January 18, 2025
magic-hand
ಮಂಗಳೂರು ಮತ್ತು ಆಸುಪಾಸಿನ ನಿವಾಸಿಗಳಿಗೆ ಒಂದು ಸಿಹಿ ಸುದ್ದಿ. ಮಂಗಳೂರಿನಲ್ಲಿ “ಮ್ಯಾಜಿಕ್ ಹ್ಯಾಂಡ್ಸ್” ಹೆಸರಿನ ಅಂತಾರಾಷ್ಟ್ರೀಯ ಮಟ್ಟದ ಸಂಪೂರ್ಣ ಸೌಂದರ್ಯದ ಟ್ರಾನ್ಸ್ ಫಾರ್ಮೇಷನ್ ಸೆಂಟರ್.. ಫ್ಯಾಮಿಲಿ ಸಲೂನ್ ಬ್ಯೂಟಿ ವೆಲ್ನೆಸ್ ಸೆಂಟರ್ ಆಗಸ್ಟ್ 31, 2020 ರ ಸೋಮವಾರ ಸಂಜೆ ಸರಳವಾದ ಪೂಜೆಯೊಂದಿಗೆ ಅನಾವರಣಗೊಂಡಿದೆ.
 
 
ಇದು ಪ್ರಕಾಶ್ ಭಂಡಾರಿ ಕಟ್ಲ ವಿದ್ಯಾ ಪ್ರಕಾಶ್ ಭಂಡಾರಿ ಮತ್ತು ಮಕ್ಕಳು ವಿಪಿನ್, ವಿಖ್ಯಾತ್ ಇವರ ಕನಸಿನ ಕೂಸು. ಒಂದೇ ಸೂರಿನಡಿಯಲ್ಲಿ ಸೌಂದರ್ಯ ಪ್ರಪಂಚದ ಎಲ್ಲ ಸೇವೆಗಳು ಗ್ರಾಹಕರಿಗೆ ಲಭ್ಯವಾಗುವಂತೆ “ಮ್ಯಾಜಿಕ್ ಹ್ಯಾಂಡ್ಸ್” ಡ್ರೀಮ್ ಪ್ರಾಜೆಕ್ಟ್ ಅನ್ನು ರೂಪಿಸಲಾಗಿದೆ. ಮಂಗಳೂರು ಕದ್ರಿಯ ಬಂಟ್ಸ್ ಹಾಸ್ಟೆಲ್ ನಿಂದ ಕದ್ರಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಸಿ.ವಿ.ನಾಯಕ್ ಹಾಲ್ ಪಕ್ಕದ ಪ್ರಕೃತಿ ಬಿಲ್ಡಿಂಗ್ ನ ಗ್ರೌಂಡ್ ಫ್ಲೋರ್ ನ ಎರಡೂವರೆ ಸಾವಿರ ಸ್ಕ್ವೇರ್ ಫೀಟ್ ವಿಸ್ತೀರ್ಣದ ಮಳಿಗೆಯಲ್ಲಿ “ಮ್ಯಾಜಿಕ್ ಹ್ಯಾಂಡ್ಸ್” ಅತ್ಯಾಧುನಿಕ ಬ್ಯೂಟಿ ಟ್ರಾನ್ಸ್ ಫಾರ್ಮಿಂಗ್ ವೆಲ್ನೆಸ್ ಸೆಂಟರ್  ತನ್ನ ಸೇವೆಯನ್ನು ಆರಂಭಿಸಿದೆ. 

 
 
ಮುಖ ಸೌಂದರ್ಯದ ಹೊಸ ಸಂಶೋಧನೆ, ದೇಹ ಸೌಂದರ್ಯದ ವಿನೂತನ ಸೇವೆಗಳು, ನುರಿತ ಡಾಕ್ಟರ್ ಗಳಿಂದ ಕೂದಲು ಮತ್ತು ಚರ್ಮದ ಆರೈಕೆಯ ಸಲಹಾ ಕೇಂದ್ರ, ಕೂದಲು ಕಸಿ, ಕೂದಲು ಜೋಡಣೆ, ಆಯುರ್ವೇದ ಪ್ರಕೃತಿ ಚಿಕಿತ್ಸೆ, ಲೇಸರ್ ಚಿಕಿತ್ಸೆ, ಸ್ಟೋನ್ ಥೆರಪಿ, ರೇಖಿ ಚಿಕಿತ್ಸೆ, ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸೇವೆಗಳು, ಸೌಂದರ್ಯವರ್ಧಕ ಸಾಧನಗಳ ಮಾರಾಟ ಕೇಂದ್ರ…. ಹೀಗೆ ಹಲವಾರು ಸೇವೆಗಳಿಂದಾಗಿ “ಮ್ಯಾಜಿಕ್ ಹ್ಯಾಂಡ್ಸ್”  ಸೌಂದರ್ಯದ ಸಂಪೂರ್ಣ ಬದಲಾವಣೆಯ ಕೇಂದ್ರವಾಗಿ ಗ್ರಾಹಕ ಸ್ನೇಹಿಯಾಗಿ ಸೇವೆ ನೀಡಲಿದೆ.
 
