
ಫೆಬ್ರವರಿ 12,2020 ರ ಬುಧವಾರ ಉಡುಪಿಯ ಎಲ್ಲು ಭಂಡಾರಿ ಮನೆಯ ಹಿರಿಯರಾದ ಶ್ರೀಮತಿ ಅಪ್ಪಿ ಜೋಗಿ ಭಂಡಾರಿಯವರು ದೈವಾಧೀನರಾಗಿ ಎರಡು ವರ್ಷ ಗತಿಸಿತು.ಅವರ ಚಿರಸ್ಮರಣೆಗಾಗಿ ಮಕ್ಕಳು,ಅಳಿಯಂದಿರು,ಸೊಸೆಯಂದಿರು,ಮೊ ಮ್ಮಕ್ಕಳು,ಮರಿ ಮಕ್ಕಳು,ಕುಟುಂಬಸ್ಥರು ಒಗ್ಗೂಡಿ ಎರಡನೇ ವರ್ಷದ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿಸಿದರು.

ಮುಂಬಯಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಮಗ ಶ್ರೀ ಉಮೇಶ್.ಜೆ.ಭಂಡಾರಿ,ಶ್ರೀ ಪ್ರಕಾಶ್.ಜೆ.ಭಂಡಾರಿ, ಹೆಣ್ಣು ಮಕ್ಕಳಾದ ಶ್ರೀಮತಿ ಚಂದ್ರಾವತಿ.ಆರ್.ಭಂಡಾರಿ, ಶ್ರೀಮತಿ ಗೀತಾ.ಎಸ್.ಭಂಡಾರಿ, ಶ್ರೀಮತಿ ಆಶಾ.ಎಸ್.ಭಂಡಾರಿ, ಮೊಮ್ಮಕ್ಕಳು,ಮರಿಮಕ್ಕಳು ಹಾಗೂ ಅಪಾರ ಬಂಧುವರ್ಗದವರು ಅಪ್ಪಿ ಜೋಗಿ ಭಂಡಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪುಣ್ಯಸ್ಮರಣೆ ಮಾಡಿದರು.

ಎರಡನೇ ವರ್ಷದ ಚಿರಸ್ಮರಣೆಯ ಈ ಸಂದರ್ಭದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಉಡುಪಿಯ ಪ್ರಸಿದ್ಧ ಎಲ್ಲು ಭಂಡಾರಿ ಹೌಸ್ ಮಾರುತಿ ವೀಥಿಕಾ ದ ಹಿರಿಯರಾಗಿದ್ದ ಇವರು ದಿವಂಗತ ಎಲ್ಲು ಭಂಡಾರಿಯವರ ಮೊಮ್ಮಗಳು.ಶಿಕ್ಷಣಕ್ಕೆ ಒತ್ತುಕೊಟ್ಟು ಕುಟುಂಬದ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸುಶಿಕ್ಷಿತರಾಗಬೇಕು, ತನ್ಮೂಲಕ ಭಂಡಾರಿ ಕುಟುಂಬಕ್ಕೆ ಒಳ್ಳೆಯ ಹೆಸರು ಗಳಿಸಬೇಕೆಂದು ನುಡಿದು ಅದರಂತೆ ನಡೆದುಕೊಂಡ ಹಿರಿಯರಾದ ಅಪ್ಪಿ ಜೋಗಿ ಭಂಡಾರಿಯವರ ಆತ್ಮಕ್ಕೆ ಭಗವಂತನು ಸಧ್ಗತಿ ಕರುಣಿಸಲಿ ಮತ್ತು ಕುಟುಂಬಸ್ಥರ ಮೇಲೆ ಅವರ ಕೃಪಾಶೀರ್ವಾದ ಸದಾಕಾಲವೂ ಇರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.
-ಭಂಡಾರಿ ವಾರ್ತೆ