
ಅಮ್ಮಾ ನಿನ್ನ ಕಣ್ಣಲ್ಲಿ ನ ಆನಂದ
ಹೇಳುತಿದೆ ನನ್ನ ನಿನ್ನ ಹೊಸಬಂಧ
ನವ ಮಾಸದಿ ನಿನ್ನ ಆಲಿಂಗನ
ನನಗಾಯಿತು ಹೊಸಲೋಕ ದಶ೯ನ
ಅಮ್ಮಾ ನಿನ್ನ ಕೈಯ ಸ್ಪರ್ಶ ಸು:ಖ
ಸದಾ ನೋಡಬಯಸುವೆ ನಿನ್ನ ಮುಖ
ನೀನಿರಬೇಕು ಸದಾ ನನ್ನ ಹತ್ರ
ನನಾಗುವೆ ನಿನ್ನ ಪ್ರೀತಿ ಪಾತ್ರ
ನಾ ಅತ್ತಾಗ ಆತುರದಿ ಬರುವೆ
ನನಗಾಗಿ ಊಟ ನಿದ್ದೆ ಮರೆವೆ
ನಿನ್ನಾಸೆಗಳ ಬದಿಗಿಡುವೆ
ನನ್ನ ಸುಖಕ್ಕೆ ಹಾತೊರೆವೆ
ಅಮ್ಮ ನಿಗೆ ಪ್ರೀತಿಯ ವಂದನೆ
ಮುತ್ತಿಕ್ಕುವೆ ಕೆನ್ನೆಗೆ ಮೆಲ್ಲನೆ
ಯಾರೂ ಅರಿಯದ ನನ್ನ ಮಾತು
ನೀ ತಿಳಿವೆ ಈ ಹೊತ್ತು
