಕೇಶ ಕರ್ತನ
ವಿಧವಿಧ ವಿನ್ಯಾಸ, ಹೊಸತನ ಆವಿಷ್ಕಾರ.
ಸುಂದರ ರೂಪವೂ, ನಮ್ಮಯ ತಾಪವೂ
ಗ್ರಾಹಕ ಖುಷಿಯೊಳಗೆ ನಾವು ಹೈರಾಣ
ಬಿಡುವುದುಂಟೇ ನಗುಮುಖದೊಲವು
ಅವರ ತೃಪ್ತಿಯೇ ನಮ್ಮ ಗೆಲುವು
ಮನುಜರೂಪ ಗುರುತು ನೀಡುವ
ನಿತ್ಯ ಕಾಯಕ ಗರ್ವ ರೂಪ
ಹೇಳುವುದುಂಟು ಹೆಮ್ಮೆಯ ವಿಷಯ
ವೈದ್ಯ ಲೋಕದ ಕೊಡುಗೆ ನೆನಪು
ಶಸ್ತ್ರಚಿಕಿತ್ಸೆ ನಾವೇ ದಾರಿ, ಮೆಲಕು ಮಾತ್ರ.
ಶುಭಕೂ ಸೂತಕಕೂ ಕ್ಷೌರಿಕ ಬೇಕು
ಪೂಜೆ ಮೂಲ ನಾಗದೇವ, ಆದರೇನು
ಬಿಟ್ಟಿಲ್ಲ ನಮ್ಮನೂ ಕೀಳೇಂಬ ಛಾಯೆ.