 
Chakras: A Beginner's Guide to the 7 Chakras
 
 
 
 
ಕೂದಲು ಕಸಿ ಮತ್ತು ಕೂದಲು ಜೋಡಣೆಯಲ್ಲಿ ಮುಂಬಯಿ ಮತ್ತು ವಿದೇಶಗಳಲ್ಲಿ ಈಗಾಗಲೇ ಅಗ್ರಗಣ್ಯರೆಂದು ಖ್ಯಾತನಾಮರಾಗಿರುವ ನವೀನ್ ಭಂಡಾರಿ ಸಾರಥ್ಯದ “ಫಿನಿಶಿಂಗ್ ಟಚ್” ಕೂಡ ಮಂಗಳೂರಿನ “ಮ್ಯಾಜಿಕ್ ಹ್ಯಾಂಡ್ಸ್”  ನೊಂದಿಗೆ ಕೈಜೋಡಿಸಲಿದೆ. 
 
 
 
 
 
ಇವರೊಂದಿಗೆ ಕೆಎಂಸಿ ಆಸ್ಪತ್ರೆಯ ಖ್ಯಾತ ಡಾಕ್ಟರುಗಳು ಗ್ರಾಹಕರಿಗೆ ಸೌಂದರ್ಯ ಸಲಹೆಗಳನ್ನು ನೀಡಲಿದ್ದಾರೆ. ಮಂಗಳೂರು, ಬೆಂಗಳೂರು,  ದೆಹಲಿ, ಮುಂಬಯಿ,  ನೇಪಾಳ ಮುಂತಾದ ಭಾಗಗಳಿಂದ ಆಯ್ದ ನುರಿತ ಕಲಾಕಾರರು ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡಲಿದ್ದಾರೆ. ಇವರೆಲ್ಲರಿಗೆ ಮುಕುಟಪ್ರಾಯವಾಗಿ  VLCC ಯಿಂದ “ಮ್ಯಾಜಿಕ್ ಹ್ಯಾಂಡ್ಸ್”  ಪ್ರಶಸ್ತಿ ಗಳಿಸಿರುವ ಶ್ರೀಮತಿ ವಿದ್ಯಾ ಪ್ರಕಾಶ್ ಭಂಡಾರಿಯವರು ಸಂಸ್ಥೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. 
 
