
ಮಂಗಳೂರಿನ ಅಳಪೆ ಕಲ್ಲಕಟ್ಟದ ದಿವಂಗತ ಸುಂದರ ಭಂಡಾರಿಯವರ ಧರ್ಮಪತ್ನಿ ಲೀಲಾ ಭಂಡಾರಿಯವರು (82ವರ್ಷ ) ಅಲ್ಪ ಕಾಲದ ಅಸೌಖ್ಯದಿಂದ ಇಂದು ಮಧ್ಯಾಹ್ನ1.45 ಕ್ಕೆ ನಿಧನ ಹೊಂದಿದರು.
ದಿವಂಗತರು ಗಂಡು ಮಕ್ಕಳಾದ ಲೋಕೇಶ್ ಭಂಡಾರಿ ಸೊಸೆ ವನಿತಾ , ಜಯಕರ ಭಂಡಾರಿ ಸೊಸೆ ಕುಮುದಾ , ಹೆಣ್ಣು ಮಕ್ಕಳಾದ ಶೋಭಾ ಮತ್ತು ಅಳಿಯ ವಿಠಲ ಭಂಡಾರಿ, ಪೂರ್ಣಿಮಾ ಅಳಿಯ ರಾಜೇಶ್ ಭಂಡಾರಿ , ಮೊಮ್ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ .
ದಿವಂಗತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ, ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ತುಂಬಲಿ ಎಂದು ಭಂಡಾರಿ ವಾರ್ತೆಯು ಪ್ರಾರ್ಥಿಸುತ್ತದೆ.
-ಭಂಡಾರಿ ವಾರ್ತೆ