November 22, 2024
shamb
“ಭಂಡಾರಿ ಸಮುದಾಯದಲ್ಲೊಂದು ವಿಶಿಷ್ಟ ವಿವಾಹ ಮಹೋತ್ಸವ.”
 
“ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಮುಂಬಯಿಯ ಬಾಲಕೃಷ್ಣ ಭಂಡಾರಿ ಕುಂಬ್ಳೆಯವರ ಪುತ್ರಿ ದಿವ್ಯಾ ಮತ್ತು ಶಿವಮೊಗ್ಗದ ಅಮರ್ ವಿವಾಹ ಸಂಭ್ರಮ ಮತ್ತು ಮಂಗಳ ನಿಧಿ ಕಾರ್ಯಕ್ರಮ.”
 
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರು, ಮುಂಬಯಿಯಲ್ಲಿ ಹೊರನಾಡು ಕನ್ನಡಿಗರ ಸಂಘಟಕರಾಗಿ ಸೇವೆ ಸಲ್ಲಿಸುತ್ತಿರುವ ಭಂಡಾರಿ ಸಮಾಜದ ಹಿರಿಯರಾದ ಕುಂಬ್ಳೆ ಶ್ರೀ ಬಾಲಕೃಷ್ಣ.ಪಿ.ಭಂಡಾರಿ ಮತ್ತು ಶ್ರೀಮತಿ ಸುಪ್ರಭಾ ಬಾಲಕೃಷ್ಣ ಭಂಡಾರಿ ದಂಪತಿಯ ಪುತ್ರಿ ಚಿ.ಸೌ.ದಿವ್ಯಾ ಭಂಡಾರಿಯವರ ವಿವಾಹವು ಶಿವಮೊಗ್ಗದ ಶ್ರೀ ಯೋಮಕೇಶ್ ಮತ್ತು ಶ್ರೀಮತಿ ಪದ್ಮಾ ಯೋಮಕೇಶ್ ದಂಪತಿಗಳ ಪುತ್ರ ಚಿ.ಅಮರ್ ಅವರೊಂದಿಗೆ ಉಡುಪಿಯ “ಬಾಸೆಲ್ ಮಿಷನರೀಸ್ ಆಡಿಟೋರಿಯಂ” ನಲ್ಲಿ  ಡಿಸೆಂಬರ್ 6,2019 ರ ಶುಕ್ರವಾರ ಬೆಳಗ್ಗೆ 11:10 ಕ್ಕೆ ಮಹೂರ್ತಗೊಂಡ ಮಕರ ಲಗ್ನ ಸುಮುಹೂರ್ತದಲ್ಲಿ,ಭಾರತೀಯ ಸಂಸ್ಕೃತಿಯ ಸತ್ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನೆರವೇರಿತು.
 
 
ವಿವಾಹ ಮಹೋತ್ಸವದ ಸುಸಂದರ್ಭದಲ್ಲಿ ಅಪಾರ ಸಂಖ್ಯೆಯ ಬಂಧು ಬಾಂಧವರು, ಹಿತೈಷಿಗಳು, ಆತ್ಮೀಯರು,ಭಂಡಾರಿ ಸಮಾಜದ ಗಣ್ಯರು,ರಾಜಕೀಯ ನಾಯಕರು,ಧಾರ್ಮಿಕ ಗುರುಗಳು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.
 