 
ಈ ಸಂದರ್ಭದಲ್ಲಿ ಶ್ರೀಮತಿ ವಿದ್ಯಾ ಪ್ರಕಾಶ್ ಭಂಡಾರಿಯವರ ಬಗ್ಗೆ ಪ್ರಸ್ತಾಪಿಸಲೇಬೇಕು. ಶ್ರೀಮತಿ ವಿದ್ಯಾರವರು 1998ರಲ್ಲಿ ಬ್ಯೂಟೀಷಿಯನ್  ವೃತ್ತಿ ಶಿಕ್ಷಣ ವನ್ನು ಕಲಿತು, 1999 ರಲ್ಲಿ ಮಂಗಳೂರಿನ ತಾಜ್ ಮಂಜರಾನ್ ಹೋಟೆಲ್ ನಲ್ಲಿ “ದಿ ಸಲೂನ್” ಎಂಬ ಸಂಸ್ಥೆಯನ್ನು ಆರಂಭಿಸಿದರು. ನಂತರ ಬೆಂಗಳೂರಿನ ಗೋಲ್ಡನ್ ಪಾಮ್ ರೆಸಾರ್ಟ್ ಮತ್ತು ಸ್ಪಾದಲ್ಲಿ ಟೀಮ್ ಲೀಡರ್ – ಸ್ಪಾ ಆಗಿ ವೃತ್ತಿಯನ್ನು  ಆರಂಭಿಸಿ, ನ್ಯೂಜಿಲೆಂಡ್ ನ  “ಈಸ್ಟ್ ಡೇ ಸ್ಪಾ” ದಲ್ಲಿ ಕನ್ಸಲ್ಟೆಂಟ್ ಮತ್ತು ಕೋ ಆರ್ಡಿನೇಟರ್ ಆಗಿ ಸೇವೆ ಸಲ್ಲಿಸಿ ಭಾರತಕ್ಕೆ ವಾಪಸ್ಸಾದ ನಂತರ ಸ್ಪಾ ಟ್ರೈನರ್ ಆಗಿ ಕನ್ಸಲ್ಟೆನ್ಸಿ ಆರಂಭಿಸಿದರು. ಹಾಗೆಯೇ ಒಮ್ಮೆ VLCC ಸಂಸ್ಥೆಗೆ ಟ್ರೈನರ್ ಆಗಿ ತೆರಳಿದ್ದ ಸಂದರ್ಭದಲ್ಲಿ ಇವರ ಕಾರ್ಯವೈಖರಿಯನ್ನು ಮೆಚ್ಚಿ VLCC ಆಡಳಿತ ಮಂಡಳಿ ಇವರ ಮನವೊಲಿಸಿ ಕಂಪನಿಯಲ್ಲಿ ಟ್ರೈನರ್ – ಟೀಮ್ ಲೀಡರ್ – ಸ್ಪಾ ಹುದ್ದೆಯನ್ನು ನೀಡಿತು. ನಂತರ ಹಂತ ಹಂತವಾಗಿ ವಿವಿಧ ಉನ್ನತ ಹುದ್ದೆಗಳನ್ನು ಗಳಿಸಿ, ಮತ್ತೆ ಬಡ್ತಿಯನ್ನು ಹೊಂದಿ  ಟೆಕ್ನಿಕಲ್ ಹೆಡ್ –  ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸ್ಥಾನವನ್ನು ಅಲಂಕರಿಸಿ, ಸ್ಪಾ ಸೇವೆಯಲ್ಲಿ ವಿನೂತನ ಸಂಶೋಧನೆ ಮುಖಾಂತರ ಆರೋಗ್ಯ ವರ್ಧಕ ಸ್ಪಾ ಥೆರಪಿಗಳನ್ನು ವಿನ್ಯಾಸಗೊಳಿಸಿದರು. 
 
 
 
ಅಮೆರಿಕದ ಪ್ರಖ್ಯಾತ ನೋವಾಲ್ಯಾಷ್ Novalash  ಸಂಸ್ಥೆ – ಕಣ್ಣಿನ ರೆಪ್ಪೆಗಳ ಸೌಂದರ್ಯ ವರ್ಧನೆ ಸಂಸ್ಥೆಯ ಚೀಫ್ ಆಪರೇಷನ್ ಆಫೀಸರ್ ಆಗಿ ಗುರಗಾಂವ್ ನಲ್ಲಿ ಸೇವೆ ಸಲ್ಲಿಸಿದರು. 
 
 
ಬೆಂಗಳೂರಿನಲ್ಲಿ “ನ್ಯೂ ಲುಕ್ಸ್ ಸಲೂನ್” ಪ್ರಾರಂಭಿಸುವುದರೊಂದಿಗೆ ಸ್ವಂತ ಉದ್ದಿಮೆಯನ್ನಾರಂಭಿಸಿರು. ಸ್ಪಾ ಕನ್ಸಲ್ಟೆನ್ಸಿ ಹಾಗೂ ಅಂತಾರಾಷ್ಟ್ರೀಯ ಉತ್ಪನ್ನಗಳ ಸ್ಪಾ ಟ್ರೈನರ್ ಕೋ ಆರ್ಡಿನೇಟರ್ ಆಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.
 
