January 18, 2025
21

      ಚಟ್‌… ಚಟ್ಟ್.. ಚಟಿಲ್ಅಂತಕಣ್ಣುಕೋರೈಸುವಂತೆ ಬೀಸೋಚಾಟಿಮಿಂಚು.. ಕಿವಿಕಿವುಡಾಗೋ ಹಾಗೇಮಾರ್ದನಿಸೋ ಸಿಡಿಲುಗುಡುಗಿನಾರ್ಭಟ.. ಇಷ್ಟಾದ್ರೆ ಸಾಕಿತ್ತು, ಇದರಮುಂದುವರಿದ ಭಾಗದಂತೆ ಆಕೆಯದ್ದೂ ಒಂದೇಸಮಪಲ್ಲವಿಶುರು.. “ ಕೊತ್ತಲಿಗೆ ಉನ್ಗುದಿಜ್ಜಿ.. ಕನಕ್ಮೊಟ್ಟುದಿಜ್ಜಿ.. ಮಡಲ್ಕಟ್ದಿದಿಜಿ.. ಮರ್ಯೊಲಶುರುಆಂಡು..ಎಂಚ ನಿಲ್ಕೆಗು ಬೇಯ್ಪಾದು ಪಾಡ್ನಪ್ಪಾ.. ಥೋಥೋ.. ನಿಕ್ಲುಗೊಬ್ಬುದೇ ಕಾಲಕಳೆಲೆಂಬೆ. ( ಕೊತ್ತಲಿಗೆ ಒಣಗಿಲ್ಲ, ಸೌದೆಜೋಡಿಸಿಲ್ಲ, ತೆಂಗಿನಗರಿಕಟ್ಟುರೆಡಿಯಾಗಿಲ್ಲ.. ಮಳೆಗಾಲಶುರುವಾಯ್ತು..ನಿಮ್ಗೆಲ್ಲಾ ಏನುಬೇಯಿಸಿಹಾಕೋದೋಏನೋನೀವು ಆಟ ಆಡೇಕಾಲಕಳೀರಿ )”  ಇದಕ್ಕೆ ಕೋರಸ್ ನಮ್ಮಅಜ್ಜಿ.. “ ಬುಡು..ಬುಡು.. ಬರ್ಸೋಡು ಬಂಜಿಕಾಯ್ನಿನಾಗ ಅಕ್ಲೆಗ್ ಗೊತ್ತಾಪುಂಡು..ಬುಡ್ಯಾ( ಬಿಡುಬಿಡುಮಳೆಬೀಳುವಾಗ ಹಸಿವಾಗುತ್ತಲ್ಲಾ ಆಗಗೊತ್ತಾಗುತ್ತೆ.. ನೀಬಿಟ್ಟುಬಿಡು)” ಇಷ್ಟುಕೇಳಿದ್ಮೇಲೆ ಗೊಣಗುತ್ತಲೇ ನಮ್ಮದುಸೌದೆಒಟ್ಟುವಕೆಲಸಶುರು

ರಚ್ಚೆಹಿಡಿದುಒಂದೇಸಮಸುರಿಯುತ್ತಿರೋ ಮಳೆ.. ಸೂರ್ಯನನ್ನ ಕಡೇಬಾರಿನೋಡಿದ್ದು ನಾಲ್ಕುದಿನಗಳಹಿಂದೆ.. ಬೆಳಗ್ಗೆ ಜಡಿಮಳೆಮಧ್ಯೆನೇ ಓಡೋಡಿಬಾವಿಯಿಂದ ನೀರುಸೇದಿತಂದುಹಂಡೆ, ಚೆಂಬುಗಳಿಗೆಲ್ಲಾ ತುಂಬಿದಾಗ ಆಕೆಯಮುಂದೆನಾನೇನೋಅದ್ಭುತಸಾಧಿಸಿದೆ ಅನ್ನೋಬಿಗುಮಾನ.. ಆಮೇಲೆಹಸಿಯಾಗಿದ್ದ ಇದ್ದಯೂನಿಫಾರ್ಮ್ ಶರ್ಟನ್ನ ಕೆಂಡದಮುಂದೆಇಟ್ಟುಒಣಗಿಸುತ್ತಾ.. ಶರ್ಟನ್ನ ಆಗಾಗಮೂಸಿನೋಡಿಹೊಗೆಯಕಮಟುವಾಸನೆಗೆ ಮುಖಸಿಂಡರಿಸುತ್ತಾಗಂಟೆಎಂಟಾಯ್ತು .. ಲೇಟಾಯ್ತು ಶಾಲೆಗೆ, ನಂಗೆತಿಂಡಿಬೇಡಅನ್ನೋಅಸಮಧಾನದ ಅಬ್ಬರದನಿ.. ಅಷ್ಟೇರಲ್ಲೇ ಶುರುಆಕೆಯಚಡಪಡಿಕೆಇಲ್ಲ್ಪೂರ್ತಿತೋರೊಂದುಂಡು.. ದಿಕ್ಕೆಲ್ದಲ್ಪನೇನೀರು..ಥೋ ಥೋ.. ಎಂಚಬೇಯ್ಪಾವುನನಾ.. ಆಂಡೋಆಂಡ್ತಿಂಡಿಕೊರ್ಪೆಉಂತುಲಪ್ಪಾ.( ಮನೆಪೂರ್ತಿಸೋರುತ್ತಿದೆ.. ಒಲೆಹತ್ರನೇನೀರುಬರ್ತಿದೆ.. ಹೇಗೆಬೇಯ್ಸೋದೋ.. ಆಯ್ತೋಆಯ್ತು.. ತಿಂಡಿಕೊಡ್ತೀನಿ ಇರಪ್ಪಾ.. )”  ಅನ್ನೋ ಮಾತಿನಹಿಂದೆನೇ ಕಾದಮಣ್ಣಿನಕಾವಲಿಗೆ ಚೋಂಯ್ಯ್ಅಂತ ದೋಸೆಹಿಟ್ಟುಬಿದ್ದಸದ್ದುಕೇಳಿದಾಗ್ಲೇ ಸಮಧಾನ.. ಜೊತೆಗೆಒಲೆಯಬೆಂಕಿಗೆ ಹಾಕ್ತಾಇದ್ದತೆಂಗಿನಚಿಪ್ಪು, ಗೇರುಬೀಜ ಸಿಪ್ಪೆಯ ಸಮ್ಮಿಳಿತದ ಅವರ್ಣನೀಯ ಧೂಮಮನೆಯಿಡೀ ತುಂಬಿದಾಗ್ಲೇ ಏನೋಆನಂದ.. ಇನ್ನುನಾವುಗಳು ಗೊಣಗುತ್ತಲೇ ಘಮ್ಮೆನ್ನುವ ದೋಸೆಚಟ್ನಿಜೊತೆಬಿಸಿಬಿಸಿಚಾಕುಡಿದು  “ ಅಮ್ಮಾ.. ಯಾನ್ ಪಿದಾಡಿಯೇ ( ಅಮ್ಮಾನಾನುಹೊರಟೆ)” ಅಂದಾಗ್ಲೇ ಆಕೆಗೆಪ್ರತೀದಿನವೂಅದೇನನ್ನೋ ಗೆದ್ದನಿಟ್ಟುಸಿರು..

