January 18, 2025
Greeshma
ಹೌದು ನನಗೆ ಅವರ ಪರಿಚಯ ಆಗಿ ಎರಡು ವರುಷ ಕಳೆಯಿತು. ದಿನ ಯಾವಾಗ ಅಂತ ನೆನಪಿಲ್ಲ ಆದರೆ ಹೇಗೆ ಅಂತ ಈಗಲೂ ನೆನಪಿದೆ. ಈಗಲೂ ಅ ಕ್ಷಣಗಳು ಕಣ್ಣ ಮುಂದೆ ಒಮ್ಮೆ ಹಾದು ಹೋಗುತ್ತದೆ. ನಮ್ಮ ಶಾಂತಲ ಅಕ್ಕ ಇದಾರಲ್ಲ… ಅವರೇ ಪರಿಚಯ ಮಾಡಿಸಿದ್ದು. ತಂದೆಯ ಆಸರೆ ಇಲ್ಲದ ನಮ್ಮ ಕುಟುಂಬದ ಜಟಕಾಬಂಡಿಯ ರಥ ಓಡಿಸಿದ್ದು ನನ್ನ ತಾಯಿ.
 
 
 
ಆರ್ಥಿಕ ಪರಿಸ್ಥಿತಿಯ ಏರಿಳಿತದ ನಡುವೆಯೂ ನನಗೆ  ಓದಿನ ಬಗ್ಗೆ ಹುಚ್ಚು ಹೆಚ್ಚೆಂದೇ ಹೇಳಬಹುದು. ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ 83 ಶೇಕಡಾದೊಂದಿಗೆ ಉತ್ತೀರ್ಣಳಾದೆ. ಹೇಗಾದರೂ ಪದವಿ ಶಿಕ್ಷಣ ಪಡೆಯಲೆಬೇಕೆಂಬ ಆಸೆಯಿಂದ ಅಮ್ಮನನ್ನು ಕಾಡಿಬೇಡಿ ಒಪ್ಪಿಸಿದೆ. ಬರಹ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನನ್ನ ಆಸಕ್ತಿಯನ್ನು ಕಂಡ ಗುರುಗಳು ಪತ್ರಿಕೋದ್ಯಮವನ್ನು ಆರಿಸುವಂತೆ ತಿಳಿಸಿದರು. ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಸೀಟು ಸಿಕ್ಕಿತು. ಪ್ರಥಮ ವರುಷದ ಪದವಿ ಮುಗಿಸಿದೆ. ಆದರೆ ಮುಂದೆ ನನ್ನ ವಿಧ್ಯಾಭ್ಯಾಸದ ಖರ್ಚುವೆಚ್ಚ ನೋಡಿಕೊಳ್ಳವ ಶಕ್ತಿ ಅಮ್ಮನಿಗೆ ಇರಲಿಲ್ಲ. ಮುಂದೇನು ಎಂಬ ಚಿಂತೆಯಲ್ಲಿ ಇದ್ದ ನನಗೆ ತಕ್ಷಣ ನೆನಪಾದವರು ಶಾಂತಲ ಅಕ್ಕ. ಸಂಬಂಧದಲ್ಲಿ ಈಕೆ ನನ್ನ ದೊಡ್ಡಮ್ಮನ ಮಗಳು. ನನ್ನ ಸಮಸ್ಯೆಯನ್ನು ಇವರತ್ರ ಹೇಳಿದೆ ಆಗ ಅವರು ಹೇಳಿದ್ದು ಇಷ್ಟೇ ನನ್ನಿಂದ ಆದ ಸಹಾಯ ಮಾಡ್ತೀನಿ. ಆದರೆ ಇವರ ಈ ಮಾತಿನ ಒಳಾರ್ಥ ಒಂದು ದೊಡ್ಡ ಕುಟುಂಬದ ಸದಸ್ಯೆಯನ್ನಾಗಿ ನನ್ನನ್ನು ಮಾಡುತ್ತದೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಸ್ವಲ್ಪ ದಿನದಲ್ಲೆ ನನಗೊಂದು ಕರೆ ಬಂತು. ಆಗ ಮಾತಾನಾಡಿದವರೇ ಪ್ರಕಾಶ್ ಭಂಡಾರಿ ಕಟ್ಲಾ. ಇವರ ಜೊತೆಗೆ ನನ್ನ ಪದವಿ ಪಡೆಯುವ ಕನಸು ನನಸು ಮಾಡಿದ್ದು ಮಾಧವ ಭಂಡಾರಿ ಸಾಗರ ಮತ್ತು ಭಂಡಾರಿವಾರ್ತೆ ಎಂಬ ಅದ್ಭುತ ಕುಟುಂಬ. ನನ್ನೊಬ್ಬಳಿಗೆ ಮಾತ್ರ ಅಲ್ಲ ಅದೆಷ್ಟೋ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಂತು ಅವರ ಕನಸನ್ನು ನನಸಾಗಿಸುವ ಪಯಣದಲ್ಲಿ ಜೊತೆಯಾಗಿ ನಿಂತಿದ್ದಾರೆ.
 