 
ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಟೆಕ್ನಾಲಜಿ (BIMTECH) ಯಿಂದ ಗೌರವ ತರಬೇತಿ ಪ್ರಶಸ್ತಿ ಪತ್ರವನ್ನು ವಿದ್ಯಾ ಪ್ರಕಾಶ್ ಭಂಡಾರಿಯವರು ಪಡೆದಿದ್ದಾರೆ. 
ಅಮೇರಿಕಾದ ಗೋಲ್ಡಮ್ಯಾನ್ ಸ್ಯಾಷ್  ಸಂಸ್ಥೆ ವಿಶ್ವದಾದ್ಯಂತ ಆಯ್ಕೆ ಮಾಡಿದ 10000 ಪ್ರತಿಭಾವಂತ ಮಹಿಳೆಯರಲ್ಲಿ ವಿದ್ಯಾ ಪ್ರಕಾಶ್ ಭಂಡಾರಿಯವರು ಒಬ್ಬರು, ಭಾರತದಲ್ಲಿ ಆಯ್ಕೆ ಮಾಡಿದ 1000 ಮಹಿಳೆಯರಲ್ಲಿ ಇವರು ಒಬ್ಬರು ಮಾತ್ರವಲ್ಲದೇ ಭಾರತದಾದ್ಯಂತ ಭಂಡಾರಿ ಸಮಾಜದ ಏಕೈಕ ಮಹಿಳೆಯೂ ಹೌದು. ಈ ಸಾಧನೆಗಾಗಿ ಸಂಸ್ಥೆಯು ಅವರಿಗೆ ಗೌರವ MBA  ಪ್ರಶಸ್ತಿಪತ್ರ ನೀಡಿ ಗೌರವಿಸಿದೆ. ಇಂತಹ ಗೌರವಾನ್ವಿತ ಮಹಿಳೆ “ಮ್ಯಾಜಿಕ್ ಹ್ಯಾಂಡ್ಸ್” ನ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವುದು ಸಂಸ್ಥೆಯ ವಿಶೇಷತೆಗಳಿಗೆ ಗರಿ ಮೂಡಿಸಿದಂತಾಗಿದೆ.
 
 
“ಮ್ಯಾಜಿಕ್ ಹ್ಯಾಂಡ್ಸ್” ಎಂಬುದು ಕೇವಲ ಸಲೂನ್, ಬ್ಯೂಟಿ ಪಾರ್ಲರ್ ಮಾತ್ರವಲ್ಲ “ಸೌಂದರ್ಯ ಉಪಾಸನೆ” ಎಂಬ ಭಾವನೆಯೊಂದಿಗೆ ಗ್ರಾಹಕರಿಗೆ ಸೇವೆ ನೀಡಲಿರುವ “ಮ್ಯಾಜಿಕ್ ಹ್ಯಾಂಡ್ಸ್” ನ ಅಧಿಕೃತ ಲೋಗೋ ಬಂಗಾರದ ಬಣ್ಣದ ಕೈಗಳ ಹತ್ತು ಬೆರಳುಗಳ ಮಧ್ಯೆ ನೀಲ ವರ್ಣದ ನೀರಿನ ಹನಿಗಳಿಂದೊಡಗೂಡಿ ಆಕರ್ಷಕವಾಗಿ ಮೂಡಿ ಬಂದಿದೆ. “ಮ್ಯಾಜಿಕ್ ಹ್ಯಾಂಡ್ಸ್” ನಲ್ಲಿ ಸಲೂನ್, ಸ್ಪಾ, ಸೌಂದರ್ಯ ಸೇವೆ ನೀಡುವ ಹತ್ತು ಬೆರಳುಗಳು ಹೂವಿನ ದಳಗಳ ಮಧುರಾನುಭೂತಿಯನ್ನು ನೀಡುತ್ತವೆ ಜೊತೆಗೆ ಸೌಂದರ್ಯ ಚಿಕಿತ್ಸೆಯಲ್ಲಿ ನೀರಿನ ಮಹತ್ವವನ್ನು ಸಾರಲು ನೀಲವರ್ಣದ ನೀರಿನ ಹನಿಗಳನ್ನು ಸಾಂಕೇತಿಕವಾಗಿ ಲೋಗೋದಲ್ಲಿ ಚಿತ್ರಿಸಲಾಗಿದೆ. ಅದರೊಂದಿಗೆ ರೇಖಿ ಚಿಕಿತ್ಸೆಯ ಸಮ್ಮಿಲನವೂ ಸೇರಿ ಮಾಯಾ ಜಾಲವನ್ನು ಸೃಷ್ಟಿಸುವ ಸಂಕೇತವೇ ಈ “ಮ್ಯಾಜಿಕ್ ಹ್ಯಾಂಡ್ಸ್” ಲೋಗೊದ ಸೂಕ್ಷ್ಮತೆಯಾಗಿದೆ. 
 
