ಗುರಿಯಿರದ ಬಾಳಿನಲ್ಲಿ
ಗುರುವಾದೆ ನೀನು…
ನೀ ನಡೆವ ಹಾದಿಯಲ್ಲಿ
ಪಯಣಿಸಿದೆ ನಾನು…||ಗುರಿ||
ಮನಸಿನಲಿ ನಿನ್ನದೇ ಮಾತು
ಅನುಕ್ಷಣವೂ ನೆನಪಾಗಿ…
ಕನಸಿನಲಿ ನಿನ್ನದೇ ನುಡಿಯು
ಅನುರಣಿಸೋ ದನಿಯಾಗಿ…
ನಿರ್ಧಾರ ನನ್ನಲ್ಲಿ ತುಂಬಿ
ನೀನಾದೆ ಗೆಲುವಿನ ದುಂಬಿ!… ||ಗುರಿ||
ಮನದಂತರ್ಯದಲಿ ನೆಲ
ಮುಗಿಲು ನಾವಾಗಿ….
ಜತೆ ಸೇರೋ ಹಂಬಲವೇ
ನಮ್ಮೊಲವ ಮುಳುವಾಗಿ…
ಜೀವನದೇರಿಳಿತದಲಿ…
ನಿನ್ನೊಲುಮೆಯೇ ಹಸಿರಾಗಿ…
ನನ್ನ ಬಾಳ ಉಸಿರಾಗಿ….||ಗುರಿ||
✍ ಎ ಆರ್ ಭಂಡಾರಿ ವಿಟ್ಲ