      ಮನೆಯಿಂದ ಹೊರಡುವಾಗ್ಲೇ ಮೊಣಕಾಲೆತ್ತರಕ್ಕೆ ಮಡಚಿದಯೂನಿಫಾರ್ಮ್ ಪ್ಯಾಂಟ್.. ಗಣಿತಮೇಷ್ಟ್ರ  ಬೆತ್ತ ನೆನೆಸಿಕೊಂಡುನಾನುಒದ್ದೆಆದ್ರೂಪುಸ್ತಕಏನೂಆಗ್ಬಾರ್ದು ಅನ್ನೋಅಪ್ರತಿಮ ಕಕ್ಕುಲಾತಿಯಿಂದ ಕೊಡೆಹಿಡಿದುಹೆಜ್ಜೆಹಾಕ್ತಾಹಾಕ್ತಾ.. “ಮಳೆಯಿಂದ ಶಾಲೆಗೆಇವತ್ತೂರಜೆಕೊಡ್ತಾರಾ.. ಗಣಿತ ಮೇಷ್ಟ್ರು  ಇವತ್ತ್ ಬರ್ತಾರಾ.. ಲೀಸರ್ಪಿರಿಯೆಡ್ಹೊತ್ತಿಗೆ ಆಡೋದಿಕ್ಕೆ ಹೋಗೋಕೆಆಗುತ್ತಾಅನ್ನೋನೂರಾರುಲೆಕ್ಕಾಚಾರಗಳು..

      ಪ್ರತೀಜುಲೈಬಂದಾಗ್ಲೂ ಇವೆಲ್ಲಾ ಕಣ್ಮುಂದೆ ಬಂದುಹೋಗುತ್ತೆ.. ಮಳೆಯಬಿರುಸು.. ಕಾರ್ಮೋಡ ಮುಸುಕಿಹಗಲಲ್ಲೂ ಕಾಡುವಕತ್ತಲು.. ಮಣ್ಣಿನಕಾವಲಿಯದೋಸೆಯಪರಿಮಳ.. ಅಡಿಗಾಸ್ ಹೊಟೇಲ್ನಲ್ಲೂ ಸಿಗದ ಚಟ್ನಿ.. ಸೂರಿನಕೆಳಗೆನಿಂತುಮುಖದಮೇಲೆಬೀಳೋಹನಿಗಳನ್ನು ಅನುಭವಿಸುತ್ತಾ ಕುಡಿದಚಾಹದಸ್ವಾದ.. ಎಲ್ಲಾಇನ್ನುನೆನಪುಮಾತ್ರಅನ್ನೋದು ವಾಸ್ತವ.. ಆದ್ರೂನಮಗಾಗಿತನ್ನನ್ನೇ ಸವೆಸಿದಆಕೆಯಮುಖಯಾವಾಗ್ಲೂ ಕಣ್ಣೆದುರೇ ಇರುತ್ತೆ..
ಲೇಖನ: ಪ್ರಶಾಂತ್ .ಬಿ. ಆರ್ 
ಸಂಪಾದಕರು, ಭಂಡಾರಿ ವಾರ್ತೆ

0 thoughts on “ಮಳೆಗಾಲದಲ್ಲಿ ಮಾರ್ದನಿಸುವ ನೆನಪುಗಳು..!

Leave a Reply

Your email address will not be published. Required fields are marked *