 
 
 
 
      ನಿಮಗೆ ಧನ್ಯವಾದ ಅರ್ಪಿಸಲೇಬೇಕು.ನೀವು ಮಾಡಿದ ಸಹಾಯ ನನ್ನ ಗುರಿಯೆಡೆಗಿನ ಪಯಣಕ್ಕೆ ದಾರಿದೀಪವಾಯಿತು.ಬಿದ್ದಾಗ ಎತ್ತುವ ಕೈಗಳಿಗಿಂತ ನೋಡುವ ಕಣ್ಣುಗಳೇ ಹೆಚ್ಚು. ಆದರೆ ನೀವು ನಮಗೂ ಬೆಳೆಯಲು ಅವಕಾಶ ನೀಡಿದ್ದೀರಿ.ಇರುವುದರಲ್ಲಿ ನಮ್ಮಿಂದ ಆದಷ್ಟು ಕಷ್ಟದಲ್ಲಿ ಇರುವವರೆಗೆ ಸಹಾಯ ಮಾಡಬೇಕೆಂಬ ಧ್ಯೇಯದಲ್ಲಿ ಮಾದರಿಯಾಗಿದ್ದೀರಿ..ನಿಮಗೊಂದು ದೊಡ್ಡ ಸಲಾಂ..
 
“ಯಾರೂ ಶಾಶ್ವತವಲ್ಲ ಈ ಜಗದಲ್ಲಿ…
ಹಚ್ಚಿಟ್ಟ ಹಣತೆ ಉರಿದಾರುವಂತೆ ಬದುಕು…
ಆರೋಗ್ಯವೆಂಬ ಎಣ್ಣೆ, ಆಯಸ್ಸೆಂಬ ಬತ್ತಿ ಇರುವಾಗ ಹಂಚು ಪರೋಪಕಾರದ ಬೆಳಕು”
 
ಗ್ರೀಷ್ಮಾ ಭಂಡಾರಿ ಕಲ್ಲಡ್ಕ.
ವಿಶ್ವವಿದ್ಯಾನಿಲಯ ಕಾಲೇಜು,
ಮಂಗಳೂರು.

1 thought on “ಮನೆ ಮನದ ಮಾತು ಹೇಳುವ ಸಮಯ ಬಂದೇ ಬಿಟ್ಟಿತು! ✍️ ಗ್ರೀಷ್ಮಾ ಭಂಡಾರಿ ಕಲ್ಲಡ್ಕ.

  1. ನಿನ್ನ ಕನಸು ನನಸಾಗಲು ಸಹಕರಿಸಿದ ಆ ಎರಡು ವ್ಯಕ್ತಿಗಳು ನಿನ್ನ ಜೀವನದ ಮಾದರಿಯಾಗಲಿ. ನಿನ್ನಿಂದ ಸಮಾಜಕ್ಕೆ ಇನ್ನೂ ಹೆಚ್ಚು ಹೆಚ್ಚು ನೆರವಿನ ಹಸ್ತ ಸಿಗುವಂತಾಗಲಿ.

Leave a Reply

Your email address will not be published. Required fields are marked *