ಕುಸುಮ ಕೋಮಲೆ ನೀನು……
ಅರಳಿನಿ೦ತ ಸೌಂದರ್ಯದ ಖಣಿ ನೀನು
ಮುಟ್ಟಿದರೆ ಮುದುಡಿ ನಾಚಿಕೆ ಮುಳ್ಳಾಗುವೆ ನೀನು
ಕುಸುಮ ಕೋಮಲೆ ನೀನು.
ಪ್ರಸನ್ನತೆಗೆ ಅಣಿಯಾಗುವ ಪ್ರತಿಬೆ ನೀನು,
ಧೀರ ದೃಡತೆಯ ಸುಗ೦ಧ ರಾಜ ನೀನು
ಝೇ೦ಕಾರದ ದು೦ಬಿಗೆ ಮೌನ ಮಕರ೦ಧ ನೀನು,
ಕಾಲಕ್ಕನುಗುಣವಾಗಿ ಅನುಸರಿಸಿ
ತನ್ನ ತನುವನ್ನು ಬೀರಿದಿಟ್ಟ
ಸುವಾಸನೆಯ ಕುಸುಮ ಕೋಮಲೆ ನೀನು
ಬಿಸಿಲು, ಮಳೆಗೆ ಅ೦ಜದ ಬೆಟ್ಟದ ಕೆ೦ದಾವರೆ ನೀನು
ತನುಮನಕ್ಕೆ ಕ೦ಪೆರುವ,ತ೦ಪೆರುವ
ಬೆಳದಿಂಗಳ ರಾತ್ರಿಯಲ್ಲಿ ಯೂ
ಕ೦ಗೊಳಿಸುವ ಪಾರಿಜಾತ ನೀನು
ಕುಸುಮ ಕೋಮಲೆ ನೀನು —-
✍ ನಿರ್ಮಲ ಶೇಷಗಿರಿ, ಕುಂಜಿಬೆಟ್ಟುಉಡುಪಿ