ಭಂಡಾರಿ ಸಮಾಜದಲ್ಲಿ ಇದೇ ಮೊದಲ ಬಾರಿಗೆ ಈ ವಿವಾಹ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಪದ್ಧತಿಯ ಪ್ರಕಾರ “ಮಂಗಳ ನಿಧಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದು ಬಂಧುಗಳಿಗೆ ಬೌದ್ಧಿಕ್ ನೀಡಿ, ಮಂಗಳ ನಿಧಿಯ ಮಹತ್ವ, ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯ ಪಾವಿತ್ರ್ಯತೆ ಹಾಗೂ ಸಾಂಸಾರಿಕ ಜೀವನದ ಬಗ್ಗೆ ಪ್ರವಚನ ನೀಡಿದರು.
“ಮಂಗಳ ನಿಧಿ” ಎಂಬುದು ವಿವಾಹ,ನಾಮಕರಣ,ತೊಟ್ಟಿಲು ಶಾಸ್ತ್ರ,ಉಪನಯನ ಮುಂತಾದ ಶುಭದಿನಗಳಂದು ನಮ್ಮ ಸಂಭ್ರಮ ಮತ್ತು ಸಡಗರದ ಜೊತೆಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಉದ್ದೇಶದಿಂದ ಸಮಾಜಕ್ಕೆ ಒಂದು ನಿಧಿಯನ್ನು ಶ್ರದ್ಧಾ ಭಕ್ತಿಯಿಂದ ಅರ್ಪಿಸುವುದು ಭಾರತೀಯ ಸಂಸ್ಕೃತಿಯಲ್ಲಿನ ಸತ್ಸಂಪ್ರದಾಯ.ಇದು ಭಾರತ ದೇಶದ ವೈಶಿಷ್ಟ್ಯವೂ ಹೌದು. ಮನುಷ್ಯ ಮೊದಲು ಮನುಷ್ಯನಾಗಬೇಕು,ಸಾಧ್ಯವಾದರೆ ಮನುಷ್ಯ ದೇವರೂ ಆಗಬೇಕು. ಹಾಗಾಗಲು ಸಮಾಜದ ಎಲ್ಲ ಜನ ಬಂಧುಗಳ ಸಹಕಾರವೂ ಅಗತ್ಯವಾಗಿ ಬೇಕು.ಕಾಲ ಬದಲಾದಂತೆ ಕಲ್ಪನೆಯೂ ಬದಲಾಗಬೇಕು ಎಂಬುದು ಈ “ಮಂಗಳ ನಿಧಿ” ಯ ಮೂಲ ಚಿಂತನೆ.
 
ಅಖಿಲ ಭಾರತೀಯ ಕುಟುಂಬ ಪ್ರಭೋಧಿನಿ ಸಹ ಪ್ರಮುಖ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸೂ.ರಾಮಣ್ಣ ಜೀ ಯವರು ಬೌದ್ಧಿಕ್ ನೀಡಿದರು. “ನಾವು ಹಿಂದೂಗಳು, ನಮ್ಮದು ಹಿಂದೂರಾಷ್ಟ್ರ. ನಾವು ನಮ್ಮ ಸತ್ಸಂಪ್ರದಾಯಗಳನ್ನು ಜಗತ್ತಿಗೆ ನೀಡಬೇಕೇ ಹೊರತು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಿಸಿ ಸಮಾಜವನ್ನು ಕಲುಷಿತಗೊಳಿಸಬಾರದು. ನಾವು ನಮ್ಮ ಮನೆಯ ಕಾರ್ಯಕ್ರಮಗಳನ್ನು ಸಮಾಜಕ್ಕೆ ಮಾದರಿಯಾಗುವಂತೆ, ಹಿಂದೂ ಸಂಪ್ರದಾಯದಂತೆ ಆಚರಿಸಬೇಕು.ಅರ್ಥೇಚ ಕಾಮೇಚ ನಾತಿಚರಾಮಿ ಎಂಬ ಮಂತ್ರದ ತಾತ್ಪರ್ಯದಂತೆ ಮದುವೆಯಾದ ವಧು ವರರು ಪರಸ್ಪರ ಗೌರವಿಸಿಕೊಂಡು ಅನ್ಯೋನ್ಯತೆಯಿಂದ ಜೀವನ ನಡೆಸಬೇಕು. ಬೇರೆಯವರಿಗೆ ಪರಿಚಯಿಸುವಾಗ ಪತ್ನಿಯನ್ನು ಶ್ರೀಮತಿಯೆಂದೇ ಸಂಭೋದಿಸಬೇಕು.ಹೆಂಡತಿಯನ್ನು ಮಿಸ್,ಮಿಸ್ಸಸ್ ಎಂದು ಪರಿಚಯಿಸಬಾರದು.ವಿಚ್ಛೇದನ ಪಾಶ್ಚಾತ್ಯ ಸಂಸ್ಕೃತಿ.ಯುವಸಮೂಹ ಪಾಶ್ಚಿಮಾತ್ಯ ಸಂಸ್ಕೃತಿಯೆಡೆಗೆ ವಾಲುತ್ತಿರುವುದು ದುರಂತ.” ಎಂದು ನುಡಿದರು.ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ನವಜೋಡಿಗಳು ತಮ್ಮಿಂದಾದ ಕಿರುಕಾಣಿಕೆಯನ್ನು “ಮಂಗಳ ನಿಧಿ” ಯ ರೂಪದಲ್ಲಿ ಸಮಾಜಕ್ಕೆ ದೇಣಿಗೆಯಾಗಿ ನೀಡುವ ಮೂಲಕ ಸಾರ್ಥಕತೆಯನ್ನು ಮೆರೆದರು.ಮದುವೆಯೂ ಶಾಸ್ತ್ರೋಕ್ತವಾಗಿ ನಡೆಯುವುದರ ಜೊತೆಗೆ ದೇಶಭಕ್ತಿಯ ಭಾವದಿಂದ ತುಂಬಿತ್ತು.ಬಹುತೇಕ ಸಂಘದ ಕಾರ್ಯಕರ್ತರು ಮತ್ತು ಪ್ರಮುಖರೇ ತುಂಬಿರುವ ಕಾರ್ಯಕ್ರಮದಲ್ಲಿ ಭಾರತೀಯತೆ ತುಂಬಿ ತುಳುಕಾಡುತ್ತಿತ್ತು.
 
