ಬಂಟ್ವಾಳ ತಾಲೂಕು ನಾವೂರ ಗ್ರಾಮದ ಶ್ರೀ ದಿವಂಗತ ಚಂದು ಭಂಡಾರಿ ಮತ್ತು ಶ್ರೀಮತಿ ಕಮಲ ಚಂದು ಭಂಡಾರಿ ದಂಪತಿಯ ಪುತ್ರ ಲಕ್ಷ್ಮಣ ಭಂಡಾರಿ (49 ವರ್ಷ) ಹೊಟ್ಟೆ ನೋವಿನಿಂದಾಗಿ ಮಾರ್ಚ್ 28 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು ಕೆಲವು ದಿನಗಳ ನಂತರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡ ಲಕ್ಷ್ಮಣ ಭಂಡಾರಿ ಏಪ್ರಿಲ್ 9 ನೇ ಗುರುವಾರದಂದು ರಾತ್ರಿ ಒಮ್ಮೆಲೇ ಆರೋಗ್ಯ ದಲ್ಲಿ ಏರುಪೇರು ಆಗಿ ನಿಧನರಾದರು ಆರ್ಥಿಕವಾಗಿ ಬಹಳಷ್ಟು ನೋವನ್ನು ಅನುಭವಿಸುತ್ತಿದ್ದ ಮನೆಗೆ ಇವರ ದುಡಿಮೆ ಕೂಡಾ ಆಧಾರವಾಗಿತ್ತು ಖಾಸಗಿ ಬಸ್ಸಿನಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮಣ ಭಂಡಾರಿ ಮನೆಯ ಸಂಸಾರಿಕ ಸಮಸ್ಯೆಯಿಂದಾಗಿ ಅವಿವಾಹಿತರಾಗಿದ್ದಾರೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಕೋವಿಡ್ -19 ಚಿಕಿತ್ಸೆಗಾಗಿ ಸರ್ಕಾರ ಮಾರ್ಪಾಡು ಮಾಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಅತ್ತಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಸಹೋದರ ಶ್ರೀ ಶೇಖರ ಭಂಡಾರಿ ಆರಂಭದಲ್ಲಿ ಒಡವೆ ಮಾರಾಟ ಮಾಡಿ 80000 ರೂಪಾಯಿ ಮುಂಗಡ ಪಾವತಿಸಿದ್ದರು.
ಲಕ್ಷ್ಮಣ ಭಂಡಾರಿ ನಿಧನದ ಬಳಿಕ ಆಸ್ಪತ್ರೆಯ ಆಡಳಿತ ಮಂಡಳಿ ಶವವನ್ನು ಬಿಟ್ಟು ಕೊಡಲು ಉಳಿದ ಮೊತ್ತ 55000 ರೂಪಾಯಿ ಪಾವತಿಸಲು ತಾಕೀತು ಮಾಡಿತ್ತು. ಕುಟುಂಬಕ್ಕೆ ಮತ್ತೊಮ್ಮೆ ಅಷ್ಟೊಂದು ಹಣ ಪಾವತಿಸಲು ಕಷ್ಟವಾಗಿತ್ತು . ಆಗಲೇ ಲಕ್ಷ್ಮಣ ಭಂಡಾರಿ ಕುಟುಂಬದ ಸಮಸ್ಯೆಯ ಮಾಹಿತಿಯನ್ನು ಪಡೆದ ಡಿವೈಎಪ್ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಶ್ರೀ ಸಂತೋಷ ಬಜಾಲ್ ಆಸ್ಪತ್ರೆಗೆ ಧಾವಿಸಿ ಆಸ್ಪತ್ರೆಯ ಆಡಳಿತ ಮಂಡಳಿ ಜಿಲ್ಲಾ ವೈದ್ಯಾಧಿಕಾರಿ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ ಉಳಿದ ಯಾವುದೇ ಮೊತ್ತವನ್ನು ಕುಟುಂಬಸ್ಥ ರಿಂದ ಪಾವತಿಸಲು ಸಾಧ್ಯವಿಲ್ಲ ಎಂಬುದಾಗಿ ಒತ್ತಡ ಹಾಕಿದ್ದರು ಇದನ್ನು ಮನಗಂಡ ಜಿಲ್ಲಾ ವೈದ್ಯಾಧಿಕಾರಿ ಬಾಕಿ ಮೊತ್ತವನ್ನು ಆಯುಷ್ಮಾನ್ ಮೂಲಕ ಭರಿಸಲಾಗುವುದು ಕೂಡಲೇ ಶವವನ್ನು ಬಿಟ್ಟು ಕೊಡಲು ಖಾಸಗಿ ಆಸ್ಪತ್ರೆಗೆ ಸೂಚನೆ ನೀಡಿದರು ಅವರ ಸೂಚನೆಯ ಮೇರೆಗೆ ಶವವನ್ನು ಆಸ್ಪತ್ರೆಯ ಆಡಳಿತ ಮಂಡಲಿ ಕುಟುಂಬ ವಗ೯ಕ್ಕೆ ಹಸ್ತಾಂತರ ಮಾಡಿ ಮನೆಯ ವರೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿತ್ತು. ಆಪತ್ತು ಕಾಲದಲ್ಲಿ ಸಹಾಯಕ್ಕೆ ಬಂದ ಸಂತೋಷ ಬಜಾಲ್ ಅವರಿಗೆ ದಿವಂಗತ ಲಕ್ಷ್ಮಣ ಭಂಡಾರಿ ಸಹೋದರ ಶೇಖರ್ ಭಂಡಾರಿ (9902238264) ಭಂಡಾರಿ ವಾರ್ತೆಯ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ನಾಗರಿಕರಿಗೆ ಯಾವುದೇ ಸಂದರ್ಭದಲ್ಲಿ ಯಾರಿಂದಲ್ಲೇ ಆಗಲಿ ಅನ್ಯಾಯವಾದರೆ ತಾವು ಹಾಗೂ ನಮ್ಮ ಸಂಘಟನೆ ಶೀಘ್ರವಾಗಿ ಸ್ಪಂದಿಸಿ ನ್ಯಾಯ ದೊರಕಿಸಿ ಕೊಟ್ಟು ಸಮಾಜಮುಖಿ ಕೆಲಸ ಮಾಡುವುದೇ ನಮ್ಮ ಮೂಲ ಉದ್ದೇಶ ಎಂದು ಸಂತೋಷ ಬಜಾಲ್ (9449225636) ಭಂಡಾರಿ ವಾರ್ತೆಯ ಜೊತೆ ತಮ್ಮ ಮನದಾಳ ಹಂಚಿಕೊಂಡರು.
ಲಕ್ಷ್ಮಣ ಭಂಡಾರಿಯವರು ತಾಯಿ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಮತ್ತು ಅಪಾರ ಸಂಖ್ಯೆಯಲ್ಲಿ ಕುಟುಂಬ ವರ್ಗವನ್ನು ಅಗಲಿದ್ದಾರೆ ಮೃತರ ಆತ್ಮಕ್ಕೆ ಭಗವಂತನು ಮೋಕ್ಷವನ್ನು ಕರುಣಿಸಿ ಮನೆಯವರಿಗೆ ಮತ್ತು ಕುಟುಂಬಸ್ಥರಿಗೆ ಅಗಲುವಿಕೆಯ ಶಕ್ತಿಯನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಭಕ್ತಿ ಪೂರ್ವಕ ಪ್ರಾರ್ಥನೆ.
-ಭಂಡಾರಿ ವಾರ್ತೆ