January 18, 2025
DSC07864

ಮಂಗಳೂರು ಭಂಡಾರಿ ಸ್ವಯಂ ಸೇವಕ ಸಂಘದ ಕ್ರೀಡಾಕೂಟ ಸಂಪನ್ನ

ಮಂಗಳೂರು : ಭಂಡಾರಿ ಸಮಾಜ ಬಂಧುಗಳ ವಾರ್ಷಿಕ ಕ್ರೀಡಾಕೂಟ ಆದಿತ್ಯವಾರದಂದು ಮಂಗಳೂರಿನ ಕೆ.ಪಿ.ಟಿ. ಮೈದಾನದಲ್ಲಿ ಭಂಡಾರಿ ಸ್ವಯಂ ಸೇವಕ ಸಂಘದ ಅಧ್ಯಕ್ಷೆ ಬಬಿತಾ ಲತೀಶ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಷ್ಟ್ರ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ಅನ್ವಿತಾ ಕೊಡವೂರು ಉಡುಪಿ ಕ್ರೀಡಾಜ್ಯೋತಿ ಪ್ರಜ್ವಲನೆ ಮಾಡಿದರು , ರಾಜ್ಯ ಮಟ್ಟದ ಕರಾಟೆ ಪಟು ಅನಘ ಭಂಡಾರಿ ಕಕ್ಯಪದವು ಪ್ರತಿಜ್ಞಾ ಸ್ವೀಕರಿಸಿದರು , ಭಂಡಾರಿ ಯುವ ವೇದಿಕೆಯ ಮಾಜಿ ಅಧ್ಯಕ್ಷ ಕೃಷ್ಣಾನಂದ ಭಂಡಾರಿ ಧ್ವಜಾರೋಹಣ ಮಾಡಿ , ಎ.ಜೆ.ಆಸ್ಪತ್ರೆ ಮಂಗಳೂರು ಐ.ಎಂ.ಎಸ್.ತುರ್ತು ಚಿಕಿತ್ಸಾ ವಿಭಾಗದ ಮೇಲ್ವಿಚಾರಕಿ ಲೀಲಾವತಿ ಭಾಸ್ಕರ್ ಭಂಡಾರಿ ಕೋಡಿಕಲ್ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ವೈ ಭರತ್ ಶೆಟ್ಟಿ ಭಂಡಾರಿ ಸಮಾಜದಲ್ಲಿ ಮಹಿಳೆಯರೆ ಕ್ರೀಡಾಕೂಟ ಆಯೋಜಿಸಿರುವುದು ನಿಜಕ್ಕೂ ಮಾದರಿಯಾಗಿದೆ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಜವಾಬ್ದಾರಿಯನ್ನು ನಿರ್ವಹಿಸಿದ್ದರೆ ಅದು ದಕ್ಷತೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಕೂಡಿರುತ್ತದೆ ಸಿಕ್ಕಿದ ಅವಕಾಶವನ್ನು ನಿರಂತರವಾಗಿ ಮುಂದುವಸಿಕೊಂಡು ಹೋಗಬೇಕು ಸಲಹೆ ನೀಡಿದರು .
ಮಾಜಿ ಶಾಸಕ ಜೆ.ಆರ್. ಲೋಬೊ ಅವರು ಮಾತನಾಡುತ್ತಾ ತಾನು ಇದುವರೆಗೆ ಭಾಗವಹಿಸಿದ ಯಾವುದೇ ಸಮಾಜದ ಕ್ರೀಡಾಕೂಟ ಮಹಿಳೆಯರ ನೇತೃತ್ವದಲ್ಲಿ ನಡೆಯುತ್ತಿರುವುದು ನನ್ನ ಇತಿಹಾಸದಲ್ಲೇ ಇಲ್ಲ ಭಂಡಾರಿ ಸಮಾಜ ಕ್ರೀಡಾಕೂಟ ದಾಖಲೆಯಾಗಿದೆ ಎಂದರು.

ಕ್ರಿಕೆಟ್, ತ್ರೋಬಾಲ್, ವಾಲಿಬಾಲ್ , ತೆಂಗಿನಕಾಯಿ ಹೊಡೆಯುವುದು,
ಹಗ್ಗಜಗ್ಗಾಟ,ಆಟೋಟ ಸ್ವರ್ಧೆಗಳು ಮಡಕೆ ಒಡೆಯುವುದು ಇನ್ನಿತರ ಸ್ವರ್ಧೆಗಳು ಹಾಗೂ ಭಂಡಾರಿ ಸಮಾಜದ ವಧು – ವರರ ನೊಂದಾವಣೆ ನಡೆಯಿತು.