 
 
ಅಖಿಲ ಭಾರತ್ ಕುಟುಂಬ ಪ್ರಭೋಧಿನಿ ಪ್ರಮುಖ್ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಜೀ, ಅಖಿಲ ಭಾರತ್ ಸೇವಾ ಪ್ರಮುಖ್ ನಾಗ್ಪುರದ ಶ್ರೀ ಮಂಗೇಶ್ ಬೇಂಡೇ ಜೀ, ಬೆಂಗಳೂರು ಚನ್ನೇನಹಳ್ಳಿಯ ಜನಸೇವಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶ್ರೀ ನಿರ್ಮಲ್ ಕುಮಾರ್ ಜೀ, ಅಖಿಲ ಭಾರತ್ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಶ್ರೀ ನರಹರಿ ಜೀ, ಅಖಿಲ ಭಾರತ್ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಶ್ರೀ ಡಾ. ಕಲ್ಲಡ್ಕ ಪ್ರಭಾಕರ ಭಟ್ ಜೀ, ಉಡುಪಿ ಜಿಲ್ಲಾ ಸಂಘಚಾಲಕ್ ಶ್ರೀ ಡಾ. ನಾರಾಯಣ ಶೆಣೈ ಜೀ, ಅಖಿಲ ಭಾರತ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಹ ಸರ್ಕಾರ್ಯವಾಹಕ್ ಶ್ರೀ ಮುಕುಂದ್ ಜೀ, ಉಡುಪಿ ಜಿಲ್ಲೆಯ ಪ್ರಪ್ರಥಮ ಮೇಯರ್, ಸ್ವಯಂಸೇವಕ ಸಂಘದ ಅತೀ ಹಿರಿಯ ಪ್ರಚಾರಕ್ ಶ್ರೀ ಸೋಮಶೇಖರ್ ಭಟ್ ಜೀ,ಹಿರಿಯ ಪ್ರಚಾರಕ್ ಶ್ರೀ ಸುರೇಶ್ ಜೀ, ಹಿರಿಯ ಪ್ರಚಾರಕ್ ಧಾ.ಮ. ರವೀಂದ್ರ ಜೀ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹಕ್ ಶ್ರೀ ತಿಪ್ಪೇಸ್ವಾಮಿ ಜೀ,ಸಂಘದ ಹಿರಿಯ ಕಾರ್ಯಕರ್ತರಾದ ಶ್ರೀ ಶಂಭುಶೆಟ್ಟಿ ಜೀ, ಐಎಎಸ್ ಅಧಿಕಾರಿಗಳಾದ ಡಾಕ್ಟರ್ ಪ್ರಕಾಶ್,ಐ.ಲಕ್ಷ್ಮಣ್, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರುಗಳಾದ ರಾಜೇಶ್ ನಾಯಕ್, ಹರೀಶ್ ಪೂಂಜಾ, ಉಮಾನಾಥ್ ಕೋಟ್ಯಾನ್, ಭರತ್ ಶೆಟ್ಟಿ, ಅಂಗಾರ, ಸಂಜೀವ್ ಮಠಂದೂರು, ಲಾಲಾಜಿ ಮೆಂಡನ್, ರಘುಪತಿ ಭಟ್, ಸುನಿಲ್ ಕುಮಾರ್, ಸುಕುಮಾರ್ ಶೆಟ್ಟಿ, ಭಂಡಾರಿ ಸಮಾಜ ಸಂಘದ ಪ್ರಮುಖರಾದ ಮಾಧವ ಭಂಡಾರಿ ಕೂಳೂರು, ಗಂಗಾಧರ ಭಂಡಾರಿ ಬಿರ್ತಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರ ಶ್ರೀ ಸುರೇಶ್ ಭಂಡಾರಿ ಕಡಂದಲೆ, ಪ್ರಧಾನ ಕಾರ್ಯದರ್ಶಿಗಳಾದ ಎಂ. ಸೋಮಶೇಖರ್ ಭಂಡಾರಿ, ಮಹಾ ಮಂಡಲದ ಅಧ್ಯಕ್ಷರಾದ ಶ್ರೀ ಸದಾಶಿವ ಭಂಡಾರಿ ಸಕಲೇಶಪುರ, ಭಂಡಾರಿವಾರ್ತೆಯ ಕಾರ್ಯನಿರ್ವಾಹಕರಾದ ಪ್ರಕಾಶ್ ಭಂಡಾರಿ ಕಟ್ಲ, ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಮಾಧವ ಭಂಡಾರಿ ಸಾಗರ,ಮುಂಬಯಿಯ ಸ್ಟ್ಯಾಂಡರ್ಡ್ ಗ್ರೀಸ್ ಅ್ಯಂಡ್ ಆಯಿಲ್ ಲಿಮಿಟೆಡ್ ನ ಚೇರ್ಮನ್ ಶ್ರೀ ಎಸ್.