 
“ಭಂಡಾರಿವಾರ್ತೆ” ಈ ಹಿಂದೆ ಕಾರ್ಯರೂಪಕ್ಕೆ ತರಲು ಯೋಜಿಸಿದ್ದ “ವಿಷನ್ 2020” ಯ ಆರಂಭಿಕ ಉದ್ಯಮವೇ “ಮ್ಯಾಜಿಕ್ ಹ್ಯಾಂಡ್ಸ್”.  
 
 
ವಿಷನ್ 2020 ಯೋಜನೆಯಂತೆ ಭಂಡಾರಿ ಸಮಾಜದ ಆಸಕ್ತರಿಂದ ಹಣ ವಿನಿಯೋಗಿಸಿ ಈ ರೀತಿಯ ಬೃಹತ್ ಉದ್ದಿಮೆಯನ್ನು ಆರಂಭಿಸುವುದು, ತನ್ಮೂಲಕ ಭಂಡಾರಿ ಬಂಧುಗಳ ಆರ್ಥಿಕ ಮಟ್ಟವನ್ನು, ಜೀವನಮಟ್ಟವನ್ನು ಅಭಿವೃದ್ಧಿಗೊಳಿಸುವುದಾಗಿತ್ತು. ಆದರೆ ಭಂಡಾರಿ ಸಮಾಜದ ಬಂಧುಗಳ ಸಹಕಾರ ನಿರೀಕ್ಷಿತ ಪ್ರಮಾಣದಲ್ಲಿ ದೊರೆಯದೆ ಇರುವುದರಿಂದಾಗಿ ಈ ಉದ್ದಿಮೆಯನ್ನು ಸಮಾನ ಮನಸ್ಕ ಹಿತೈಷಿ ಒಬ್ಬರ ಸಹಕಾರದೊಂದಿಗೆ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಂಧುಗಳ ಸಹಕಾರ ದೊರೆತಲ್ಲಿ “ಮ್ಯಾಜಿಕ್ ಹ್ಯಾಂಡ್ಸ್” ನ ಹಲವು ಘಟಕಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಆರಂಭಿಸುವ ಆಲೋಚನೆ ಇದೆ. 
ಹಾಗೆಯೇ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇರುವ ಸಲೂನ್, ಬ್ಯೂಟಿ ಪಾರ್ಲರ್ ಗಳೊಂದಿಗೆ ಕೈಜೋಡಿಸಿ ಹಲವಾರು ಯೋಜನೆ ರೂಪಿಸಿ ಕಾರ್ಯಾಚರಿಸುವ ಆಲೋಚನೆಯೂ ಇದೇ. ಇದರಿಂದ ಸಲೂನ್ ಬ್ಯೂಟಿಪಾರ್ಲರ್ ಮಾಲಕರ ಸಂಪಾದನೆ ವೃದ್ಧಿಸುವುದು. 
 
 
“ಮ್ಯಾಜಿಕ್ ಹ್ಯಾಂಡ್ಸ್”ನ್ನು ಮುಂದಿನ ದಿನಗಳಲ್ಲಿ ಸ್ಕಿಲ್ ಡೆವಲಪ್ಮೆಂಟ್ ಇನ್ಸಿಟ್ಯೂಟ್ ನಂತೆ ಅಭಿವೃದ್ಧಿಪಡಿಸುವ ಯೋಜನೆಯನ್ನು ರೂಪಿಸಲಾಗಿದೆ.
 
