ಮಂಗಳೂರು ಜಪ್ಪು ದಿವಂಗತ ತನಿಯಪ್ಪ ಭಂಡಾರಿ ಮತ್ತು ದಿವಂಗತ ದ್ಯಾಪ್ಪು ತನಿಯಪ್ಪ ಭಂಡಾರಿ ದಂಪತಿಯ ಪುತ್ರ ಜಪ್ಪು ಜನಾರ್ದನ ಭಂಡಾರಿಯವರು ಅಕ್ಟೋಬರ್ 30,2018 ರ ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.ಅವರಿಗೆ 72 ವರ್ಷ ವಯಸ್ಸಾಗಿತ್ತು.
ಜನಾರ್ದನ ಭಂಡಾರಿಯವರು ಮಂಗಳೂರು ವಿಭಾಗದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದರು.ಮೃತರು ಪತ್ನಿ ಶ್ರೀಮತಿ ಪ್ರೇಮಾ, ಪುತ್ರ ಮಂಜುನಾಥ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ದಿವಂಗತ ಜನಾರ್ದನ ಭಂಡಾರಿಯವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ದುಃಖತಪ್ತ ಪತ್ನಿ,ಪುತ್ರ ಹಾಗೂ ಕುಟುಂಬಸ್ಥರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
— ಭಂಡಾರಿವಾರ್ತೆ.