ನವೆಂಬರ್ ತಿಂಗಳ 4 ಮತ್ತು 5 ರಂದು ಮಂಗಳೂರಿನ ನೆಹರೂ ಕ್ರೀಡಾಂಗಣದಲ್ಲಿ ಜರುಗಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರೀತಿ ಭಂಡಾರಿ ಮತ್ತು ಲೀಕ್ಷಿತಾ ಭಂಡಾರಿ ಇವರು ಪ್ರಥಮ ಸ್ಥಾನ ಪಡೆದಿದ್ದಾರೆ. ಸುರತ್ಕಲ್ ನ ಹೋಲಿ ಫ್ಯಾಮಿಲಿ ಸ್ಕೂಲ್ ನಲ್ಲಿ ಪ್ರೀತಿ ಭಂಡಾರಿ 9 ನೇ ತರಗತಿಯಲ್ಲಿ ಮತ್ತು ಲೀಕ್ಷಿತಾ ಭಂಡಾರಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ನಿತಿನ್. ಎನ್.ಸುವರ್ಣ ಇವರ ಮಾರ್ಗದರ್ಶನದಲ್ಲಿ ಕರಾಟೆ ಕಲಿಯುತ್ತಿರುವ ಇವರು ಮೂಲತಃ ಮಡಿಕೇರಿಯ ಕಡಗದಾಳು ನಿವಾಸಿಗಳಾಗಿದ್ದು, ಪ್ರಸ್ತುತ ಸುರತ್ಕಲ್ ನಲ್ಲಿ ವಾಸಿಸುತ್ತಿರುವ ಶ್ರೀ ಸಂತೋಷ್ ಭಂಡಾರಿ ಮತ್ತು ಶ್ರೀಮತಿ ಜ್ಯೋತಿ ಸಂತೋಷ್ ಭಂಡಾರಿ ಯವರ ಸುಪುತ್ರಿಯರು.
ಇಂತಹ ಯುವಪ್ರತಿಭೆಗಳನ್ನು ಯಾವತ್ತೂ ಪ್ರೋತ್ಸಾಹಿಸುವ ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಕರಾಟೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಭಂಡಾರಿ ಸಹೋದರಿಯರಿಗೆ ಶುಭ ಹಾರೈಸುತ್ತದೆ. ಕರಾಟೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ, ತನ್ಮೂಲಕ ಭಂಡಾರಿ ಸಮುದಾಯಕ್ಕೆ ಮತ್ತು ಹೆತ್ತವರಿಗೆ ಇನ್ನಷ್ಟು ಗೌರವ ತಂದುಕೊಡಲಿ ಎಂದು ಸಮಸ್ತ ಭಂಡಾರಿ ಕುಟುಂಬದ ಪರವಾಗಿ ಶುಭ ಕೋರುತ್ತದೆ.
✍: ಭಾಸ್ಕರ ಭಂಡಾರಿ ಶಿರಾಳಕೊಪ್ಪ, ಭಂಡಾರಿ ವಾರ್ತೆ