 
ಮೂಲಭೂತವಾಗಿ ಮಾಲಕ ಮತ್ತು ನೌಕರ ಎಂಬ ಭೇದ ಭಾವವಿಲ್ಲದೆ ಅಂತರ್ಗತವಾಗಿ ನನ್ನದೇ ನಮ್ಮದೇ ಎಂಬ ಭಾವನೆ ಬೆಳೆಸುವುದರೊಂದಿಗೆ ನೌಕರ ವೃಂದಕ್ಕೆ ವಿಶೇಷ ಕಾಳಜಿ ವಹಿಸಿ, ವಿಶೇಷ ಸವಲತ್ತುಗಳನ್ನು ನೀಡುವ ಆಲೋಚನೆಯೊಂದಿಗೆ ಆರಂಭಗೊಂಡಿರುವ “ಮ್ಯಾಜಿಕ್ ಹ್ಯಾಂಡ್ಸ್” ಭಂಡಾರಿ ಸಮುದಾಯದಲ್ಲಿ ಕ್ಷೌರ ಉದ್ಯಮದಲ್ಲಿಯೇ ಪ್ರಪ್ರಥಮ ಪ್ರಯತ್ನವಾಗಿದೆ. ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸೇವೆಗಳನ್ನು ನೀಡುವಲ್ಲಿ “ಮ್ಯಾಜಿಕ್ ಹ್ಯಾಂಡ್ಸ್” ಬ್ರಾಂಡೆಡ್ ಉದ್ಯಮವಾಗಿ ರೂಪುಗೊಳ್ಳಲಿದೆ. 
ಯುವ ಪೀಳಿಗೆಗೆ ಕ್ಷೌರ ಉದ್ದಿಮೆಯ ನವ ದಿಕ್ಸೂಚಿಯಾಗಿ “ಮ್ಯಾಜಿಕ್ ಹ್ಯಾಂಡ್ಸ್” ನೆಲೆಯೂರಲಿದೆ. ಆಸಕ್ತ ಭಂಡಾರಿ ಸಮಾಜದ ಯುವಕ ಯುವತಿಯರಿಗೆ ಸೌಂದರ್ಯ ವರ್ಧಕ ಸೇವೆಗಳ ಬಗ್ಗೆ ತರಬೇತಿಯನ್ನು ನೀಡಿ ಮುಂದಿನ ಪೀಳಿಗೆಯ ಹೇರ್ ಡ್ರೆಸ್ಸೆರ್, ಬ್ಯೂಟಿಷಿಯನ್ ಗಳನ್ನು ರೂಪಿಸುವ ಹೊಣೆಗಾರಿಕೆಯೂ “ಮ್ಯಾಜಿಕ್ ಹ್ಯಾಂಡ್ಸ್” ಮೇಲಿದೆ.
 
 
ಶ್ರೀ ಪ್ರಕಾಶ್ ಭಂಡಾರಿ ಕಟ್ಲ ಮತ್ತು ಶ್ರೀಮತಿ ವಿದ್ಯಾ ಪ್ರಕಾಶ್ ಭಂಡಾರಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ “ಮ್ಯಾಜಿಕ್ ಹ್ಯಾಂಡ್ಸ್” ಕ್ಷೌರ ಉದ್ಯಮದಲ್ಲಿ ಕ್ರಾಂತಿಯನ್ನು ಉಂಟುಮಾಡಲಿ. ಭಂಡಾರಿ ಸಮುದಾಯಕ್ಕೆ ಮಾದರಿಯಾಗಿ ಹಲವು ನವೋಧ್ಯಮಗಳಿಗೆ ಸ್ಪೂರ್ತಿ ನೀಡಲಿ ಜೊತೆಜೊತೆಗೆ ನಿಮ್ಮ ಹೊಸ ಪ್ರಯತ್ನ ಅದ್ಭುತ ಯಶಸ್ಸನ್ನು ಕಾಣಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
 
“ಭಂಡಾರಿವಾರ್ತೆ.”
 
 
ಮ್ಯಾಜಿಕ್ ಹ್ಯಾಂಡ್ಸ್. 
ಫ್ಯಾಮಿಲಿ ಸಲೂನ್. 
ಪ್ರಕೃತಿ ಕಾಂಪ್ಲೆಕ್ಸ್. 
ಬಂಟ್ ಹಾಸ್ಟೆಲ್ to ಕದ್ರಿ ದೇವಸ್ಥಾನ ರಸ್ತೆ. 
ಸಿ.ವಿ.ನಾಯಕ್ ಹಾಲ್ ಪಕ್ಕ, ಭಾರತ್ ಬೀಡಿ ವರ್ಕ್ಸ್ ಹೆಡ್ಡಾಫೀಸ್ ಎದುರು. 
ಮಂಗಳೂರು.
 
ಮೊಬೈಲ್ : 
+91 9353169442,
+91 7760858889
 
 
 

Leave a Reply

Your email address will not be published. Required fields are marked *