ಡಿ.ಚಂದಾವರ್ಕರ್,ಆರ್ಗಾನಿಕ್ ಇಂಡಸ್ಟ್ರೀಸ್ ಲಿಮಿಟೆಡ್ ನ ಚೇರ್ಮನ್ ಶ್ರೀ ಆನಂದ ಶೆಟ್ಟಿ, ಮುಂಬಯಿಯ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಸಮಾಜ ಸೇವಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ,ಉಡುಪಿಯ ಅಡ್ವೊಕೇಟ್ ಶ್ರೀ ಶಿವಪ್ರಸಾದ್ ಶೆಟ್ಟಿ, ಮುಂಬಯಿಯ ಖ್ಯಾತ ಅಡ್ವೊಕೇಟ್ ಗಳಾದ ಶ್ರೀ ಮಂಜುನಾಥ್ ಹೆಗ್ಡೆ, ಶ್ರೀ ಪ್ರಸಾದ್ ಶೆಟ್ಟಿ, ವರ್ಲ್ಡ್ ಬಂಟ್ಸ್ ಫೌಂಡೇಶನ್ ನ ಅಧ್ಯಕ್ಷರಾದ ಶ್ರೀ ಐಕಾಲ ಹರೀಶ್ ಶೆಟ್ಟಿ, ಮುಂಬಯಿಯ ಬಂಟ್ಸ್ ಒಕ್ಕೂಟದ ಅಧ್ಯಕ್ಷರಾದ ಶ್ರೀ ಪದ್ಮನಾಭ ಪಯ್ಯಾಡೆ,ಮುಂಬಯಿಯ ಖ್ಯಾತ ಚಾರ್ಟೆಡ್ ಅಕೌಂಟೆಂಟ್ ಶ್ರೀ ಸುಧೀರ್ ಶೆಟ್ಟಿ, ಚೇರ್ಮನ್ ಆಫ್ ಇಂಡಸ್ಟ್ರೀಸ್ ಅ್ಯಂಡ್ ಕೆಮಿಕಲ್ಸ್ ನ ಶ್ರೀ ಬಿ.ಆರ್.ರಾವ್, ಮುಂಬಯಿಯ ಸೀನಿಯರ್ ಟ್ಯಾಕ್ಸ್ ಕನ್ಸಲ್ಟೆಂಟ್ ಡಾಕ್ಟರ್ ಆರ್.ಕೆ.ಶೆಟ್ಟಿ, ಖ್ಯಾತ ಕೈಗಾರಿಕೋದ್ಯಮಿ ಹಾಗೂ ವಿಶ್ವ ತುಳು ಕೂಟದ ಅಧ್ಯಕ್ಷರಾದ ಶ್ರೀ ಧರ್ಮಪಾಲ್ ದೇವಾಡಿಗ, ಶ್ರೀ ವಿಶ್ವನಾಥ್ ಮಾಡ ಮುಂಬಯಿ, ಮುಂಬಯಿಯ ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕಾಧ್ಯಕ್ಷರಾದ ಶ್ರೀ ಜಯಕೃಷ್ಣ ಶೆಟ್ಟಿ, ವಿಶ್ವಕರ್ಮ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷರಾದ ಶ್ರೀ ಜಿ.ಟಿ.ಆಚಾರ್ಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಮಟ್ಟದ ಹಲವಾರು ಸಂಘಪ್ರಮುಖ್, ಪ್ರಚಾರಕ್, ಅಪಾರ ಸಂಖ್ಯೆಯ ಸಂಘದ ಕಾರ್ಯಕರ್ತರು,ಸಂಘದ ಹಿರಿಯ ಕಾರ್ಯಕರ್ತರು, ಭಂಡಾರಿ ಸಮಾಜದ ಪ್ರಮುಖರು, ರಾಜಕೀಯ ಧುರೀಣರು ಮಾತ್ರವಲ್ಲದೆ ಮುಂಬಯಿಯ ಎಲ್ಲಾ ಜಾತಿಯ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
 
