January 18, 2025
Kusuma Bhandary

ದಿವಂಗತ ಬೈಕಾಡಿ ಗೋಪಾಲ್ ಭಂಡಾರಿಯವರ ಪತ್ನಿ ಬೆಂಗಳೂರಿನಲ್ಲಿರುವ ಇಟ್ಟುಮಡುವಿನ ಕುಸುಮ ಭಂಡಾರಿ ನವೆಂಬರ್ 8 ರಂದು ಬೆಳಿಗ್ಗೆ 11.30 ಕ್ಕೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ ಸುಮಾರು 68 ವರ್ಷ ವಯಸ್ಸಾಗಿತ್ತು .

ದಿವಂಗತರು ಒಬ್ಬ ಗಂಡು ಮಗ ಹಾಗೂ ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ .
ದಿವಂಗತ ಕುಸುಮ ಭಂಡಾರಿ ಬೆಂಗಳೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಉಮೇಶ್ ಭಂಡಾರಿಯವರ ಅತ್ತೆ ಹಾಗೂ ಮಾಜಿ ಅಧ್ಯಕ್ಷ ಬಿರ್ತಿ ಶಂಕರ್ ಭಂಡಾರಿ ಯವರ ತಂಗಿ.

ಮೃತರ ಅಂತ್ಯಕ್ರಿಯೆಯು ನವೆಂಬರ್ 9 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನಲ್ಲಿರುವ ಇಟ್ಟುಮಡುವಿನ  ಮನೆಯಲ್ಲಿ ನೆರವೇರಲಿದೆಯೆಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ . 

ಕುಸುಮ ಭಂಡಾರಿಯವರ ನಿಧನದಿಂದ ದುಃಖದಲ್ಲಿರುವ ಕುಟುಂಬಸ್ಥರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಶ್ರೀ ದೇವರು ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *