November 25, 2024
udyoga-copy

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಲ್ಲಿ ಅಪ್ರೆಂಟೀಸ್ ತರಬೇತಿಗೆ ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಆಸಕ್ತರು ನೇರ ಸಂದರ್ಶನಕ್ಕೆ ಸೆಪ್ಟೆಂಬರ್, 22ರಂದು ಹಾಜರಾಗಬಹುದು.
ಶಿಶಿಕ್ಷು ಅಧಿನಿಯಮ 1961ರ ಅನ್ವಯ ಪೂರ್ಣ ಅವಧಿಯ ತಾಂತ್ರಿಕ ವೃತ್ತಿಯಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಐಟಿಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಖಾಲಿ ಸ್ಥಾನಗಳಿಗೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಹುದ್ದೆಗಳು ಪಾಸಾ 30 ಸ್ಥಾನಗಳು, ಎಲೆಕ್ಟ್ರೀಷಿಯನ್ 24 ಸ್ಥಾನಗಳು, ಫಿಟ್ಟರ್ 7 ಸ್ಥಾನಗಳು, ಮೆಕ್ಯಾನಿಕ್ ಡೀಸೆಲ್ 80 ಸ್ಥಾನಗಳು, ಎಂ. ವಿ. ಬಿ. ಬಿ. 4 ಸ್ಥಾನಗಳು, ವೆಲ್ಡರ್ 8 ಸ್ಥಾನಗಳು, ಮೆಕ್ಯಾನಿಕ್ ಆಟೊ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ 16 ಸ್ಥಾನಗಳು, ಮೋಟಾರ್ ಮೆಕ್ಯಾನಿಕ್ ವೆಹಿಕಲ್ 20 ಸ್ಥಾನಗಳು, ಮೆಕ್ಯಾನಿಕ್ ಆಟೊ ಮೊಬೈಲ್ (ಅಡ್ವಾನ್ಸ್‍ಡ್ ಡೀಸೆಲ್ ಎಂಜಿನ್) 1 ಸ್ಥಾನಗಳು ಖಾಲಿ ಇದೆ.

ಆಯ್ಕೆಗೊಂಡ ಅಭ್ಯರ್ಥಿಗಳ ತರಬೇತಿಯು ಒಂದು ವರ್ಷದ್ದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 20 ಕೊನೆಯ ದಿನವಾಗಿದೆ. ಪರಿಶಿಷ್ಟ ಜಾತಿಯವರಿಗೆ 1:8 ಮೀಸಲಾತಿ, ಪರಿಶಿಷ್ಟ ಪಂಗಡಕ್ಕೆ 1:20, ಅಂಗವಿಕಲರಿಗೆ 3 ಮತ್ತು ಮಾಜಿ ಸೈನಿಕ ಮಕ್ಕಳಿಗೆ ಪ್ರತಿಶತ 3ರಷ್ಟು ಮೀಸಲಾತಿ ನೀಡಲಾಗುವುದು.

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿಯು 2021ರ ಸೆಪ್ಟೆಂಬರ್ 13ಕ್ಕೆ 18 ವರ್ಷ ತುಂಬಿರಬೇಕು ಹಾಗೂ 26 ವರ್ಷಗಳಿಗಿಂತ ಕಡಿಮೆ ಇರಬೇಕು. ಈಗಾಗಲೇ ಶಿಶಿಕ್ಷು ತರಬೇತಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕಚೇರಿಯಿಂದ ನೀಡುವ ಅರ್ಜಿಯನ್ನು ಭರ್ತಿಗೊಳಿಸಿ ದಾಖಲಾತಿಗಳಾದ ಆಧಾರ್ ಕಾರ್ಡ್ ಪ್ರತಿ 2, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ 2, ಆಧಾರ್ ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಬಗ್ಗೆ ಸಂಬಂಧಿಸಿದ ಬ್ಯಾಂಕ್‍ನಿಂದ ದೃಢೀಕರಣ ಪತ್ರ, ಇ-ಮೇಲ್ ಐಡಿ, ವಿದ್ಯಾರ್ಹತೆಯ ಮೂಲ ದಾಖಲಾತಿ ಮತ್ತು ಜೆರಾಕ್ಸ್ ಪ್ರತಿ ಮತ್ತು ಜಾತಿ ಪ್ರಮಾಣದ ಮೂಲ ಪ್ರತಿ ಮತ್ತು ಜೆರಾಕ್ಸ್ ಪ್ರತಿಯೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.

