ಮಂಗಳೂರು ಭಂಡಾರಿ ಸಮಾಜ ಸಂಘ, ಭಂಡಾರಿ ಯುವ ವೇದಿಕೆ ಹಾಗೂ ಭಂಡಾರಿ ಸ್ವಯಂ ಸೇವಕ ಸಂಘ ಇದರ ನೇತೃತ್ವದಲ್ಲಿ ಮಂಗಳೂರಿನ ಕದ್ರಿ ಸುಮ ಸದನದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರುಗಿತು. ಸಂಘದ ಅಧ್ಯಕ್ಷ ನಾಗೇಶ್.ಎಂ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ಕಾರ್ಕಳದ ನಿಕಟಪೂರ್ವ ಶಾಸಕ. ಎಚ್ ಗೋಪಾಲ ಭಂಡಾರಿಯವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಮೇಯರ್ ಕವಿತಾ ಸನಿಲ್, ಆಟಿಡೊಂಜಿ ದಿನವನ್ನು ಯಾವ ಉದ್ದೇಶ ಇಟ್ಟುಕೊಂಡು ಆಯೋಜನೆ ಮಾಡಿದ್ದೀರೋ ಆ ನಿಮ್ಮ ಉದ್ದೇಶ ಈಡೇರಲಿ ಎಂದರು. ಆಟಿ ಆಚರಣೆ ಒಳ್ಳೆಯ ಕಾರ್ಯಕ್ರಮ. ಆಟಿಯ ಹೆಸರಿನಲ್ಲಿ ಜನರು ಸಮಾಜ ಸಂಘಟನೆಯತ್ತ ಮುಖ ಮಾಡಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಗೋಪಾಲ ಭಂಡಾರಿಯವರು ತಿಳಿಸಿದರು.
ಇಂದಿನ ಮಕ್ಕಳು ಆಟಿಯ ಬದಲು ಐಟಿ ಬಿಟಿ ಯತ್ತ ಮುಖ ಮಾಡಿದ್ದಾರೆ ಎಂಬ ಪ್ರಾಸದ ಮೂಲಕ ಚಲನಚಿತ್ರ ನಟ ಹಾಗೂ ಸಾಹಿತಿ ಶೇಖರ ಭಂಡಾರಿ ಕಾರ್ಕಳ ಜನರನ್ನು ರಂಜಿಸಿದರು. ಆಟಿದ ಮದಿಪು ಬಗ್ಗೆ ಕಚ್ಚೂರು ವಾಣಿ ಮಾಸ ಪತ್ರಿಕೆಯ ಮಾಜಿ ಸಂಪಾದಕ ಎ .ಕೆ. ಭಂಡಾರಿ ಮಾತನಾಡಿದರು. ಮಂಗಳೂರಿನಲ್ಲಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಭಂಡಾರಿ ಯುವ ಸಂಗಮ ಎಂಬ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಭಂಡಾರಿ ಯುವ ವೇದಿಕೆಯ ಅಧ್ಯಕ್ಷ ಸತ್ಯರಂಜನ್ ಭಂಡಾರಿ ಕುತ್ತೆತ್ತೂರು ಹೇಳಿದರು. ಪಡುಬಿದ್ರೆ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಸಂದೀಪ್ ಪಲಿಮಾರು, ಭಂಡಾರಿ ಮಹಾಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ ಆಟಿಯ ವಿಶೇಷತೆ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಸುರತ್ಕಲ್ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಪ್ರಮೋದ್.ಎಸ್ ಭಂಡಾರಿ, ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಪೂವಪ್ಪ ಭಂಡಾರಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ವಿಶ್ವನಾಥ ಭಂಡಾರಿ ಕಾಡಬೆಟ್ಟು, ಕೋಶಾಧಿಕಾರಿ ಸಂಜೀವ ಭಂಡಾರಿ, ಸಹ ಕೋಶಾಧಿಕಾರಿ ವಾರಿಜಾ ವಾಸುದೇವ ಭಂಡಾರಿ, ಟ್ರಸ್ಟಿ ಅಶೋಕ್ ಭಂಡಾರಿ ಕುತ್ಪಾಡಿ, ಉಡುಪಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಹರೀಶ್ ರಾಮ್ ಭಂಡಾರಿ, ಸ್ವಯಂ ಸೇವಕ ಸಂಘದ ಅಧ್ಯಕ್ಷೆ ವಾಣಿ. ಎಸ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಸಮಾಜ ಬಾಂಧವರು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸಿದರು. ಅರುವತ್ತು ಬಗೆಯ ವಿವಿಧ ತಿಂಡಿ ತಿನಿಸುಗಳು, ಸೊಪ್ಪು, ಪಲ್ಯಗಳು ಕಾರ್ಯಕ್ರಮದ ವಿಶೇಷತೆಗಳಲ್ಲೊಂದಾಗಿತ್ತು.
Warewah…
"ಆಟಿಡೊಂಜಿ "ಕಾರ್ಯಕ್ರಮ ಭಂಡಾರಿ ಸಮುದಾಯದ ವಾರ್ಷಿಕ ಸ್ನೇಹ ಸಮ್ಮಿಲನವಾಗಿ, ನಿರಂತರ ಸಾಗಲಿ.