January 18, 2025
WhatsApp Image 2020-12-16 at 2.54.30 PM

ಮಂಗಳೂರು ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2019 – 20 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿಸೆಂಬರ್ 13 ನೇ ಭಾನುವಾರ ಕದ್ರಿ ಮಲ್ಲಿಕಟ್ಟೆಯ ಸುಮಾ ಸದನದಲ್ಲಿ ನಡೆಯಿತು.

ಸೊಸೈಟಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಭಂಡಾರಿ ಕುಳಾಯಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನ ವ್ಯವಸ್ಥಾಪಕ ಶ್ರೀ ಪದ್ಮನಾಭ ಎಂ. ವರದಿ ವಾಚಿಸಿದರು.

ನಿರ್ದೇಶಕ ಭಾಸ್ಕರ್ ಕೆ . ಸಭೆಯ ನೋಟಿಸ್, ಕುಮಾರ್ ಭಂಡಾರಿ ಕಳೆದ ಸಾಲಿನ ನಿರ್ಣಯ ಹಾಗೂ ದಿವಾಕರ ಶಂಭೂರು 2019-20 ರ ಲಾಭ ವಿಂಗಡಣೆಯ ವಿವರಣೆ ಮಂಡಿಸಿದರು.

ಶೇ 9.50% ಡಿವಿಡೆಂಡ್ ಘೋಷಿಸಲಾಯಿತು.

2020 – 21 ನೇ ನೇ ಸಾಲಿನ ಕಾರ್ಯಚಟುವಟಿಕೆ ವಿವರವನ್ನು ನಿರ್ದೇಶಕ ರಾಜಾ ಬಂಟ್ವಾಳ ವಂದಿಸಿದರು . ಸೊಸೈಟಿಗೆ ಸ್ವಂತ ಕಟ್ಟಡ ಹೊಂದುವ ಬಿ.ಸಿ.ರೋಡ್ ಬಂಟ್ವಾಳಕ್ಕೆ ಸ್ಥಳಾಂತರಿಸುವ ಹಾಗೂ ಠೇವಣಾತಿ ಸದಸ್ಯ ಸಾಲ ಸೌಲಭ್ಯ ಹೆಚ್ಚಳದ ಬಗ್ಗೆ ಸಭೆಯಲ್ಲಿ ಘೋಷಿಸಲಾಯಿತು. 2019 – 20 ರಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.

ರಾಜ್ಯ ಪೊಲೀಸ್ ಇಲಾಖೆಗೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಆಯ್ಕೆಯಾಗಿರುವ ಕು॥ ನಿಧಿ ಬಿ. ಎನ್. ಅವರನ್ನು ಸನ್ಮಾನಿಸಲಾಯಿತು.

ಇತ್ತೀಚೆಗೆ ನಿಧನರಾದ ಸೊಸೈಟಿಯ ನಿರ್ದೇಶಕ ಶೇಖರ್ ಭಂಡಾರಿ ಕಾರ್ಕಳ ಹಾಗೂ ಅಗಲಿದ ಇತರ ಸದಸ್ಯರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು .

ಸಂಸ್ಥೆಯು ಕಳೆದ 25 ವರ್ಷಗಳಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಸತತ ಲಾಭ ಗಳಿಕೆಯೊಂದಿಗೆ ಸತತ ಡಿವಿಡೆಂಡ್ ನೀಡಿದ ಹಾಗೂ ಲೆಕ್ಕಪರಿಶೋಧನೆಯು ಸತತ ” ಎ ” ಗ್ರೇಡ್ ಪಡೆದಿರುತ್ತದೆ ಮುಂದಿನ ಸೆಪ್ಟೆಂಬರ್ ನಲ್ಲಿ ಸೊಸೈಟಿಯ ಬೆಳ್ಳಿ ಹಬ್ಬ ಆಚರಿಸುವ ಬಗ್ಗೆ ಚರ್ಚಿಸಲಾಯಿತು.

ನಿರ್ದೇಶಕರಾದ ಭಾಸ್ಕರ ಭಂಡಾರಿ ಸುರತ್ಕಲ್ ರಘುವೀರ ಭಂಡಾರಿ ಹರೀಶ್ ಭಂಡಾರಿ , ಸುಂದರ ಭಂಡಾರಿ ರಾಯಿ , ರವೀಂದ್ರನಾಥ ಉಳ್ಳಾಲ , ಬಿ . ಎಸ್. ಭಂಡಾರಿ , ಅಶೋಕ್ ಜಿ . ಬೊಂದೆಲ್ , ಶಶಿಧರ ಕಾರ್ಕಳ , ಶೇಖರ್ ಎಚ್. ಕಾರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು ಉಪಾಧ್ಯಕ್ಷ ರಾಮ ಭಂಡಾರಿ ಎಚ್. ವಂದಿಸಿದರು.

Leave a Reply

Your email address will not be published. Required fields are marked *