
ಮೂಲತಃ ಕಾಸರಗೋಡು ಕುಂಬ್ಳೆ ಮೂಲದ, ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿಯಾಗಿದ್ದ ಶ್ರೀ ಸುಂದರ ಭಂಡಾರಿ ಕುಂಬ್ಳೆಯವರು ಅಲ್ಪಕಾಲದ ಅಸೌಖ್ಯದಿಂದ ಜುಲೈ 27 ರ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಸುಮಾರು 78 ವರ್ಷ ವಯಸ್ಸಾಗಿತ್ತು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತ ಜೀವನ ನಡೆಸುತ್ತಿದ್ದ ಸುಂದರ ಭಂಡಾರಿಯವರು ಪತ್ನಿ ಶ್ರೀಮತಿ ಸುಲೋಚನ ಸುಂದರ ಭಂಡಾರಿ, ಮಕ್ಕಳಾದ ಶ್ರೀಮತಿ ರೇಷ್ಮಾ ಸುಧಾಕರ ಭಂಡಾರಿ, ಶ್ರೀಮತಿ ರಕ್ಷಾ ಹರೀಶ್ ಭಂಡಾರಿ,ಕು.ರಮ್ಯಾ ಸುಂದರ ಭಂಡಾರಿ ಸೇರಿದಂತೆ ಅಳಿಯಂದಿರು,ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಬಳಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ನಾಳೆ(28-07-2018) ಬೆಳಿಗ್ಗೆ 11:00 ಗಂಟೆಗೆ ಮೃತರ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

ಭಗವಂತನು ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಶ್ರೀ ದೇವರು ದುಃಖತಪ್ತ ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.
— ಭಂಡಾರಿವಾರ್ತೆ.