ಅಂದು ಸಾಯಂಕಾಲ ನಡೆದ ಸಮಾರೋಪ ಸಮಾರಂಭ ಬಹುಮಾನ ವಿತರಣೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ನಗರ ಶಾಸಕ ವೇದವ್ಯಾಸ ಕಾಮತ್ ಮಾತನಾಡುತ್ತ ಸಂಘಟನೆಗೆ ಯಾವುದೇ ಸಮಾಜದ ಸಂಖ್ಯೆ ಮುಖ್ಯವಲ್ಲ ಶಿಸ್ತು ಬದ್ದವಾಗಿ ಸಮಾಜ ಮುನ್ನಡೆಸಿ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಪೋತ್ಸಾಹಿಸ ಬೇಕು ಎಂದರು.


ಮಂಗಳೂರು ಭಂಡಾರಿ ಸ್ವಯಂ ಸೇವಕ ಸಂಘದ ಕ್ರೀಡಾಕೂಟವು ನಮ್ಮ ಸಮಾಜದ ನಾಗ ಮೂಲ ಸ್ಥಾನ ದೈವ ಮೂಲ ಸ್ಥಾನ ಇದ್ದ ಆಗೆ ಕ್ರೀಡಾಕೂಟಕ್ಕೆ ಇತರ ಗುಡಿ ಗೋಪುರ ಇದ್ದ ಆಗೆ  ಕ್ರೀಡಾಕೂಟ ಯಶಸ್ವಿಯಾಗಿ ನಿರಂತರವಾಗಿ ಮುಂದುವರಿಯಲಿ ಎಂದು ಭಂಡಾರಿ ಮಹಾಮಂಡಳದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ ಶುಭ ಹಾರೈಸಿದರು. ಬೆಂಗಳೂರು ಡಿಜಿಎಸ್ . ಜಿಐಎಮ್ಎಸ್. ಆಸ್ಪತ್ರೆಯ ಸಹಾಯಕ ಪ್ರೊಫೆಸರ್ ಡಾ॥ ರೋಹನ್ ಪಿ.ಜೆ.ಭಂಡಾರಿ , ಕ್ರೀಡಾಕೂಟದ ಊಟೋಪಚಾರದ ದಾನಿ ದಿನೇಶ್ ಹಳೆಯಂಗಡಿ , ಉಡುಪಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಗುರುದಾಸ್ ಭಂಡಾರಿ ಹಿರೇಬೆಟ್ಟು , ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಉಮೇಶ್ ಭಂಡಾರಿ ಉಜಿರೆ , ರಾಷ್ಟ್ರ ಮಟ್ಟದ ಭಾರ ಎತ್ತುವ ಸ್ಪರ್ಧೆಯ ವಿಜೇತೆ ಯಶಸ್ವಿನಿ ವಿ.ಭಂಡಾರಿ , ಮಂಗಳೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ರಮಾನಾಥ ಭಂಡಾರಿ ಮತ್ತು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಅಶೋಕ್ ಭಂಡಾರಿ ಕುತ್ಪಾಡಿ , ಮಂಗಳೂರು ಭಂಡಾರಿ ಯುವ ವೇದಿಕೆಯ ಅಧ್ಯಕ್ಷ ನಿತ್ಯಾನಂದ ಭಂಡಾರಿ ಉಪಸ್ಥಿತರಿದ್ದರು.
ಸಂಘದ ಎಲ್ಲಾ ಪದಾಧಿಕಾರಿಗಳು ಆಗಮಿಸಿದ ಸಮಾಜ ಬಂಧುಗಳನ್ನು ಕ್ರೀಡಾಕೂಟದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು ಕಾರ್ಯದರ್ಶಿ ಪ್ರಪುಲ್ಲ ರಾಜು ಭಂಡಾರಿ ಸ್ವಾಗತಿಸಿ, ಸಂದ್ಯಾ ಉಳಾಯಿಬೆಟ್ಟು ಕಾರ್ಯಕ್ರಮ ನಿರೂಪಿಸಿ, ಧನ್ಯ ಹರೀಶ್ ಧನ್ಯವಾದವಿತ್ತರು.

Leave a Reply

Your email address will not be published. Required fields are marked *