ಉಡುಪಿ ಬನ್ನಂಜೆಯ ದಿವಂಗತ ಮುದ್ದು ಭಂಡಾರಿಯವರ ಪತ್ನಿ ಶ್ರೀಮತಿ ಲೀಲಾ ಮುದ್ದು ಭಂಡಾರಿಯವರು ಅಲ್ಪಕಾಲದ ಅಸೌಖ್ಯದಿಂದ ಅಕ್ಟೋಬರ್ 23, 2018 ರ ಮಂಗಳವಾರ ಬೆಳಗಿನ ಜಾವ ನಿಧನ ಹೊಂದಿದರು.
ಲೀಲಾ ಭಂಡಾರಿಯವರಿಗೆ ಆರು ಜನ ಗಂಡು ಮಕ್ಕಳು,ಇಬ್ಬರು ಹೆಣ್ಣು ಮಕ್ಕಳು. ಅವರಲ್ಲಿ ಹಿರಿಯ ಮಗ ಕರುಣಾಕರ ಭಂಡಾರಿಯವರು ಇತ್ತೀಚಿಗೆ ನಿಧನ ಹೊಂದಿದ್ದರು. ಮೃತರು ಐವರು ಗಂಡು ಮಕ್ಕಳು, ಸೊಸೆಯಂದಿರು,ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು,
ಮೊಮ್ಮಕ್ಕಳು, ಮರಿಮಕ್ಕಳು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಿ,ಅಗಲಿದ ಹಿರಿಯ ಚೇತನದ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.
“ಭಂಡಾರಿವಾರ್ತೆ.”