ಪೆರ್ಲ ಕಾಟುಕುಕ್ಕೆ ದಿವಂಗತ ಶ್ರೀ ತುಕ್ರ ಭಂಡಾರಿ ಮತ್ತು ಶ್ರೀಮತಿ ದೇವಪ್ಪು ತುಕ್ರ ಭಂಡಾರಿ ದಂಪತಿಯ ಪುತ್ರ ಮಂಗಳೂರು ತಾಲೂಕು ಕದ್ರಿ ನಿವಾಸಿ ಪಿ. ಮಹಾಲಿಂಗ ಭಂಡಾರಿ ಇವರು ಜನವರಿ ತಿಂಗಳ ದಿನಾಂಕ 6 ರಂದು ಸೋಮವಾರ ದಂದು ತನ್ನ ಮನೆಯಲ್ಲಿ ಜಾರಿ ಬಿದ್ದ ಸಂದರ್ಭದಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಭಗವಂತನ ಪಾದ ಸೇರಿದ್ದರು
ಪ್ರಾಥಮಿಕ ಶಿಕ್ಷಣವನ್ನು ಕಾಟುಕುಕ್ಕೆಯಲ್ಲಿ ಪ್ರೌಢ ಶಿಕ್ಷಣ ಪೆರ್ಲದಲ್ಲಿ ಮುಗಿಸಿ ವಿಟ್ಲ ಸತ್ಯ ಶ್ರೀ ಸಾಯಿ ಶಿಕ್ಷಣ ಸಂಸ್ಥೆಯಲ್ಲಿ ಪಿ.ಯು.ಸಿ. ವ್ಯಾಸಂಗ ಮಾಡಿ ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆದ್ದರು.
ತನ್ನ ಇಳಿ ವಯಸ್ಸಿನಿಂದಲೂ ಆಧ್ಯಾತ್ಮಿಕ ಕಡೆ ಹೆಚ್ಚಿನ ಒಲವು ಹೊಂದಿದ ಇವರು ಜ್ಯೋತಿಷ್ಯದ ಬಗ್ಗೆ ಅಗಾಧ ಅಧ್ಯಯನ ಮಾಡಿದ್ದಾರೆ ಶಿಕ್ಷಕರಾಗಿ ಸಿವಿಲ್ ಗುತ್ತಿಗೆದಾರಾಗಿ ವೃತ್ತಿ ಜೀವನ ಮಾಡಿದ್ದಾರೆ ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯಾದ ಬಗ್ಗೆ ಹಲವಾರು ಜನರಿಗೆ ಉಚಿತ ಮಾರ್ಗದರ್ಶನ ನೀಡಿದ್ದಾರೆ ಮಂಗಳೂರು ಕಂಕನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ಥಾಪಕ ದಿನದಿಂದ ಜೀವಿತದ ಕೊನೆಯ ದಿನದ ತನಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು .ದೇಶದ ಹಲವಾರು ಪುಣ್ಯಕ್ಷೇತ್ರಗಳ ಸಂದರ್ಶನ ಮಾಡಿದ್ದಾರೆ ಕದ್ರಿ ಮತ್ತು ಕಾಟು ಕುಕ್ಕೆ ಸುತ್ತಮುತ್ತ ಮಾಸ್ಟರ್ ಮಹಾಲಿಂಗಣ್ಣ ಎಂದೇ ಚಿರ ಪರಿಚಿತರು ಕಚ್ಚೂರು ವಾಣಿ ಮಾಸ ಪತ್ರಿಕೆಯ ಮಾಜಿ ಸಂಪಾದಕ ಶ್ರೀ ಎ.ಕೆ.ಭಂಡಾರಿ ಪಡೀಲ್ ,ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀ ಜನಾರ್ದನ ಭಂಡಾರಿ ಪಡೀಲ್ ಮೂರು ಮಂದಿ ಸಹೋದರರು ಮತ್ತು ಶ್ರೀಮತಿ ಇಂದಿರಾ ಕೋಟೆಕಾರು ಮತ್ತು ಶ್ರೀಮತಿ ಲಲಿತಾ ಕುಂಬ್ಳೆ ಇಬ್ಬರು ಸಹೋದರಿಯರು ಹಾಗೂ ಕುಟುಂಬ ವರ್ಗ ಶಿಕ್ಷಾವರ್ಗವನ್ನು ಹಿತೈಷಿ ಅಭಿಮಾನಿಗಳನ್ನು ಅಗಲಿದ್ದಾರೆ
ಇವರ ಉತ್ತರಕ್ರಿಯು 19.01.2020 ಆದಿತ್ಯವಾರದಂದು ಮಂಗಳೂರು ಕಂಕನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರಗಲಿದೆ ಆಮಂತ್ರಣ ಪತ್ರ ಸಿಗದ ಬಂದು ಮಿತ್ರರು ಇದನ್ನೇ ವೈಯಕ್ತಿಕ ಆಮಂತ್ರಣವೆಂದು ಪರಿಗಣಿಸಿ ಆಗಮಿಸ ಬೇಕಾಗಿ ಹಿರಿಯ ಸಹೋದರ ಶ್ರೀ ಎ.ಕೆ. ಭಂಡಾರಿ
ಭಂಡಾರಿ ವಾರ್ತೆ ಮುಖಾಂತರ ಬಂದು ಮಿತ್ರರಲ್ಲಿ ವಿನಂತಿಸಿದ್ದಾರೆ.
ಭಗವಂತನ ಪಾದ ಸೇರಿದ ಶ್ರೀ. ಪಿ. ಮಹಾಲಿಂಗ ಭಂಡಾರಿಯವರ ಆತ್ಮಕ್ಕೆ ಭಗವಂತನು ಚಿರಕಾಲ ಸುಖ ಶಾಂತಿ ನೆಮ್ಮದಿಯ ಬದುಕನ್ನು ಕಲ್ಪಿಸಿ ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನೆಯ ಮಾತು ಭಂಡಾರಿ ವಾರ್ತೆಯ ನುಡಿನಮನ..