January 18, 2025
Leela Vital Bhandary Bajpe

ದ್ಯಪಾಡಿ ಕುಟುಂಬದ ಹಿರಿಯರಾದ ದಿವಂಗತ ವಿಠ್ಠಲ ಭಂಡಾರಿಯವರ ಪತ್ನಿ ಬಜ್ಪೆ ಲೀಲಾ ವಿಠ್ಠಲ ಭಂಡಾರಿಯವರು ಆಗಸ್ಟ್ 5 ರ ಭಾನುವಾರ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ನಿಧನ ಹೊಂದಿದರು.ಅವರಿಗೆ ಸುಮಾರು 84 ವರ್ಷ ವಯಸ್ಸಾಗಿತ್ತು.


ಸುಮಾರು ಎರಡು ತಿಂಗಳುಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಆಗಸ್ಟ್ ಐದರ ಭಾನುವಾರ ಬೆಳಿಗ್ಗೆ 11:45 ಕ್ಕೆ ಕೊನೆಯುಸಿರೆಳೆದರು.ಅವರು ಒಬ್ಬ ಮಗ,ಆರು ಜನ ಹೆಣ್ಣು ಮಕ್ಕಳು,ಸೊಸೆ,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಅಪಾರ ಪ್ರಮಾಣದ ಬಂಧು ವರ್ಗದವರನ್ನು ಅಗಲಿದ್ದಾರೆ.


ನಮ್ಮ ಭಂಡಾರಿವಾರ್ತೆಯ ಪ್ರಾಯೋಜಕರಲ್ಲೊಬ್ಬರಾದ ಬಜ್ಪೆಯ ಅರುಣ್ ಬಿಲ್ಡರ್ಲ್ಸ್ ಮತ್ತು ಡೆವಲಪರ್ಸ್ ನ ಶ್ರೀ ಅರುಣ್ ಕುಮಾರ್ ಭಂಡಾರಿಯವರ ತಾಯಿ ಶ್ರೀಮತಿ ನಳಿನಿ ವಸಂತ್ ಕುಮಾರ್ ಭಂಡಾರಿಯವರ ಮಾತೃಶ್ರೀಯವರಾದ ಲೀಲಾ ವಿಠ್ಠಲ ಭಂಡಾರಿಯವರ ಆತ್ಮ ಸಧ್ಗತಿಗಾಗಿ…
ಉತ್ತರಕ್ರಿಯೆ
ಕಾರ್ಯಕ್ರಮವು ಆಗಸ್ಟ್ 17 ರ ಶುಕ್ರವಾರ ಮದ್ಯಾಹ್ನ 12:30 ಕ್ಕೆ ಬಜ್ಪೆ,ಸ್ವಾಮಿಲಪದವಿನಲ್ಲಿರುವ ರೋಟರಿ ಭವನದಲ್ಲಿ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.


ಅಗಲಿದ ಹಿರಿಯರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ,ದುಃಖತಪ್ತ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.

 

-ಭಂಡಾರಿವಾರ್ತೆ

Leave a Reply

Your email address will not be published. Required fields are marked *