January 18, 2025
Magala modala preeti

ಮಗಳ ಮೊದಲ ಪ್ರೀತಿ “ಅಪ್ಪ”

ಸೌಮ್ಯತೆಯ ಸಾಗರ ಅಪ್ಪ,
ಆಗಾಧ ಪ್ರೀತಿಯ ಆಗರ ಅಪ್ಪ,
ಮುಗ್ಧತೆಯ ಸ್ವರೂಪ ನನ್ನಪ್ಪ…
ನನ್ನ ಲಾಲಿಸಿದ ಜನುಮದಾತ,
ನಿಷ್ಕಲ್ಮಶ ಪ್ರೀತಿ ತೋರಿದ ಪುಣ್ಯಾದಾತ,

ಮಗಳ ಮೊದಲ ಪ್ರೀತಿ ನೀವಪ್ಪ…
ಕಲೆಯ ಆರಾಧಿಸುವ ಕಲೆಗಾರ,
ಭಕ್ತಿಯಲಿ ಭಜಿಸುವ ಹಾಡುಗಾರ,
ಯಕ್ಷಲೋಕದ ಧ್ರುವತಾರೆ ನನ್ನಪ್ಪ…

ಸ್ವಾರ್ಥತೆಯ ತದ್ವಿರುದ್ಧ ನೀವು,
ಸಹೃದಯ, ಸಜ್ಜನಿಕೆಯ ಸರಳ ವ್ಯಕ್ತಿ ತಾವು,
ಮುದ್ದು ಮುಖದ ಮುಗ್ಧಜೀವಿ ನೀವಪ್ಪ..
ತಿದ್ದಿ ತೀಡಿ ಸಲಹಿದ ಗುರು
ನನ್ನ ಪ್ರೀತಿಯ ಮೊದಲ ದೇವರು,

ಸಕಲಕಲಾವಲ್ಲಭ ನನ್ನಪ್ಪ…
ಮಮತೆಯ ಕಡಲು ಅಪ್ಪ ,
ಉತ್ಸಾಹ ತುಂಬುವ ಚಿಲುಮೆ ಅಪ್ಪ,
ಅಪರೂಪದ ಮಾಣಿಕ್ಯ ನೀವಪ್ಪ…
ಅಕ್ಕರೆ ಮಾತಲಿ ಸಿಹಿ ನೀಡುವವರು,

ಎಲ್ಲ ವಿಧದಲ್ಲೂ ನನಗೆ ಜೊತೆಯಾದವರು,
ನಿಮ್ಮ ಪ್ರೀತಿ ಅಕ್ಕರೆಯ ಹೇಗೆ ಮರೆಯಲಿ ಅಪ್ಪ….
ಬಂಧು ಬಳಗ ಎಲ್ಲರಿಹರು,
ಅಪ್ಪ ಅನ್ನುವ ಆಸ್ತಿ ಬಿಟ್ಟು..
ಅಕ್ಕರೆ ಪ್ರೀತಿ ನೀಡುತಿಹರು,

ಅಪ್ಪ ನೆಂಬ ವ್ಯಕ್ತಿಯ ಬಿಟ್ಟು…
ನಿಮ್ಮ ಮುದ್ದು ಮಗಳ ಪ್ರಪಂಚ ನೀವಪ್ಪ…
ಮರೆಯಲಾಗದ ಕ್ಷಣಗಳ ನೀಡಿ,
ಈಗ ನೆನಪುಗಳಾಗಿ ಕಾಡಿ,
ಯಾಕೆ ಮರೆಯಾದಿರಿ ಅಪ್ಪ…?

✍️ಸುಪ್ರೀತ ಭಂಡಾರಿ, ಸೂರಿಂಜೆ

Leave a Reply

Your email address will not be published. Required fields are marked *