ದಿವ್ಯಾ ಭಂಡಾರಿ ಮತ್ತು ಅಮರ್ ರವರ  ಮದುವೆಯ ಕಾರ್ಯಕ್ರಮದಲ್ಲಿ ನ ಭೂತೋ ನ ಭವಿಷ್ಯತಿ ಎನ್ನುವಂತಹ ಭೋಜನ ವ್ಯವಸ್ಥೆಯನ್ನು ಏರ್ಪಾಡು ಮಾಡಲಾಗಿತ್ತು. ಬೊಂಬು ವೆಜ್ ಬಿರಿಯಾನಿ, ಸಾಫ್ಟ್ ಪರೋಟಾ,ಕಾಜೂ ಕುರ್ಮಾ, ಕ್ಯಾರೆಟ್ ಹಲ್ವಾ,ಪೇಣಿ ಬಾದಾಮ್ ಮಿಲ್ಕ್, ರಿಯಲ್ ಫ್ರೂಟ್ಸ್ ಪಲ್ಪ್ ಐಸ್ಕ್ರೀಮ್ ಮುಂತಾದ ತಿನಿಸುಗಳ ಭೋಜನ ಉಪಸ್ಥಿತರಿದ್ದ ಅತಿಥಿಗಳ ಮನಸ್ಸಂತೋಷಪಡಿಸಿತು. 
 
ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುವುದರ ಜೊತೆಗೆ  ಭಾರತೀಯತೆಯ ಕಂಪಿನಲ್ಲಿ ಮಿಂದೇಳುವಂತೆ ಮಾಡಿದ ಶ್ರೀ ಕುಂಬ್ಳೆ ಬಾಲಕೃಷ್ಣ ಭಂಡಾರಿ ಮತ್ತು ಶ್ರೀಮತಿ ಸುಪ್ರಭಾ ಬಾಲಕೃಷ್ಣ ಭಂಡಾರಿ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ, ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ನವದಂಪತಿಗಳ ಸಕಲ ಇಷ್ಟಾರ್ಥಗಳನ್ನು ಭಗವಂತನು ಪೂರೈಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃದಯಪೂರ್ವಕವಾಗಿ ಹಾರೈಸುತ್ತದೆ.
 
 
 
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

1 thought on “ಕುಂಬ್ಳೆ ಬಾಲಕೃಷ್ಣ ಭಂಡಾರಿ ಮಗಳ ವಿವಾಹ ಮತ್ತು ಮಂಗಳ ನಿಧಿ ಕಾರ್ಯಕ್ರಮ.

  1. ಬಹಳ ಸುಂದರ ವರ್ತನೆ ಗಳ ಬರಹದಲ್ಲಿ ವಾಣಿಸಿದರೆ,
    ತುಂಬಾ ಚಂದ ಬರೆದಿದ್ದರೆ, ಈ ಮದುವೆ ಸಡಗರದ ಸವಿಯನು ನಾನ್ನು ಕೂಡ ಉಂಡವವನ್ನು, ಇದು ನಮ್ಮ ರಾಷ್ಟ್ರೀಯ ಸಾಯಂ ಸೇವಕ ಸಂಘದವರಿಂದ ಮಾತ್ರ ಸದ್ಯ,
    ತುಂಬಾ ಸಂತೋಷ ಪತಿದೇನೆ
    ದೇವರು ಒಳೆದು ಮಾಡ್ಲಿ,
    ನಮಸ್ಕಾರ,
    ಭಾಸ್ಕರ್ ಸರಪಾಡಿ.

Leave a Reply

Your email address will not be published. Required fields are marked *