ನೇರ ಸಂದರ್ಶನದ ವಿಳಾಸ; ವಿಭಾಗೀಯ ನಿಯಂತ್ರಣಾಧಿಕಾರಿ, ಕ.ರಾ.ರ.ಸಾ.ನಿಗಮ, ವಿಭಾಗೀಯ ಕಚೇರಿ, ಪುತ್ತೂರು ವಿಭಾಗ, ಮುಕ್ರಂಪಾಡಿ, ದರ್ಬೆ ಅಂಚೆ, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ .

ನೇರ ಸಂದರ್ಶನ ಸೆಪ್ಟೆಂಬರ್ 22ರಂದು ನಡೆಯಲಿದೆ.

ಷರತ್ತುಗಳು:

ಆಸಕ್ತರು ಅರ್ಜಿಗಳನ್ನು ಆಯೋಗದ ಅಂತರ್ಜಾಲ www.apprenticeshipindia.org. ವೆಬ್‌ಸೈಟ್ ಮೂಲಕ ನೋಂದಣಿ ಮಾಡುವುದು ಹಾಗೂ ನೋಂದಣಿ ಪ್ರತಿಯನ್ನು ಸಲ್ಲಿಸುವುದು. (ನೋಂದಣಿ ಪ್ರತಿ ಸಲ್ಲಿಸದೇ ತರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು). ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು www.apprenticeshipindia.org ಹೋಂ ಪೇಜ್‍ನಲ್ಲಿ Registration-candidate Registration ನಲ್ಲಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸುವುದು ನಂತರ ಇ-ಮೇಲ್ ನಲ್ಲಿ ಆಕ್ಟಿವೇಷನ್ (activation) ಮಾಡಿದ ನಂತರ ಇ-ಮೇಲ್ ಯೂಸರ್ ಐಡಿ ಮತ್ತು ಪಾಸ್‍ವರ್ಡ್- ಲಾಗಿನ್ ಪಾಸ್ ವರ್ಡ್ ಆಗಿರುತ್ತದೆ. ಲಾಗಿನ್ ಆದ ನಂತರ candidate dashboardನಲ್ಲಿ ವಿವರಗಳನ್ನು ನಮೂದಿಸುವುದು. ಪೂರ್ಣ ವಿವರಗಳನ್ನು ನಮೂದಿಸಿ, ಸಂಬಂಧಿಸಿದ ದಾಖಲಾತಿಗಳನ್ನು ಆಪ್‍ಡೇಟ್ ಮಾಡಿರುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಅಪೂರ್ಣ ವಿವರಗಳುಳ್ಳ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಶಿಶಿಕ್ಷುಗಳು ಆನ್‍ಲೈನ್ ನೋಂದಣಿಗೆ ಆಧಾರ್ ಕಾರ್ಡ್ ಹಾಗೂ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ವಿವರಗಳು (ಹೆಸರು, ಹುಟ್ಟಿದ ದಿನಾಂಕ, ಪೋಷಕರ ಹೆಸರು) ಒಂದಕ್ಕೊಂದು ತಾಳೆಯಾಗುವಂತಿರಬೇಕು. ಇಲ್ಲವಾದಲ್ಲಿ ಆನ್‍ಲೈನ್ ನೋಂದಣಿಯಲ್ಲಿ ಅಡಚಣೆ ಉಂಟಾದರೆ ಸಂಸ್ಥೆ ಯಾವುದೇ ರೀತಿಯ ಹೊಣೆಗಾರಿಕೆ ಹೊಂದುವುದಿಲ್ಲ. ಶಿಶಿಕ್ಷುಗಳು ಕಾಯಿದೆ 1961 ರನ್ವಯ ಈಗಾಗಲೇ ಶಿಶಿಕ್ಷು ತರಬೇತಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಒಂದು ವೇಳೆ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ ಅವರ ವಿರುದ್ಧ ಪೊಲೀಸ್ ಮೊಕದ್ದಮೆ ದಾಖಲಿಸಬಹುದು

-ಭಂಡಾರಿ ವಾರ್ತೆ 

Leave a Reply

Your email address will not be published. Required fields are marked *